Dubai Hindu Temple : ದುಬೈನಲ್ಲಿ ಹಿಂದೂ ದೇವಾಲಯ ಉದ್ಘಾಟನೆ : ದೇವರ ದರ್ಶನಕ್ಕೆ ಬೇಕು ಅಪಾಯಿಂಟ್‌ಮೆಂಟ್‌

ದುಬೈ : ಅರಬ್‌ ನಾಡಲ್ಲಿ ಮೊಟ್ಟ ಮೊದಲ ಸ್ವತಂತ್ರ ಹಿಂದೂ ದೇವಾಲಯ ನಿರ್ಮಾಣಗೊಂಡಿದ್ದು, ವಿಜಯ ದಶಮಿಗೆ ಒಂದು ದಿನದ ಮೊದಲು ಉದ್ಘಾಟನೆಗೊಂಡಿದೆ. ದುಬೈನ ಜೆಬೆಲ್‌ ಆಲಿಯಲ್ಲಿರುವ ಆರಾಧನಾ ಗ್ರಾಮದಲ್ಲಿ ದೇವಾಲಯ ನಿರ್ಮಾಣಗೊಂಡಿದ್ದು, ಈ ದೇವಾಲಯದಲ್ಲಿ ಹಲವು ಚರ್ಚ್‌ ಹಾಗೂ ಗುರುದ್ವಾರಗಳಿಗೆ. ದುಬೈನಲ್ಲಿ ಹಿಂದೂ ದೇವಾಲಯ (Dubai Hindu Temple) ನಿರ್ಮಾಣವಾಗುವ ಮೂಲಕ ಹಿಂದೂಗಳ ಹಲವು ವರ್ಷದ ಬೇಡಿಕೆ ಈಡೇರಿದಂತಾಗಿದೆ.

ಇದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿರುವ ಅತ್ಯಂತ ಹಳೆಯ ಹಿಂದೂ ದೇವಾಲಯಗಳಲ್ಲಿ (Dubai Hindu Temple) ಒಂದಾಗಿದೆ. ಅಕ್ಟೋಬರ್ 5 ರಿಂದ ದೇವಾಲಯವು ಸಾರ್ವಜನಿಕರ ದರ್ಶನಕ್ಕೆ ತೆರೆದಿರುತ್ತದೆ. ಹಿಂದೂಗಳ ಹಲವು ವರ್ಷದ ಬೇಡಿಕೆಯಂತೆ 2020 ರಲ್ಲಿ ದೇವಾಲಯಕ್ಕೆ ಅಡಿಪಾಯ ಹಾಕಲಾಗಿದ್ದು, ಎರಡು ವರ್ಷಗಳ ಅವಧಿಯಲ್ಲಿ ದೇವಾಲಯ ನಿರ್ಮಾಣಗೊಂಡಿದೆ.

ದುಬೈನ ಹಿಂದೂ ದೇವಾಲಯದಲ್ಲಿ 16 ದೇವತೆಗಳ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಅಲಂಕೃತ ಕಂಬಗಳು, ಮುಂಭಾಗದಲ್ಲಿ ಹಿಂದೂ ಮತ್ತು ಅರೇಬಿಕ್ ಜ್ಯಾಮಿತೀಯ ವಿನ್ಯಾಸಗಳು ಮತ್ತು ಚಾವಣಿಯ ಮೇಲೆ ಗಂಟೆಗಳನ್ನು ಒಳಗೊಂಡಿದೆ. ದೇವಾಲಯದಲ್ಲಿ ಶ್ರೀ ಗುರು ಗ್ರಂಥ ಸಾಹಿಬ್ ಅನ್ನು ಸಹ ಸ್ಥಾಪಿಸಲಾಗಿದೆ. ಸೆಪ್ಟೆಂಬರ್ 1 ರಂದು ಭಕ್ತರದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದೇವತೆಗಳ ವಿಗ್ರಹಗಳನ್ನು ಸ್ಥಾಪಿಸುವ ಮುಖ್ಯ ಸಭಾಂಗಣದಲ್ಲಿ ಕೇಂದ್ರ ಗುಮ್ಮಟದಲ್ಲಿ 3D-ಮುದ್ರಿತ ಗುಲಾಬಿ ಕಮಲವನ್ನು ಸ್ಥಾಪಿಸಲಾಗಿದೆ.

