Chikoo Benefits : ಚಿಕ್ಕೂ ಹಣ್ಣಿನ ಈ ಎಲ್ಲಾ ಆರೋಗ್ಯ ಪ್ರಯೋಜನಗಳನ್ನ ತಿಳಿದರೆ ನೀವು ತಿನ್ನದೇ ಇರಲು ಸಾಧ್ಯಾನೇ ಇಲ್ಲ!

ಚಿಕ್ಕೂ ಅಥವಾ ಸಪೋಡಿಲ್ಲಾ(Chikoo Benefits) ಈ ಹಣ್ಣನ್ನು ಎಲ್ಲರೂ ಇಷ್ಟ ಪಡುತ್ತಾರೆ. ಅದರಲ್ಲೂ ಮಕ್ಕಳಿಗೆ ಅದರ ಸಿಹಿ ಮತ್ತು ಪರಿಮಳವೆಂದರೆ ಬಹಳವೇ ಪ್ರೀತಿ. ಪೋಷಕಾಂಶಗಳ ಖಜಾನೆಯಾಗಿರುವ ಚಿಕ್ಕೂವನ್ನು ಸಪೋಟಾ ಎಂದೂ ಕರೆಯುತ್ತಾಋಎ ಇದರಲ್ಲಿಯ ಹೆಚ್ಚಿನ ನಾರಿನಾಂಶವು ಮಲಬದ್ಧತೆಯನ್ನು ನಿವಾರಿಸಲು ಸಹಾಯಮಾಡುತ್ತದೆ. ಇದರಲ್ಲಿಯ ಆಂಟಿಇನ್ಫ್ಲಾಮೆಟರಿ ಗುಣವು ಸಂದುಗಳಲ್ಲಿನ ಊತ ಮತ್ತು ನೋವನ್ನು ಶಮನ ಗೊಳಿಸಲು ಸಹಾಯಮಾಡುತ್ತದೆ. ಪೌಷ್ಟಿಕ ತಜ್ಞೆ ಲೊವ್ನೀತ್‌ ಭಾತ್ರಾ ಅವರು ತಮ್ಮ ಇತ್ತೀಚಿನ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ಈ ಅದ್ಭುತ ಹಣ್ಣಿನ ಅನೇಕ ಪ್ರಯೋಜನಗಳ ಬಗ್ಗೆ ಬರೆದುಕೊಂಡಿದಾರೆ.

  • ಮಲಬದ್ಧತೆಗೆ ಸಹಾಯ ಮಾಡುತ್ತದೆ :
    ಚಿಕ್ಕೂವು ಅಧಿಕ ಪ್ರಮಾಣದ ಆಹಾರದ ಫೈಬರ್‌ ಹೊಂದಿದ್ದು, ಅತ್ಯುತ್ತಮವಾದ ವಿರೇಚಕವಾಗಿದೆ. ಿದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
  • ಕ್ಯಾನ್ಸರ್‌ ತಡೆಯುತ್ತದೆ:
    ಚಿಕ್ಕೂ ಕೊಲನ್‌(ಕರುಳಿನ) ಕ್ಯಾನ್ಸ್‌ರ್‌, ಡೈವರ್ಟಿಕ್ಯುಲೈಟಿಸ್‌ ಮತ್ತು ಕರುಳಿನ ಉರಿಯೂತ ಮುಂತಾದ ಆರೋಗ್ಯದ ಸ್ಥಿತಿಗಳಿಂದ ರಕ್ಷಣೆ ಒದಗಿಸುತ್ತದೆ.
  • ಸಂಧೀ ನೋವು ನಿವಾರಿಸುತ್ತದೆ:
    ಚಿಕ್ಕೂವಿನಲ್ಲಿರುವ ಆಂಟಿ–ಇನ್ಫಾಮೆಟರಿ ಗುಣವು ಜೀರ್ಣಾಂಗ ಸಮಸ್ಯೆಗಳಿಗೆ ಸಹಾಯಾಮಾಡುತ್ತದೆ, ಇದು ಉರಿಯೂತವನ್ನು ಶಮನಗೊಳಿಸಿ ಸಂಧಿಯಲ್ಲಿರುವ ಊತ ಮತ್ತು ನೋವನ್ನು ಕಡಿಮೆ ಮಾಡುತ್ತದೆ.
  • ಕೆಮ್ಮು ಮತ್ತು ಸಾಮಾನ್ಯ ಶೀತ ಕಡಿಮೆ ಮಾಡುತ್ತದೆ:
    ಮೂಗಿನ ನಾಳ ಮತ್ತು ಶ್ವಾಸಕೋಶದಿಂದ ಕಫ ಮತ್ತು ಲೋಳೆಯನ್ನು ತೆಗೆದುಹಾಕುವ ಮೂಲಕ ದೀರ್ಘಕಾಲದ ಕೆಮ್ಮನ್ನು ಚಿಕ್ಕೂ ಕಡಿಮೆ ಮಾಡುತ್ತದೆ.
  • ಮೂಳೆಗಳ ಬಲವರ್ಧನಗೆ ಸಹಾಯ ಮಾಡಿತ್ತದೆ:
    ಮೂಳೆಗಳನ್ನು ಬಲವರ್ಧಿಸಲು ಬೇಕಾಗುವ ಕ್ಯಾಲ್ಸಿಯಂ, ಕಬ್ಬಿಣ, ಮತ್ತು ಫಾಸ್ಪರಸ್ಸ್‌ ಅಧಿಕವಾಗಿದ್ದು ಖನಿಜಾಂಶಗಳ ಖಜಾನೆಯಾಗಿದೆ. ಅಧಿಕ ಕ್ಯಾಲ್ಸಿಯಂ ಪ್ರಮಾಣ ಹೊಂದಿರುವ ಚಿಕ್ಕೂ ಮಿನರಲ್‌ಗಳ ಪವರ್‌ಹೌಸನಂತೆಯೇ ಕೆಲಸ ಮಾಡುತ್ತದೆ.

ಇದನ್ನು ಓದಿ : Mango Rice: ಮಾವಿನಕಾಯಿ ಚಿತ್ರಾನ್ನ ಮಾಡುವುದು ಹೇಗೆ ಗೊತ್ತೇ? ಈ ಸೀಸನ್ನಲ್ಲಿ ನೀವೂ ಮಾಡಿ ನೋಡಿ

ಇದನ್ನೂ ಓದಿ : Papaya Benefits : ಪಪ್ಪಾಯಿ ಎಂಬ ಮಾಜಿಕ್ ಹಣ್ಣು! ಏನೆಲ್ಲಾ ಅದ್ಭುತ ಪ್ರಯೋಜನಗಳನ್ನು ಅಡಗಿಸಿಕೊಂಡಿದೆ ಎಂಬುದು ನಿಮಗೆ ಗೊತ್ತೇ?

(Chikoo Benefits amazing health benefits from bone health to digestion)

Comments are closed.