Virat Kohli : ಆಗಸ್ಟ್ 27ಕ್ಕೆ 81 ರನ್, ಅಕ್ಟೋಬರ್ 28ಕ್ಕೆ 629 ರನ್; ಹೇಗಿದೆ ನೋಡಿ ಕಿಂಗ್ ಕೊಹ್ಲಿ ಹವಾ!

ಬೆಂಗಳೂರು : (Virat Kohli) ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಕಿಂಗ್. ತಾವು ಯಾಕೆ ಕಿಂಗ್ ಅನ್ನೋದನ್ನು ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್’ನಲ್ಲಿ (T20 World Cup 2022) ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ಪಾಕಿಸ್ತಾನ ವಿರುದ್ಧ 53 ಎಸೆತಗಳಲ್ಲಿ ಅಜೇಯ 82 ರನ್ ಸಿಡಿಸಿ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದ ಕೊಹ್ಲಿ(Virat Kohli), ನೆದರ್ಲೆಂಡ್ಸ್ ವಿರುದ್ಧ 44 ಎಸೆತಗಳಲ್ಲಿ ಅಜೇಯ 62 ರನ್ ಸಿಡಿಸಿದ್ದರು.

ಫಾರ್ಮ್ ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ(Virat Kohli) ಕಳೆದ ಎರಡು ತಿಂಗಳಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಭರ್ಜರಿ ಆಟವಾಡುತ್ತಿದ್ದಾರೆ. ಆಗಸ್ಟ್ 28ರಿಂದ ಅಕ್ಟೋಬರ್ 27ರವರೆಗೆ (ನೆದರ್ಲೆಂಡ್ಸ್ ವಿರುದ್ಧದ ಪಂದ್ಯದವರೆಗೆ) ವಿರಾಟ್ 12 ಇನ್ನಿಂಗ್ಸ್’ಗಳಿಂದ 78.28ರ ಸರಾಸರಿಯಲ್ಲಿ 548 ರನ್ ಕಲೆ ಹಾಕಿದ್ದಾರೆ. ಅದಕ್ಕೂ ಮೊದಲು ಜನವರಿ 1ರಿಂದ ಆಗಸ್ಟ್ 27ರವರೆಗೆ ಆಡಿದ್ದ 4 ಇನ್ನಿಂಗ್ಸ್’ಗಳಿಂದ ವಿರಾಟ್ ಕೇವಲ 81 ರನ್ ಮಾತ್ರ ಗಳಿಸಿದ್ದರು. ಆದ್ರೆ ಏಷ್ಯಾ ಕಪ್ ಟೂರ್ನಿಯಿಂದ ಅಬ್ಬರಿಸಲಾರಂಭಿಸಿದ ಕಿಂಗ್ ಕೊಹ್ಲಿ ಫಾರ್ಮ್ ಕಂಡುಕೊಂಡದ್ದಷ್ಟೇ ಅಲ್ಲ, ಅಫ್ಘಾನಿಸ್ತಾನ ವಿರುದ್ಧ ಅಮೋಘ ಶತಕವನ್ನೂ ಬಾರಿಸಿದ್ದರು.

ಇದನ್ನೂ ಓದಿ : Punith Rajkumar : ಅಪ್ಪು ಜೀವನ ಸಾಧನೆ ಶಾಲಾ ಪಠ್ಯಕ್ಕೆ ಸೇರಿಸಿ : ಸಿಎಂ ಬೊಮ್ಮಾಯಿಗೆ ಅಭಿಮಾನಿಗಳ ಮನವಿ

ಕಳೆದ 8 ಟಿ20 ಇನ್ನಿಂಗ್ಸ್’ಗಳಲ್ಲಿ ವಿರಾಟ್ ಕೊಹ್ಲಿ 98.50 ಸರಾಸರಿಯಲ್ಲಿ 394 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಸೇರಿದಂತೆ ಒಟ್ಟು ಐದು ಅರ್ಧಶತಕಗಳು ಸೇರಿವೆ. ಕಳೆದ ಮೂರು ಟಿ20 ಇನ್ನಿಂಗ್ಸ್’ಗಳಲ್ಲಿ ಕೊಹ್ಲಿ ಅಜೇಯರಾಗಿ ಉಳಿದಿದ್ದಾರೆ.

ಇದನ್ನೂ ಓದಿ : KL Rahul : ದಕ್ಷಿಣ ಆಫ್ರಿಕಾ ವಿರುದ್ಧ ರಾಹುಲ್ ಆಡಲ್ವಾ? ಬಿಗ್ ಅಪ್‌ಡೇಟ್ ಕೊಟ್ಟ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್

2022ರಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಕೊಹ್ಲಿ (Virat Kohli) ಸಾಧನೆ

ಇನ್ನಿಂಗ್ಸ್: 16
ರನ್: 629
ಸರಾಸರಿ: 57.18
100/50: 01/06

ಇದನ್ನೂ ಓದಿ : Social Media : ಸಾಮಾಜಿಕ ಮಾಧ್ಯಮ ಕುಂದುಕೊರತೆ ಮೇಲ್ಮನವಿ ಸಮಿತಿ ಸ್ಥಾಪನೆಗೆ ಮುಂದಾದ ಸರ್ಕಾರ

ಕಾಂಗರೂ ನಾಡಿನಲ್ಲಿ ನಡೆಯುತ್ತಿರುವ ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಆಟ ಪ್ರದರ್ಶಿಸುತ್ತಿರುವ ಕಿಂಗ್ ಕೊಹ್ಲಿ, ಆಡಿರುವ ಎರಡೂ ಪಂದ್ಯಗಳಲ್ಲಿ ಅಜೇಯ ಅರ್ಧಶತಕಗಳನ್ನು ಬಾರಿಸಿದ್ದಾರೆ. ಟಿ20 ವಿಶ್ವಕಪ್’ನಲ್ಲಿ ಅತೀ ಹೆಚ್ಚು ರನ್’ಗಳ ವಿಶ್ವದಾಖಲೆ ನಿರ್ಮಿಸಲು ಕೊಹ್ಲಿಗೆ ಬೇಕಿರುವುದಿನ್ನು ಕೇವಲ 28 ರನ್ ಮಾತ್ರ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಟ್ಟು 21 ಇನ್ನಿಂಗ್ಸ್’ ಗಳನ್ನಾಡಿರುವ ವಿರಾಟ್ ಕೊಹ್ಲಿ, 89.90ರ ಸರಾಸರಿಯಲ್ಲಿ 989 ರನ್ ಗಳಿಸಿದ್ದಾರೆ. , ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ಧನೆ ಟಿ20 ವಿಶ್ವಕಪ್’ನಲ್ಲಿ 31 ಇನ್ನಿಂಗ್ಸ್’ಗಳಿಂದ 1016 ರನ್ ಗಳಿಸಿದ್ದು, ಅತೀ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆ ಜಯವರ್ಧನೆ ಹೆಸರಲ್ಲಿದೆ. ಭಾನುವಾರ ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಲಂಕಾ ದಿಗ್ಗಜನ ದಾಖಲೆ ಮುರಿಯುವ ನಿರೀಕ್ಷೆಯಿದೆ.

(Virat Kohli) Virat Kohli is the king of cricket world. Virat Kohli has once again proved why he is the king in the ongoing T20 World Cup (T20 World Cup 2022) in Australia. Virat Kohli, who scored an unbeaten 82 off 53 balls to give India an exciting win against Pakistan, scored an unbeaten 62 off 44 balls against the Netherlands.

Comments are closed.