ನಿತ್ಯವೂ 1200 ಭಕ್ತರಿಗೆ ಅವಕಾಶ ನೀಡಲಾಗುತ್ತದೆ. ದೇವಾಲಯದ ಟ್ರಸ್ಟಿ ರಾಜು ಶ್ರಾಫ್ ಅವರು ಮಾಹಿತಿ ನೀಡಿದ್ದಾರೆ. ಅಕ್ಟೋಬರ್ 5 ರ ಮೊದಲು ಭಕ್ತರಿಗೆ ದೇವಸ್ಥಾನದ ಭೇಟಿಗೆ ಅವಕಾಶ ನಿರಾಕರಿಸಲಾಗಿದೆ. ಹೀಗಾಗಿ ಯಾರೂ ಕೂಡ ದೇವಸ್ಥಾನಕ್ಕೆ ಭೇಟಿ ನೀಡಬಾರದು. ಅಕ್ಟೋಬರ್ 5 ರಂದು ದೇವಸ್ಥಾನ ಭಕ್ತರ ದರ್ಶನಕ್ಕೆ ಮುಕ್ತಾವಾಗಿ ಇರಲಿದೆ ಎಂದಿದ್ದಾರೆ.

ಇದನ್ನೂ ಓದಿ : Mysore Palace:ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಮುಕ್ತಾಯ:ನಾಳೆ ಅದ್ಧೂರಿ ಜಂಬೂ ಸವಾರಿ

ಇದನ್ನೂ ಓದಿ : Mysore dasara 2022 :ನಾಡಹಬ್ಬ ದಸರಾಕ್ಕೆ 46 ಸ್ತಬ್ದಚಿತ್ರಗಳು ಸಜ್ಜು : ಅರಮನೆ ನಗರಿಯಲ್ಲಿ ರಾರಾಜಿಸಲಿದೆ ಅಪ್ಪು ಸ್ತಬ್ದಚಿತ್ರ

ದೇವಸ್ಥಾನದಲ್ಲಿ ಭಕ್ತರ ಅನುಕೂಲಕ್ಕಾಗಿ ದೇವಾಲಯದ ಆಡಳಿತವು ತನ್ನ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ QR ಆಧಾರಿತ ಅಪಾಯಿಂಟ್‌ಮೆಂಟ್ ವ್ಯವಸ್ಥೆಯನ್ನು ಸ್ಥಾಪಿಸಿದೆ. ದೇವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಇದು ದಸರಾ ಮತ್ತು ಇತರ ದಿನದಲ್ಲಿ ಬೆಳಿಗ್ಗೆ 6:30 ರಿಂದ ರಾತ್ರಿ 8 ರವರೆಗೆ ತೆರೆದಿರುತ್ತದೆ. ಅಪಾಯಿಂಟ್‌ಮೆಂಟ್‌ ತೆಗೆದುಕೊಂಡಿರುವ ಭಕ್ತರಿಗೆ ಮಾತ್ರವೇ ದೇವರ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಹೀಗಾಗಿ ದುಬೈನ ಹಿಂದೂ ದೇವಾಲಯಕ್ಕೆ ಭೇಟಿ ನೀಡಲು ಮನಸ್ಸಿದ್ರೆ ಮೊದಲು ಅಪಾಯಿಂಟ್‌ಮೆಂಟ್‌ ಪಡೆದುಕೊಳ್ಳಿ.

Dubai Hindu Temple Grand Opening Today: Public Entry, Timings and Other Details

Comments are closed.