ಸೀಕ್ರೆಟ್ ರೂಮ್‍ನಲ್ಲಿ ರಕ್ಷಿತಾ-ಧ್ರುವಂತ್, ಅಲ್ಲೂ ಕಿತ್ತಾಟ!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋನಲ್ಲಿ ಸೀಕ್ರೆಟ್ ಆಟ ಶುರುವಾಗಿದೆ. ಹೌದು ಬಿಗ್ ಬಾಸ್ ಸ್ಪರ್ಧಿಗಳ ಮುಂದೆ ಎಲಿಮಿನೇಟ್ ಆಗಿ ಹೋಗಿದ್ದ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಸೀಕ್ರೆಟ್ ರೂಮ್ ಸೇರಿದ್ದಾರೆ. ಆದ್ರೆ ಅವರಿಬ್ಬರು ಅಲ್ಲಿಯೂ ಕಿತ್ತಾಡುತ್ತಿದ್ದಾರೆ. ಏನಾಯ್ತು ನೋಡಿ

ನಿನ್ನೆ ಎಲಿಮಿನೇಟ್
ಕಳೆದ ವಾರ ಹಲವು ಸ್ಪರ್ಧಿಗಳು ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಕೊನೆಯಲ್ಲಿ ರಕ್ಷಿತಾ ಶೆಟ್ಟಿ, ಧ್ರುವಂತ್, ರಜತ್ ಉಳಿದಿರುತ್ತಾರೆ. ಆಗ ಸುದೀಪ್ ಅವರು ಒಬ್ಬರು ಸೇಫ್ ಆಗ್ತಾರೆ ಎಂದು ರಜತ್ ಕಿಶನ್ ಹೆಸರು ಹೇಳಿರು. ಅಂತೆಯೇ ರಕ್ಷಿತಾ ಶೆಟ್ಟಿ, ಧ್ರುವಂತ್ ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಿದ್ರು.

ಬೇಸರದಿಂದ ಹೊರ ನಡೆದ ಇಬ್ಬರು
ನಾವು ಎಲಿಮಿನೇಟ್ ಆಗಿದ್ದೇವೆ ಎಂದು ರಕ್ಷಿತಾ ಶೆಟ್ಟಿ, ಧ್ರುವಂತ್ ಬೇಸರದಿಂದ ಎಲ್ಲರಿಗೆ ಬಾಯ್ ಹೇಳಿ ಹೊರಟರು. ಮನೆಯವರು ಸಹ ಇವರು ಎಲಿಮಿನೇಟ್ ಆಗಿದ್ದಾರೆ ಎಂದು ಕೊಂಡಿದ್ದಾರೆ. ಆದ್ರೆ ಇಬ್ಬರು ಸೀಕ್ರೆಟ್ ರೂಮ್ ಸೇರಿದ್ದಾರೆ.

ನನ್ನ ಜನ ನನ್ನ ಬಿಟ್ಟು ಕೊಡಲಿಲ್ಲ
ರಕ್ಷಿತಾ ಮನೆಯಿಂದ ಆಚೆ ಹೋಗಿರುವುದು ಬಗಳ ಜನರಿಗೆ ನೋವುಂಟು ಮಾಡಿತು. ಗಿಲ್ಲಿ ನಟ, ರಘು, ರಜತ್ ತುಂಬಾ ಬೇಸರ ಮಾಡಿಕೊಂಡಿದ್ದರು. ಆಗ ರಜತ್ ರಕ್ಷಿತಾ ಹೋಗಿದ್ದಕ್ಕೆ ಎಲ್ಲರಿಗೂ ಅಳು ಬಂತು. ಧ್ರುವಂತ್ ಹೋಗಿದ್ದು ಏನು ಅನ್ನಿಸಲಿಲ್ಲ ಅಂತಾರೆ. ಅದಕ್ಕೆ ರಕ್ಷಿತಾ ನನ್ನ ಜನ ನನ್ನ ಬಿಟ್ಟು ಕೊಡಲಿಲ್ಲ ಎಂದಿದ್ದಾಳೆ.

ವ್ಯಂಗ್ಯವಾಗಿ ನಕ್ಕ ಧ್ರುವಂತ್
ನಿನ್ನ ಜನ ಮತ್ತು ನೀನು ಇಬ್ಬರು ನಾಟಕ. ಹೇಗೆ ಆನ್ ದಿ ಸ್ಪಾಟ್ ನಾಟಕ ಮಾಡ್ತೀರಾ ಎಂದು ನಾನು ಇಷ್ಟು ದಿನ ನೋಡಿದ್ದೇನೆ ಎಂದು ವ್ಯಂಗ್ಯವಾಗಿ ನಕ್ಕರು.

ಇದನ್ನೂ ಓದಿ: https://kannada.newsnext.live/cinema/double-elimination-dhruvanth-rakshita-evicted-from-the-bb-house/

ಇಬ್ಬರು ಒಂದೇ ರೂಮ್‍ನಲ್ಲಿ ಇರೋದು ಹೇಗೆ?
ಇನ್ನು ರಕ್ಷಿತಾ ಇಬ್ಬರೂ ಒಂದೇ ರೂಮ್‍ನಲ್ಲಿ ಇರುವುದು ಹೇಗೆ ಎಂದು ಬೇಸರ ಮಾಡಿಕೊಂಡಿದ್ದಾರೆ. ರಕ್ಷಿತಾ ಮತ್ತು ಧ್ರುವಂತ್ ಇಬ್ಬರಿಗೂ ಒಬ್ಬರನ್ನು ಕಂಡ್ರೆ ಒಬ್ಬರಿಗೆ ಆಗಲ್ಲ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories