Home Remedies for Fever : ಜ್ವರ ಬಂದಾಗ ಈ ನಾಲ್ಕು ಮನೆಮದ್ದನ್ನು ತಪ್ಪದೇ ಬಳಸಿ

ಸಾಮಾನ್ಯವಾಗಿ ಹವಾಮಾನ ಬದಲಾವಣೆಯಿಂದಾಗಿ ನಮ್ಮ ದೇಹದ ಆರೋಗ್ಯದಲ್ಲಿ ಕೂಡ ಬದಲಾವಣೆ ಆಗುತ್ತಾ ಇರುತ್ತದೆ. (Home Remedies for Fever)ವಾತಾವರಣ ಬದಲಾವಣೆಯಿಂದಾಗಿ ಹೆಚ್ಚಾಗಿ ಶೀತ, ಜ್ವರದಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ. ಶೀತ, ಜ್ವರದ ಪ್ರಾರಂಭದಲ್ಲಿ ಆಸ್ಪತ್ರೆಗಳಿಗೆ ಹೋಗುವ ಬದಲು ಮನೆಯಲ್ಲಿಯೇ ಕೆಲವು ಮನೆಮದ್ದುಗಳ ಮೂಲಕ ಯಾವುದೇ ರೀತಿಯ ಅಡ್ಡ ಪರಿಣಾಮವಿಲ್ಲದೇ ಸಂಪೂರ್ಣ ಗುಣಮುಖರಾಗಬಹುದಾಗಿದೆ. ಹಾಗಾದರೆ ಆ ಮನೆಮದ್ದುಗಳನ್ನು ತಯಾರಿಸುವ ವಿಧಾನವನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿ :
ನೀರು
ತುಳಸಿ ಎಲೆ
ಒಣ ಶುಂಠಿ ಪುಡಿ
ಕೆಂಪು ಕಲ್ಲುಸಕ್ಕರೆ

ತಯಾರಿಸುವ ವಿಧಾನ :
ಮೊದಲಿಗೆ ಒಂದು ಪಾತ್ರೆಗೆ ಒಂದು ಲೋಟ ನೀರು, ಹತ್ತರಿಂದ ಹನ್ನೆರಡು ತುಳಸಿ ಎಲೆ ಮತ್ತು ಅರ್ಧ ಚಮಚ ಒಣ ಶುಂಠಿ ಪುಡಿಯನ್ನು ಹಾಕಿ ಒಂದು ಕುದಿ ಬರುವವರೆಗೂ ದೊಡ್ಡ ಉರಿಯಲ್ಲಿ ಕುದಿಸಬೇಕು. ನಂತರ ಮಧ್ಯಮ ಉರಿಯಲ್ಲಿ ಐದು ನಿಮಿಷಗಳವರೆಗೆ ಕುದಿಸಬೇಕು. ನಂತರ ಕೊನೆಯಲಿ ಸ್ವಲ್ಪ ಕೆಂಪು ಕಲ್ಲು ಸಕ್ಕರೆಯನ್ನು ಹಾಕಿ ಕುದಿಸಬೇಕು. ನಂತರ ಒಂದು ಲೋಟಕ್ಕೆ ಸೊಸಿಕೊಂಡು ಸ್ವಲ್ಪ ಬಿಸಿ ಆರಸಿಕೊಂಡು ಕುಡಿಯಬೇಕು. ಇದನ್ನು ಜ್ವರ ಬಂದಾಗ ಮೂರು ಹೊತ್ತು ಮಾಡಿ ಕುಡಿಯಬೇಕು.

ಬೇಕಾಗುವ ಸಾಮಾಗ್ರಿ :
ನೀರು
ಧನ್ಯಕಾಳು
ಕೆಂಪು ಕಲ್ಲುಸಕ್ಕರೆ
ಹಾಲು

ತಯಾರಿಸುವ ವಿಧಾನ :
ಒಂದು ಪಾತ್ರೆಗೆ ಒಂದು ಲೋಟ ನೀರಿನ ಜೊತೆಗೆ ಧನ್ಯಕಾಳನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಅರ್ಧ ಲೋಟ ಆಗುವರೆಗೂ ನೀರಿನೊಂದಿಗೆ ಧನ್ಯಕಾಳು ಚೆನ್ನಾಗಿ ಕುದಿಸಬೇಕು. ಹೀಗೆ ಚೆನ್ನಾಗಿ ಕುದಿಸಿದ ನಂತರ ಒಂದು ಲೋಟಕ್ಕೆ ಸೊಸಿಕೊಂಡು ಹಾಗೆ ಕುಡಿಯಬಹುದು ಅಥವಾ ಇದಕ್ಕೆ ಸ್ವಲ್ಪ ಕಾಯಿಸಿದ ಹಾಲು ಮತ್ತು ಸ್ವಲ್ಪ ಕೆಂಪು ಸಕ್ಕರೆಯನ್ನು ಸೇರಿಸಿಕೊಂಡು ಕುಡಿಯಬೇಕು. ಇದನ್ನು ಜ್ವರ ಬಂದಾಗ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಮೂರು ಹೊತ್ತು ಮಾಡಿ ಕುಡಿದರೆ ಒಳಗಿನ ಜ್ವರ ಕೂಡ ಸಂಪೂರ್ಣವಾಗಿ ಗುಣವಾಗುತ್ತದೆ.

