Rachita Ram : ಫರ್ಸ್ಟ್ ನೈಟ್ ನಲ್ಲಿ ಏನು ಮಾಡ್ತಾರೇ? ಅದನ್ನೇ ಸಿನಿಮಾದಲ್ಲಿ ಮಾಡಿದ್ದೇವೆ: ರಚಿತಾ ಬೋಲ್ಡ್ ಆನ್ಸರ್

ಸದಾ ಕೆನ್ನೆ ಯಲ್ಲಿ ಗುಳಿ ಬೀಳುವಂತೆ ನಕ್ಕು ಮಾತನಾಡುವ ನಟಿ ರಚಿತಾ ರಾಮ್ ( Rachita Ram ) ಇದೇ ಮೊದಲ ಬಾರಿಗೆ ಮಾಧ್ಯಮಗಳ ಮೇಲೆ ಹರಿಹಾಯ್ದು ಸುದ್ದಿಯಾಗಿದ್ದಾರೆ. ಫರ್ಸ್ಟ್ ನೈಟ್ ನಲ್ಲಿ ಕಪಲ್ಸ್ ಏನು ಮಾಡ್ತಾರೆ ಎಂದು ಪ್ರಶ್ನಿಸುವ ಮೂಲಕ ರಚಿತಾ ರಾಮ್ ಅಚ್ಚರಿ ಮೂಡಿಸಿದ್ದಾರೆ.

ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ ಸದ್ಯ ಚಂದನವನದ ಏಕೈಕ ಅದೃಷ್ಟಶಾಲಿ ನಾಯಕಿ ಎಂಬ ಬಿರುದು ಪಡೆದಿದ್ದಾರೆ. ಇದಕ್ಕೆ ಕಾರಣ ರಚಿತಾ ರಾಮ್ ಕಾಲ್ಗುಣ.‌ ಹೌದು ಇದುವರೆಗೂ ರಚಿತಾ ನಟಿಸಿರುವ ಬಹುತೇಕ ಸಿನಿಮಾ ಗೆದ್ದಿದೆ. ಹೀಗಾಗಿ ಅವಕಾಶಗಳು ರಚಿತಾ ರಾಮ್ ಕಾಲ ಬಳಿ ಬಂದು ನಿಂತಿವೆ.

Rachita Ram in Hot again with Love You racchu
ಲವ್‌ ಯೂ ರಚ್ಚು ಸಿನಿಮಾದಲ್ಲಿ ಅಜಯ್‌ ರಾವ್‌ ಹಾಗೂ ರಚಿತಾ ರಾಮ್

ಆದರೆ ಅವಕಾಶಗಳು ಹಾಗೂ ಸಿನಿಮಾ ಗೆಲುವಿನ ಗತ್ತನ್ನು ತಲೆಗೇರಿಸಿಕೊಳ್ಳದೇ ಸಿಂಪಲ್ ಆಗಿದ್ದ ರಚಿತಾ ರಾಮ್ ಲವ್ ಯೂ ರಚ್ಚು ಸಿನಿಮಾದ ಸುದ್ಧಿಗೋಷ್ಠಿ ವೇಳೆ ಮಾತ್ರ ಕೊಂಚ ರಾಂಗ್ ಆಗಿದ್ದು ಫರ್ಸ್ಟ್ ನೈಟ್ ನಲ್ಲಿ ಏನು ಮಾಡ್ತಾರೆ ಎನ್ನುವ ಮೂಲಕ ನಗೆಪಾಟಿಲಿಗಾಡಿದ್ದಾರೆ.

