Rambha and her children injured:ಬಹುಭಾಷಾ ನಟಿ ರಂಭಾ ಕಾರು ಅಪಘಾತ : ನನ್ನ ಮಗಳಿಗಾಗಿ ನೀವೆಲ್ಲ ಪ್ರಾರ್ಥಿಸಿ ಎಂದು ಬೇಡಿದ ನಟಿ

ಕೆನಡಾ : Rambha and her children injured : ಇತ್ತೀಚೆಗಷ್ಟೇ ಕೆನಡಾದಲ್ಲಿ ತನ್ನ ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ನಟಿ ರಂಭಾ ಕಾರು ಅಪಘಾತಕ್ಕೀಡಾದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಪಘಾತದಲ್ಲಿ ಅದೃಷ್ಟವಶಾತ್​ ಎಲ್ಲರೂ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಂಭಾ ಕಿರಿಯ ಪುತ್ರಿ ಸಶಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ ರಂಭಾ ತನ್ನ ಮಗಳಿಗಾಗಿ ಪ್ರಾರ್ಥಿಸುವಂತೆ ಅಭಿಮಾನಿಗಳ ಬಳಿ ಕೇಳಿಕೊಂಡಿದ್ದಾರೆ.


ನಟಿ ರಂಭಾ ತಮ್ಮ ಅಪಘಾತಕ್ಕೀಡಾದ ಕಾರಿನ ಫೋಟೋ ಹಾಗೂ ಆಸ್ಪತ್ರೆಯ ಬೆಡ್​ ಮೇಲಿರುವ ಪುತ್ರಿಯ ಫೋಟೋವನ್ನು ಶೇರ್​ ಮಾಡಿದ್ದಾರೆ . ಶಾಲೆಯಿಂದ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯದಲ್ಲಿ ನಮ್ಮ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ನಾನು ನನ್ನ ಮಕ್ಕಳು ಹಾಗೂ ಅಜ್ಜಿಯೊಂದಿಗೆ ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದೇವೆ. ನನ್ನ ಪುಟ್ಟ ಸಧಾ ಇನ್ನೂ ಆಸ್ಪತ್ರೆಯಲ್ಲಿದ್ದಾಳೆ. ಕೆಟ್ಟ ದಿನ..ಕೆಟ್ಟ ಸಮಯ . ನಮಗೆ ನೀವು ಪ್ರಾರ್ಥಿಸಿ. ನಿಮ್ಮ ಪ್ರಾರ್ಥನೆ ನಮಗೆ ತುಂಬಾನೆ ಅನುಕೂಲಕಾರಿಯಾಗಿದೆ ಎಂದು ಬರೆದುಕೊಂಡಿದ್ದಾರೆ.


ರಂಭಾರ ಈ ಭಾವನಾತ್ಮಕ ಪೋಸ್ಟ್​ಗೆ ನಟಿ ಶ್ರೀದೇವಿ ವಿಜಯ್​ಕುಮಾರ್​ ಪ್ರತಿಕ್ರಿಯಿಸಿದ್ದಾರೆ. ನೀವೆಲ್ಲ ಸುರಕ್ಷಿತರಾಗಿದ್ದೀರಿ ಎಂಬ ಸುದ್ದಿ ಕೇಳಿ ಸಂತೋಷವಾಗಿದೆ. ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಬರೆದಿದ್ದಾರೆ. ನಟ ವಿಜಯ್​ ಕಲಂತ್ರಿ, ಕಾಳಜಿ ವಹಿಸಿ ಎಂದು ಕಮೆಂಟ್​ ಮಾಡಿದ್ದಾರೆ.


90ರ ದಶಕದಲ್ಲಿ ಬಹುಭಾಷಾ ನಟಿ ಎನಿಸಿಕೊಂಡಿದ್ದ ನಟಿ ರಂಭಾ ಕನ್ನಡದ ಸಿನಿಮಾಗಳಲ್ಲಿಯೂ ನಟಿಸಿ ಯಶಸ್ವಿಯಾಗಿದ್ದಾರೆ. ರಜಿನಿಕಾಂತ್​, ಅಜಿತ್​, ವಿಜಯ್​, ರವಿಚಂದ್ರನ್​, ಸಲ್ಮಾನ್​ ಖಾನ್​ , ಚಿರಂಜೀವಿ ಹಾಗೂ ಮಮ್ಮುಟ್ಟಿ ಸೇರಿದಂತೆ ಸಾಕಷ್ಟು ಸ್ಟಾರ್​ ನಟರ ಜೊತೆಯಲ್ಲಿ ನಟಿ ರಂಭಾ ನಟಿಸಿದ್ದಾರೆ. ಕೆನಡಾ ಮೂಲದ ಉದ್ಯಮಿ ಇಂದ್ರನ್​​ ಪತ್ಮನಾಥನ್​ ಜೊತೆಯಲ್ಲಿ 2010ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ರಂಭಾ ಬಳಿಕ ಬಣ್ಣದ ಲೋಕದಿಂದ ದೂರ ಉಳಿದಿದ್ದಾರೆ. ಇಬ್ಬರು ಹೆಣ್ಣು ಹಾಗೂ ಓರ್ವ ಮುದ್ದಿನ ಮಗ ಮತ್ತು ಪತಿಯ ಜೊತೆಯಲ್ಲಿ ನಟಿ ರಂಭಾ ಕೆನಡಾದಲ್ಲಿಯೇ ನೆಲೆಸಿದ್ದಾರೆ.

ಇದನ್ನು ಓದಿ : KL Rahul : ದಕ್ಷಿಣ ಆಫ್ರಿಕಾ ವಿರುದ್ಧ ರಾಹುಲ್ ಆಡಲ್ವಾ? ಬಿಗ್ ಅಪ್‌ಡೇಟ್ ಕೊಟ್ಟ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್

ಇದನ್ನೂ ಓದಿ : ಮೊದಲ ಮದುವೆ ಮುಚ್ಚಿಟ್ಟು 2ನೇ ಮದುವೆಯಾಗಲು ಹೊರಟ ವರನಿಗೆ ಧರ್ಮದೇಟು

Rambha and her children injured in car accident in Canada

Comments are closed.