ಬೇಕಾಗುವ ಸಾಮಾಗ್ರಿ :
ನೀರು
ಒಣದ್ರಾಕ್ಷಿ
ಲಿಂಬೆಹಣ್ಣು

ತಯಾರಿಸುವ ವಿಧಾನ :
ಹತ್ತರಿಂದ ಹದಿನೈದು ಒಣದ್ರಾಕ್ಷಿಯನ್ನು ಒಂದು ಲೋಟ ಬಿಸಿನೀರಿನಲ್ಲಿ ಅರ್ಧಗಂಟೆ ನೆನೆಸಿ ಇಟ್ಟುಕೊಳ್ಳಬೇಕು. ನಂತರ ಒಣದ್ರಾಕ್ಷಿಯನ್ನು ಮಾತ್ರ ತಗೆದು ಒಂದು ಬಟ್ಟಲಿಗೆ ಹಾಕಿ ಚೆನ್ನಾಗಿ ಕಿವುಚಿಕೊಳ್ಳಬೇಕು. ಹೀಗೆ ಕಿವುಚಿಕೊಂಡ ದ್ರಾಕ್ಷಿಯನ್ನು ನೆನೆಸಿ ಇಟ್ಟು ಬಿಸಿನೀರಿಗೆ ಹಾಕಿ ಅರ್ಧ ಲಿಂಬೆಹಣ್ಣಿನ ರಸವನ್ನು ಹಾಕಿ ಮಿಕ್ಸ್‌ ಮಾಡಿ ಕುಡಿಯಬೇಕು. ಇದನ್ನು ಜ್ವರ ಬಂದಾಗ ಮಾತ್ರವಲ್ಲದೇ ಮಲಬದ್ಧತೆ ಸಮಯದಲ್ಲೂ ಉಪಯೋಗಿಸಬಹುದಾಗಿದೆ. ಇದನ್ನು ಪ್ರತಿದಿನ ಮಾಡಿ ಕುಡಿದರೆ ಇನ್ನೂ ಒಳ್ಳೆಯದು. ಒಣದ್ರಾಕ್ಷಿ ಕಫ ಆಗದ ಹಾಗೆ ಕಾಪಡುತ್ತದೆ.

ಬೇಕಾಗುವ ಸಾಮಾಗ್ರಿ :
ತುಳಸಿ ಎಲೆ
ಕಾಳುಮೆಣಸು

ತಯಾರಿಸುವ ವಿಧಾನ :
ಆರು ಕಾಳುಮೆಣಸಿನ ಕಾಳು ಮತ್ತು ಐದರಿಂದ ಆರು ತುಳಸಿಎಲೆಯನ್ನು ಚೆನ್ನಾಗಿ ಜಜ್ಜಿಕೊಳ್ಳಬೇಕು. ಎರಡನ್ನು ಚೆನ್ನಾಗಿ ಜಜ್ಜಿರುವ ಕಾಳುಮೆಣಸು ಮತ್ತು ತುಳಸಿಎಲೆಯನ್ನು ದಿನದ ಎರಡು ಬಾರಿ ಜಗಿದು ತಿನ್ನುವುದರಿಂದ ಜ್ವರದಿಂದ ಮುಕ್ತಿ ಹೊಂದಬಹುದಾಗಿದೆ.

ಇದನ್ನೂ ಓದಿ : Curry Leaves Benefits: ಬಹುಪಯೋಗಿ ಕರಿಬೇವಿನ ಪ್ರಯೋಜನಗಳು ನಿಮಗೆ ಗೊತ್ತಾ…

ಇದನ್ನೂ ಓದಿ : Myositis: ಏನಿದು ಮಯೋಸಿಟಿಸ್‌ ಕಾಯಿಲೆ; ಲಕ್ಷಣ ಮತ್ತು ಕಾರಣಗಳೇನು…

ಇದನ್ನೂ ಓದಿ : Hair Pack : ಕೂದಲು ಉದುರುವ ಸಮಸ್ಯೆ ಕಾಡುತ್ತಿದೆಯೇ ? ಹಾಗಾದರೆ ಮನೆಯಲ್ಲೇ ಮಾಡಿ ಈ ಹೆರ್‌ ಪ್ಯಾಕ್


ಯಾವಾಗಲೂ ಶೀತ, ಜ್ವರ, ಕೆಮ್ಮು ಮತ್ತು ಕಫಕ್ಕೆ ಈ ಮನೆಮದ್ದುಗಳು ಹೆಚ್ಚಿನ ಪರಿಣಾಮದ ಜೊತಗೆ ಬೇಗ ಗುಣಪಡಿಸುತ್ತದೆ. ತುಳಸಿಎಲೆ, ಒಣಶುಂಠಿ, ಕೆಂಪು ಕಲ್ಲುಸಕ್ಕರೆ, ಧನ್ಯಕಾಳು, ಒಣದ್ರಾಕ್ಷಿ, ಕಾಳುಮೆಣಸು ಮತ್ತು ಲಿಂಬೆ ಹಣ್ಣು ಈ ತರಹದ ಕಾಯಿಲೆಗಳಿಗೆ ಉತ್ತಮವಾದ ಮನೆಮದ್ದಾಗಿರುತ್ತದೆ. ಇದರಲ್ಲಿ ಅಧಿಕ ರೋಗನಿರೋಧಕ ಶಕ್ತಿ ಇರುವುದರಿಂದ ಈ ಕಾಯಿಲೆ ವಿರುದ್ದ ಹೋರಾಡಿ ಬೇಗನೆ ಗುಣಪಡಿಸುತ್ತದೆ.

Home Remedies for Fever : Use these four home remedies without fail when you have fever

Comments are closed.