Rava Rotti Recipe : ರವೆ ಉಪ್ಪಿಟ್ಟು ಬದಲು ರವೆ ರೊಟ್ಟಿ ಟೇಸ್ಟ್ ಮಾಡಿ

ರವೆ ಉಪ್ಪಿಟ್ಟು ಅಂದ್ರೆ ಸಾಕು ಮೂಗು ಮುರಿಯುವವರೇ ಜಾಸ್ತಿ. ಆದರೆ ಎಷ್ಟೇ ರುಚಿಕರವಾಗಿ ಮಾಡಿದ್ರೂ ಕೂಡ ತಿನ್ನುವವರ ಸಂಖ್ಯೆ ಅಷ್ಟಕ್ಕಷ್ಟೆ.ಆದರೆ ರವೆಯಿಂದ ಮಾಡುವ ಉಪ್ಪಿಟ್ಟು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಅಷ್ಟೇ ಅಲ್ಲದೇ ರವೆ ಪದಾರ್ಥವನ್ನು ತಿನ್ನುವುದರಿಂದ ದೇಹಕ್ಕೆ ತಂಪು ಕೂಡ ನೀಡುತ್ತದೆ. ಹಾಗಿದ್ದರೆ ಮನೆಯಲ್ಲಿ ರವೆಯಿಂದ ಮಾಡಿದ ಉಪ್ಪಿಟ್ಟು ತಿನ್ನದೇ ಇದ್ದಾಗ ರವೆಯಿಂದ ರೊಟ್ಟಿ (Rava Rotti Recipe)ಕೂಡ ಮಾಡಬಹುದಾಗಿದೆ. ಅದನ್ನು ಹೇಗೆ ತಯಾರಿಸುವುದು ಎನ್ನುವುದನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿ :

  • ಸಣ್ಣ ರವೆ
  • ಮುಳ್ಳು ಸೌತೆಕಾಯಿ
  • ಬೆಲ್ಲ
  • ತೆಂಗಿನಕಾಯಿ ತುರಿ
  • ಉಪ್ಪು

(Rava Rotti Recipe)ತಯಾರಿಸುವ ವಿಧಾನ :

ಮೊದಲಿಗೆ ಗ್ಯಾಸ್‌ ಆನ್‌ ಮಾಡಿ ಒಂದು ಪಾತ್ರೆಯನ್ನು ಅದರ ಮೇಲೆ ಇಡಬೇಕು. ಪಾತ್ರೆ ಬಿಸಿ ಆದಮೇಲೆ ಒಂದು ಕಪ್‌ ರವೆಯನ್ನು ಹಾಕಿ ಒಂದು ನಿಮಿಷ ಹುರಿದುಕೊಳ್ಳಬೇಕು. ರವೆ ಗರಂ ಆಗುವುದಕ್ಕೆ ಅಷ್ಟೇ ಹುರಿದುಕೊಳ್ಳುವುದಾಗಿದೆ. ನಂತರ ಅದನ್ನು ಒಂದು ಪಾತ್ರೆಗೆ ಹಾಕಿಕೊಳ್ಳಬೇಕು. ನಂತರ ಅದಕ್ಕೆ ಮುಳ್ಳು ಸೌತೆಕಾಯಿಯನ್ನು ಒಂದು ಕಪ್‌ ಆಗುವಷ್ಟು ತುರಿದು ಹಾಕಿಕೊಳ್ಳಬೇಕು. ಆಮೇಲೆ ಪುಡಿ ಮಾಡಿ ಇಟ್ಟುಕೊಂಡ ಬೆಲ್ಲವನ್ನು ಸಿಹಿಗೆ ಬೇಕಾಗುವಷ್ಟು ಹಾಕಿಕೊಳ್ಳಬೇಕು. ಇದಕ್ಕೆ ಬೆಲ್ಲವನ್ನು ಬೆರೆಸಿಕೊಳ್ಳುವುದರಿಂದ ಜಾಸ್ತಿ ಸಿಹಿಯಾಗುವುದಿಲ್ಲ, ರೋಟಿಗೆ ಸೇರಿಸುವುದರಿಂದ ಹೊಸ ತರದ ರುಚಿಯನ್ನು ಕೊಡುತ್ತದೆ. ಕಾಲು ಕಪ್‌ ತೆಂಗಿನತುರಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪುನ್ನು ಬೆರೆಸಿ ಚೆನ್ನಾಗಿ ಕಲಸಿಕೊಳ್ಳಬೇಕು. ನಂತರ ಹಿಟ್ಟನ್ನು ಕಲಸಿಕೊಳ್ಳಲು ಬೇಕಾಗುವಷ್ಟು ನೀರನ್ನು ಹಾಕಿ ಹಿಟ್ಟನ್ನು ಹತ್ತು ನಿಮಿಷಗಳ ಕಾಲ ಮುಚ್ಚಿ ಇಡಬೇಕು.

