Gandhada Gudi Title Teaser : ಪುನೀತ್ ರಾಜ್‌ಕುಮಾರ್ ಕನಸಿನ ಸಾಕ್ಷ್ಯಚಿತ್ರ ಗಂಧದಗುಡಿ ಟೈಟಲ್ ಟೀಸರ್ ಬಿಡುಗಡೆ; ಇಲ್ಲಿ ವೀಕ್ಷಿಸಿ

ಪುನೀತ್ ರಾಜ್‌ಕುಮಾರ್ ( Puneeth Rajkumar ) ಅವರ ಕನಸಿನ ಚಿತ್ರವನ್ನು ಅವರಿಲ್ಲದೆಯೂ ತೆರೆಗೆ ತರುವ ಪ್ರಯತ್ನದ ಭಾಗವಾಗಿ ಇಂದು ಗಂಧದಗುಡಿ ಟೈಟಲ್ ಟೀಸರ್ (Gandhada Gudi Title Teaser) ಬಿಡುಗಡೆಯಾಗಿದೆ. ಪಿಆರ್‌ಕೆ ಪ್ರೊಡಕ್ಷನ್‌ ಮೂಲಕ ಕರುನಾಡಿನ ಪ್ರಕೃತಿಯ ಅದ್ಭುತ ದೃಶ್ಯವನ್ನು ಅನಾವರಣಗೊಳಿಸಬೇಕೆಂಬ ಕನಸು ಹೊತ್ತಿದ್ದ ಪುನೀತ್ ರಾಜ್‌ಕುಮಾರ್ ಅವರನ್ನು ಸಹ ಈ ಸಾಕ್ಷ್ಯಚಿತ್ರದಲ್ಲಿ ನೋಡಬಹುದು ಎಂಬುದು ಖಚಿತಗೊಂಡಿದೆ. ಪಿಆರ್​ಕೆ ಆಡಿಯೋ’ (PRK Audio) ಮೂಲಕ ಟೀಸರ್‌ನ್ನು ಬಿಡುಗಡೆಗೊಳಿಸಲಾಗಿದೆ. ಅಲ್ಲದೇ ಇಂದು ಪಾರ್ವತಮ್ಮ ರಾಜ್‌ಕುಮಾರ್ ಅವರ ಹುಟ್ಟಿದ ದಿನವು ಸಹ ಆಗಿರುವುದು ವಿಶೇಷ. ಇದೇ ದಿನ ಅಶ್ವಿನಿ ಪುನೀತ್ ರಾಜ್‌ಕುಮಾರ್ ಟೀಸರ್ ಬಿಡುಗಡೆಗೊಳಿಸಿದ್ದಾರೆ. ಅದ್ಭುತವಾಗಿ ಮೂಡಿಬಂದಿರುವ ಟೀಸರ್‌ ಪುನೀತ್ ರಾಜ್‌ಕುಮಾರ್ ಅವರ ಕುರಿತ ಗೌರವವನ್ನು ಇನ್ನಷ್ಟು ಹೆಚ್ಚಿಸುವಂತಿದೆ.

ಅಂದಹಾಗೆ ಗಂಧದಗುಡಿ ಸಾಕ್ಷ್ಯಚಿತ್ರವು ಒಟಿಟಿಗೆ ಸೀಮಿತವಾಗಿರುತ್ತದೆಯೇ ಎಂಬ ಅನುಮಾನವಿತ್ತು. ಆದರೆ ಈಕುರಿತೂ ಸಹ ಸ್ಪಷ್ಟತೆ ಸಿಕ್ಕಿದೆ. 2022ರಲ್ಲಿ ನೇರವಾಗಿ ಚಿತ್ರಮಂದಿರಗಳಿಗೇ ಗಂಧದಗುಡಿ ಸಾಕ್ಷ್ಯಚಿತ್ರ ಲಗ್ಗೆಯಿಡುವುದು ಖಚಿತವಾಗಿದೆ. ಪುನೀತ್ ಅವರ ಕನಸಿನ ಚಿತ್ರವಾಗಿರುವ ಗಂಧದಗುಡಿಯ ಮೂಲಕ ಅಭಿಮಾನಿಗಳಿಗೂ ಕೊಂಚ ಸಮಾಧಾನವಾಗುವಂತಾಗಿದೆ. ಗಂಧದಗುಡಿ ಸಾಕ್ಷ್ಯಚಿತ್ರ ಬಿಡುಗಡೆ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್ ಅವರು ನಮ್ಮೊಡನೆ ಇರಬೇಕಿತ್ತು ಎಂದು ತೀವ್ರವಾಗಿ ಅನಿಸುವಂತಾಗಿದೆ.

ಟೀಸರ್‌ ನೋಡಿದರೆ ಅಭಿಮಾನಿಗಳ ಮನಸಲ್ಲಿ ಪುನೀತ್ ರಾಜ್‌ಕುಮಾರ್ ಅವರ ಕುರಿತು ಇನ್ನಷ್ಟು ಭಾವುಕತೆ ಮೂಡುವಂತಾಗಿದೆ. ಕರ್ನಾಟಕದ ಕಾಡಿನ ಅದ್ಭುತ ಸನ್ನಿವೇಶಗಳನ್ನು, ಪ್ರಾಣಿಪ್ರಪಂಚವನ್ನು ಇಡೀ ಜಗತ್ತಿಗೆ ಪ್ರದರ್ಶಿಸುವಂತಿದೆ ಗಂಧದಗುಡಿ ಟೀಸರ್. ಅಲ್ಲದೇ ಗಂಧದಗುಡಿ ಸಾಕ್ಷ್ಯಚಿತ್ರದಲ್ಲಿ ಡಾ. ರಾಜ್‌ಕುಮಾರ್ ಅವರ ಗಂಧದಗುಡಿ ಚಲನಚಿತ್ರದ ಸಂಭಾಷಣೆಯೂ ಸಹ ಸಾಕ್ಷ್ಯಚಿತ್ರದ ಕೊನೆಯಲ್ಲಿ ಬಳಸಲಾಗಿದೆ. ಇದು ವೀಕ್ಷಕರಲ್ಲಿ ಇನ್ನಷ್ಟು ರೋಮಾಂಚಕತೆಯನ್ನು ಮೂಡಿಸುವಂತಿದೆ.

ಇದನ್ನೂ ಓದಿ: Aresa Dankanaka : ಅರೇಸ ಡಂಕಣಕ ! ಬಿಡುಗಡೆಯಾಗಿದೆ ಪುನೀತ್ ರಾಜ್‌ಕುಮಾರ್ ಹಾಡಿರುವ ಹಾಡು ಕೇಳಿದ್ರಾ?

ಇದನ್ನೂ ಓದಿ : GGVV : ಗರುಡ ಗಮನ, ವೃಷಭ ವಾಹನ : ಶತಮಾನಗಳ ಜಾನಪದ ಹಾಡಿನ ಸಾಂಸ್ಕೃತಿಕ ಮೌಲ್ಯವನ್ನು ಹಿಂಸೆಯ ಸಂಭ್ರಮಕ್ಕೆ ಬದಲಾಯಿಸುವುದು ಸರಿಯೆ?

( Puneeth Rajkumar Documentary Gandhada Gudi Title Teaser released PRK Audio )

Comments are closed.