Mitchell Starc : ಅಪ್ಪ-ಮಗನನ್ನು ಔಟ್ ಮಾಡಿ ವಿಶಿಷ್ಠ ದಾಖಲೆ ಬರೆದ ಮಿಚೆಲ್ ಸ್ಟಾರ್ಕ್

ಪರ್ತ್: ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ (Mitchell Starc) ಟೆಸ್ಟ್ ಕ್ರಿಕೆಟ್’ನಲ್ಲಿ ಅಪ್ಪ-ಮಗನನ್ನು ಔಟ್ ಮಾಡಿದ ವಿಶಿಷ್ಠ ದಾಖಲೆ ಬರೆದಿದ್ದಾರೆ. ಗಬ್ಬಾ ಮೈದಾನದಲ್ಲಿ ವೆಸ್ಟ್ ಇಂಡೀಸ್ (Australia Vs West Indies test match) ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ವೇಗಿ ಮಿಚೆಲ್ ಸ್ಟಾರ್ಕ್ ಈ ಸಾಧನೆ ಮಾಡಿದ್ದಾರೆ. ಪಂದ್ಯದ ನಾಲ್ಕನೇ ದಿನವಾದ ಶನಿವಾರ ಮಿಚೆಲ್ ಸ್ಟಾರ್ಕ್, ವಿಂಡೀಸ್’ನ ಯುವ ವೆಸ್ಟ್ ಇಂಡೀಸ್ ತಂಡದ ಯುವ ಎಡಗೈ ಆರಂಭಿಕ ಬ್ಯಾಟ್ಸ್’ಮನ್ ತಜೆನರೈನ್ ಚಂದ್ರಪಾಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.

ಅಂದ ಹಾಗೆ ತಜೆನರೈನ್ ಚಂದ್ರಪಾಲ್, ವಿಂಡೀಸ್ ದಿಗ್ಗಜ ಶಿವನರೈನ್ ಚಂದ್ರಪಾಲ್ ಅವರ ಪುತ್ರ. ಆಸ್ಟ್ರೇಲಿಯಾ ವಿರುದ್ಧದ ಪರ್ತ್ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿರುವ ಜ್ಯೂನಿಯರ್ ಚಂದ್ರಪಾಲ್ ಪ್ರಥಮ ಇನ್ನಿಂಗ್ಸ್’ನಲ್ಲಿ 51 ರನ್ ಸಿಡಿಸಿ ಮಿಂಚಿದ್ದರು. 2ನೇ ಇನ್ನಿಂಗ್ಸ್’ನಲ್ಲಿ 45 ರನ್ ಗಳಿಸಿದ್ದ ವೇಳೆ ಮಿಚೆಲ್ ಸ್ಟಾರ್ಕ್ ಅವರ ಭರ್ಜರಿ ಯಾರ್ಕರ್’ಗೆ ಕ್ಲೀನ್ ಬೌಲ್ಡಾದರು.

ವಿಶೇಷ ಏನೆಂದರೆ ತಜೆನರೈನ್ ಚಂದ್ರಪಾಲ್ ಅವರ ತಂದೆ ಶಿವನರೈನ್ ಚಂದ್ರಪಾಲ್ ಅವರನ್ನು ಮಿಚೆಲ್ ಸ್ಟಾರ್ಕ್ 10 ವರ್ಷಗಳ ಹಿಂದೆ ಔಟ್ ಮಾಡಿದ್ದರು. 2012ರ ಏಪ್ರಿಲ್ 25ರಂದು ಟೆಸ್ಟ್ ಪಂದ್ಯವೊಂದರಲ್ಲಿ ಸೀನಿಯರ್ ಚಂದ್ರಪಾಲ್, ಸ್ಟಾರ್ಕ್ ಬೌಲಿಂಗ್’ನಲ್ಲಿ ಔಟಾಗಿದ್ದರು. ಹೀಗೆ ಟೆಸ್ಟ್ ಕ್ರಿಕೆಟ್’ನಲ್ಲಿ ಅಪ್ಪ-ಮಗ ಜೋಡಿಯ ವಿಕೆಟ್ ಕಬಳಿಸಿ ವಿಶೇಷ ದಾಖಲೆಗೆ ಮಿಚೆಲ್ ಸ್ಟಾರ್ಕ್ ಪಾತ್ರರಾಗಿದ್ದಾರೆ.

ಟೆಸ್ಟ್ ಕ್ರಿಕೆಟ್’ನಲ್ಲಿ ಅಪ್ಪ-ಮಗ ಜೋಡಿಯ ವಿಕೆಟ್ ಪಡೆದ ಜಗತ್ತಿನ ಮೂರನೇ ಬೌಲರ್ ಮಿಚೆಲ್ ಸ್ಟಾರ್ಕ್. ಈ ಹಿಂದೆ ಇಂಗ್ಲೆಂಡ್’ನ ದಿಗ್ಗಜ ಆಲ್ರೌಂಡರ್ ಇಯಾನ್ ಬಾಥಂ ಮತ್ತು ಪಾಕಿಸ್ತಾನದ ದಿಗ್ಗಜ ವೇಗದ ಬೌಲರ್ ವಸೀಮ್ ಅಕ್ರಮ್ ಈ ಸಾಧನೆ ಮಾಡಿದ್ದಾರೆ.

Mitchell Starc : ಟೆಸ್ಟ್ ಕ್ರಿಕೆಟ್’ನಲ್ಲಿ ಅಪ್ಪ-ಮಗನನ್ನು ಔಟ್ ಮಾಡಿದ ಬೌಲರ್’ಗಳು

ಇಯಾನ್ ಬಾಥಂ (ಇಂಗ್ಲೆಂಡ್): ಲ್ಯಾನ್ಸ್ ಕೇರ್ನ್ಸ್/ಕ್ರಿಸ್ ಕೇರ್ನ್ಸ್ (ನ್ಯೂಜಿಲೆಂಡ್)
ವಸೀಮ್ ಅಕ್ರಮ್ (ಪಾಕಿಸ್ತಾನ): ಲ್ಯಾನ್ಸ್ ಕೇರ್ನ್ಸ್/ಕ್ರಿಸ್ ಕೇರ್ನ್ಸ್ (ನ್ಯೂಜಿಲೆಂಡ್)
ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ): ಶಿವನರೈನ್ ಚಂದ್ರಪಾಲ್/ತಜೆನರೈನ್ ಚಂದ್ರಪಾಲ್

ಇದನ್ನೂ ಓದಿ : Ricky Ponting: ‘ನನ್ನ ಜೀವನದ ಅತ್ಯಂತ ಭಯಾನಕ ಕ್ಷಣ’; ಎದೆನೋವಿನಿಂದ ಚೇತರಿಸಿಕೊಂಡ ಬಳಿಕ ರಿಕಿ ಪಾಂಟಿಂಗ್ ಅನುಭವ ಬಿಚ್ಚಿಟ್ಟಿದ್ದು ಹೀಗೆ ..

ಇದನ್ನೂ ಓದಿ : IPLಗೆ ನಿವೃತ್ತಿ ಘೋಷಿಸಿದ ಡ್ವೇನ್ ಬ್ರಾವೋ : ಬೌಲಿಂಗ್ ಕೋಚ್ ಆಗಿ ನೇಮಿಸಿದ CSK

Mitchell Starc Dismissed Father-Son Duo in Test Cricket Australia Vs West Indies test match

Comments are closed.