excessive smartphone use :ಅತಿಯಾದ ಸ್ಮಾರ್ಟ್​ಫೋನ್​ ಬಳಕೆಯಿಂದ ಆತ್ಮಹತ್ಯೆ ಯೋಚನೆ : ಅಧ್ಯಯನ

excessive smartphone use : ಮಕ್ಕಳಿಲ್ಲದ ಮನೆಯೇ ಇಲ್ಲ ಎಂಬ ಕಾಲವೊಂದಿತ್ತು. ಆದರೆ ಇದೀಗ ಸ್ಮಾರ್ಟ್​ಫೋನ್​ಗಳಿಲ್ಲದ ಮನೆಯೇ ಇಲ್ಲ ಎಂಬಂತೆ ಆಗಿದೆ. ಯಾರ ಬಳಿ ನೋಡಿದರೂ ಈಗ ಸ್ಮಾರ್ಟ್ ಫೋನ್​ ಇರುತ್ತೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರೂ ಸ್ಮಾರ್ಟ್ ಫೋನ್​ಗಳನ್ನು ಬಳಕೆ ಮಾಡುತ್ತಾರೆ. ಸ್ಮಾರ್ಟ್​ಫೋನ್​ಗಳ ಚಟಕ್ಕೆ ಬಿದ್ದಿರುವ ಅನೇಕರು ತಮ್ಮ ಕುಟುಂಬಗಳಿಕೆ ಸಮಯವನ್ನು ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಅಲ್ಲದೇ ಸೈಪಿಯನ್​ ಲ್ಯಾಬ್​ ಸ್ಮಾರ್ಟ್​ ಫೋನ್​ಗಳ ಕುರಿತಂತೆ ಹೊಸ ಅಧ್ಯಯನವೊಂದನ್ನು ಮಾಡಿದ್ದು ಇದರಲ್ಲಿ ಬೆಚ್ಚಿ ಬೀಳಿಸುವ ಅಂಶಗಳು ಬೆಳಕಿಗೆ ಬಂದಿವೆ.


ಈಗಂತೂ ನಿಮಗೆ ಸ್ಮಾರ್ಟ್​ ಫೋನ್​ಗಳನ್ನು ಬಳಕೆ ಮಾಡದೇ ಇರುವವರು ಸಿಗೋಕೆ ಸಾಧ್ಯವೇ ಇಲ್ಲ. ಅಷ್ಟರ ಮಟ್ಟಿಗೆ ಪ್ರತಿಯೊಬ್ಬರು ಸ್ಮಾರ್ಟ್ ಫೋನ್​ಗಳ ದಾಸರಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ಹದಿಹರೆಯದವರಿಗೆ ಮೊಬೈಲ್​ ಬಿಟ್ಟರೆ ಜಗತ್ತೇ ಇಲ್ಲ ಎಂಬಂತಾಗಿದೆ. ಸೈಪಿಯನ್​ ಲ್ಯಾಬ್​ ನಡೆಸಿದ ಅಧ್ಯಯನದಲ್ಲಿ 18 ರಿಂದ 24 ವರ್ಷದವರಲ್ಲಿ ಮಾನಸಿಕ ಆರೋಗ್ಯವನ್ನು ಕೆಡಿಸುವಲ್ಲಿ ಸ್ಮಾರ್ಟ್​ ಫೋನ್​ಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿದು ಬಂದಿದೆ.


ಈ ಮೊದಲು ಮಕ್ಕಳು 18 ವರ್ಷ ಪ್ರಾಯಕ್ಕೆ ಬರುವ ವೇಳೆಗೆ ತಮ್ಮ ಕುಟುಂಬಸ್ಥರು ಹಾಗೂ ಆಪ್ತರ ಜೊತೆಯಲ್ಲಿ ಏನಿಲ್ಲವೆಂದರೂ 15 ರಿಂದ 18 ಸಾವಿರ ಗಂಟೆಗಳನ್ನು ಕಳೆಯುತ್ತಿದ್ದರಂತೆ. ಆದರೆ ಇದೀಗ ಸ್ಮಾರ್ಟ್​ ಫೋನ್​ಗಳ ಬಳಕೆ ಹೆಚ್ಚಾದ ಮೇಲೆ ಈ ಸಮಯವು 5 ಸಾವಿರ ಗಂಟೆಗಳಿಗೆ ಇಳಿಕೆಯಾಗಿದೆ ಎಂಬ ಬೆಚ್ಚಿ ಬೀಳಿಸುವ ಅಂಶವು ಅಧ್ಯಯನದಲ್ಲಿ ಬಯಲಾಗಿದೆ.


ಈ ಕುರಿತು ಮಾತನಾಡಿದ ಸೈಪಿಯನ್ ಲ್ಯಾಬ್​ನ ವಿಜ್ಞಾನಿ ತಾರಾ ತ್ಯಾಗರಾಜನ್​, ಸ್ಮಾರ್ಟ್ ಫೋನ್​ಗಳನ್ನು ಅತಿಯಾಗಿ ಬಳಕೆ ಮಾಡುವವರಲ್ಲಿ ಮಾನಸಿಕ ಆರೋಗ್ಯ ಹದಗೆಡುತ್ತಿದೆ. ಆತ್ಮಹತ್ಯೆಯಂತಹ ಯೋಚನೆಗಳು ಇವರ ತಲೆಯಲ್ಲಿ ಬರುತ್ತಿದೆ. ಸ್ಮಾರ್ಟ್​ ಫೋನ್​ಗಳು ಬಂದ ಬಳಿಕ ಜನರಿಗೆ ಮುಖಕ್ಕೆ ಮುಖ ಕೊಟ್ಟು ಮಾತನಾಡಲೇ ಆಗುತ್ತಿಲ್ಲ. ಜನರು ಸಂವಹನ ನಡೆಸುವುದನ್ನೇ ಮರೆಯುತ್ತಿದ್ದಾರೆ. ಹೀಗಾಗಿ ಈಗಿನ ಯುವಜನತೆಗೆ ಸಮಾಜದೊಂದಿಗೆ ಸಂಬಂಧ ಬೆಸೆದುಕೊಳ್ಳಲು ವಿಫಲವಾಗುತ್ತಿದೆ. ಇದರಿಂದ ಯುವಕರಲ್ಲಿ ಆತ್ಮಹತ್ಯೆಯಂತಹ ಗಂಭೀರ ಯೋಚನೆಗಳು ಬರುತ್ತಿವೆ ಎಂದು ಹೇಳಿದರು.

ಇದನ್ನು ಓದಿ : Rashmika Mandanna : ಸ್ನೇಹಿತೆಯ ಮದುವೆಯಲ್ಲಿ ರಶ್ಮಿಕಾ ಮಿಂಚಿಂಗ್​​ : ಕೊಡವರ ಶೈಲಿಯ ಸೀರೆ ಧರಿಸಿದ ಕಿರಿಕ್​ ಬೆಡಗಿ

ಇದನ್ನೂ ಓದಿ : Andrew Symonds Dies : ಆಸ್ಟ್ರೇಲಿಯಾದ ಕ್ರಿಕೆಟ್‌ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ನಿಧನ

Impact on mental health with excessive smartphone use

Comments are closed.