ಇದನ್ನೂ ಓದಿ : Mushroom Biryani Recipe : ನೀವು ಸಸ್ಯಹಾರಿಗಳೇ ? ಬಿರಿಯಾನಿ ತಿನ್ನಲು ಆಸೆಯೇ ? ಮನೆಯಲ್ಲೇ ಮಾಡಿ ಮಶ್ರೂಮ್‌ ಬಿರಿಯಾನಿ

ಇದನ್ನೂ ಓದಿ : Chicken Kabab : ಮನೆಯಲ್ಲೇ ಮಾಡಿ ಹೋಟೆಲ್‌ಸ್ಟೈಲ್‌ ಗರಿಗರಿ ಚಿಕನ್‌ ಕಬಾಬ್‌

ಇದನ್ನೂ ಓದಿ : Gobhi Pepper Fry : ಗೋಬಿಯ ಈ ಸ್ನ್ಯಾಕ್ಸ್‌ ಸವಿದಿದ್ದೀರಾ; ಗೋಬಿ–ಪೆಪ್ಪರ್‌ ಫ್ರೈ ಹೀಗೆ ಮಾಡಿ

ಹೀಗೆ ಹತ್ತು ನಿಮಿಷ ಅಥವಾ ಸ್ವಲ್ಪ ಜಾಸ್ತಿ ಹೊತ್ತು ಬಿಡುವುದರಿಂದ ರವೆ ನೀರನ್ನು ಚೆನ್ನಾಗಿ ಹೀರಿಕೊಂಡು ಹಿಟ್ಟು ಗಟ್ಟಿಯಾಗಿರುತ್ತದೆ. ಗ್ಯಾಸ್‌ ಆನ್‌ ಮಾಡಿ ಅದರ ಮೇಲೆ ಯಾವುದಾದರೂ ಒಂದು ತವಾವನ್ನು ಇಟ್ಟು ಬಿಸಿ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಎಣ್ಣೆಯನ್ನು ಹಚ್ಚಿ ಒಂದು ಸೌಟ್‌ ಹಿಟ್ಟನ್ನು ತವಾ ಮೇಲೆ ಹಾಕಿ ಕೈಯಲ್ಲಿ ಹರಡಿ ಅಥವಾ ಇದನ್ನು ಬಟರ್‌ ಪೇಪರ್‌ ಮೇಲೆ ಕೈಯಲ್ಲಿ ಹರಡಿ ತವಾ ಮೇಲೆ ಹಾಕಿ ಮೇಲೆ ಸ್ವಲ್ಪ ಎಣ್ಣೆಯನ್ನು ಹಾಕಿ ಮುಚ್ಚಳ ಮುಚ್ಚಿ ಬೇಯಸಬೇಕು. ಹೀಗೆ ರೊಟ್ಟಿಯನ್ನು ಮುಚ್ಚಿದ ಮುಚ್ಚಳವನ್ನು ತೆಗೆದು ಎರಡು ಕಡೆಯಿಂದ ಚೆನ್ನಾಗಿ ಬೇಯಸಬೇಕು. ಈಗ ಚೆನ್ನಾಗಿ ಬೆಂದ ಗರಿಗರಿ ರವೆ ರೊಟ್ಟಿ ತಿನ್ನಲು ರೆಡಿಯಾಗಿರುತ್ತದೆ.

Try rave roti instead of rava uppittu

Comments are closed.