ಇಷ್ಟಕ್ಕೂ ರಚಿತಾರಾಮ್ ಈ ವಿವಾದದ ಹಿಂದಿನ ಅಸಲಿಯತ್ತು ಬೇರೆ ಇದೆ. ರಚಿತಾ ರಾಮ್ ಆಯ್ ಲವ್ ಯೂ ಸಿನಿಮಾದಲ್ಲಿ ಉಪೇಂದ್ರ ಜೊತೆ ಬೋಲ್ಡ್ ಹಾಡೊಂದರಲ್ಲಿ ಕಾಣಿಸಿ ಕೊಂಡಿದ್ದರು. ಈ ಹಾಡು ತೀರಾ ಅಶ್ಲೀಲವಾಗಿದೆ ಎಂಬ‌ ಮಾತು ಕೇಳಿ ಬಂದಿತ್ತು. ಈ ವೇಳೆ ಕಣ್ಣೀರಿಟ್ಟಿದ್ದ ರಚಿತಾ ರಾಮ್, ಇನ್ಮುಂದೆ ಇಂಥಹ ಬೋಲ್ಡ್ ಪಾತ್ರಗಳಲ್ಲಿ ನಟಿಸೋದಿಲ್ಲ ಎಂದಿದ್ದರು. ಇದೀಗ‌ ಮತ್ತೆ ಲವ್ ಯೂ ರಚ್ಚು ಸಿನಿಮಾದಲ್ಲಿ ಮತ್ತೆ ಹಾಸಿಗೆ ಸೀನ್ ನಲ್ಲಿ ಮೈಚಳಿ ಬಿಟ್ಟು ಕಾಣಿಸಿಕೊಂಡಿದ್ದಾರೆ.

ಈ ಬಗ್ಗೆ ಪತ್ರಕರ್ತರು ಸುದ್ದಿ ಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ. ಅದಕ್ಕೆ ಸಖತ್ ರಾಂಗ್ ಅದಂತೆ ಉತ್ತರಿಸಿದ ರಚಿತಾ ರಾಮ್, ಅಂತಹ ಬೋಲ್ಡ್ ಪಾತ್ರ ಮಾಡೋದಿಲ್ಲ ಎಂದಿದ್ದೆ. ಈಗ ಪಾತ್ರ ಮಾಡಿದ್ದೇನೆ ಎಂದ ಮೇಲೆ ಅದರಲ್ಲಿ ಏನೋ ಅಂತಹ ಪ್ರಮುಖವಾದ ಅಂಶ ಇರಬೇಕೆಂದು ಅರ್ಥ. ಅದು ನಿಮಗೆ ಸಿನಿಮಾ ನೋಡಿದ ಮೇಲೆ ಅರ್ಥವಾಗುತ್ತದೆ ಎಂದಿದ್ದಾರೆ.

ಮಾತ್ರವಲ್ಲ ಮದುವೆಯಾದ ಬಳಿಕ ಫರ್ಸ್ಟ್ ನೈಟ್ ನಲ್ಲಿ ದಂಪತಿ ಏನು ಮಾಡ್ತಾರೆ ? ಅದನ್ನೇ ನಾವು ಮಾಡಿದ್ದೇವೆ. ಆದರೆ ಅಷ್ಟು ಡಿಟೇಲ್ಸ್ ಅಲ್ಲಿ ಅಲ್ಲ. ಪ್ರಾರಂಭದ ಕೆಲವು ಸ್ಟೆಪ್ ಮಾಡಿದ್ದೇವೆ ಎಂದು ಬೋಲ್ಡ್ ಆನ್ಸರ್ ನೀಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದೆ.

https://www.youtube.com/watch?v=h9n4Oigbj-E

ಇದನ್ನೂ ಓದಿ : ನಿಕ್ಕಿ ಮೈಮಾಟಕ್ಕೆ ಮನಸೋತ ಫ್ಯಾನ್ಸ್: ಸೋಷಿಯಲ್ ಮೀಡಿಯಾದಲ್ಲಿ ಕಾಂಚನಾ ಬೆಡಗಿ ಹವಾ

ಇದನ್ನೂ ಓದಿ : ಮತ್ತೊಮ್ಮೆ ಮೈಚಳಿ ಬಿಟ್ಟ ಗುಳಿಕೆನ್ನೆ ಚೆಲುವೆ: ಲವ್ ಯೂ ರಚ್ಚು ಪೋಟೋ ವೈರಲ್

( Rachitha Ram Asked Question About What Will Do newly Married Couple first Night )

Comments are closed.