Jamshed J Irani : ಭಾರತದ ಉಕ್ಕಿನ ಮನುಷ್ಯ ಜಮ್ಶೆಡ್ ಜೆ ಇರಾನಿ ವಿಧಿವಶ

ನವದೆಹಲಿ : (Jamshed J Irani)ಭಾರತದ ಉಕ್ಕಿನ ಮನುಷ್ಯ ಜಮ್ಶೆಡ್ ಜೆ ಇರಾನಿ ಸೋಮವಾರ ತಡರಾತ್ರಿ ವಿಧಿವಶರಾಗಿದ್ದಾರೆ. ಜಮ್ಶೆಡ್ ಜೆ ಇರಾನಿ ಅವರಿಗೆ 86 ವರ್ಷ ವಯಸ್ಸಾಗಿತ್ತು. ಅವರು(Jamshed J Irani) ಜೇಮ್‌ ಶೆಡ್‌ ಪುರದಲ್ಲಿ ನಿಧನರಾಗಿದ್ದಾರೆ.

1936 ರ ಜೂನ್‌ 2 ರಂದು ನಾಗ್ಪುರದಲ್ಲಿ ಜಿಜಿ ಇರಾನಿ ಮತ್ತು ಖೋರ್ಶೆಡ್‌ ಇರಾನಿ ದಂಪತಿ ಮಗನಾಗಿ ಜನಿಸಿದ ಜಮ್ಶೆಡ್ ಜೆ ಇರಾನಿ ಅವರು ಟಾಟಾ ಸ್ಟೀಲ್‌ ಕಂಪನಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಿದ್ದರು. ಇರಾನಿ ಅವರು 43 ವರ್ಷಗಳ ಕಾಲ ಟಾಟಾ ಸ್ಟೀಲ್ ಸಂಸ್ಥೆಯ ಅಭಿವೃದ್ದಿಗಾಗಿ ಶ್ರಮಿಸಿದ್ದಾರೆ. 1990ರ ಆರಂಭದಲ್ಲಿ ಭಾರತದ ಆರ್ಥಿಕ ಉದಾರೀಕರಣದ ಸಮಯದಲ್ಲಿ ಟಾಟಾ ಸ್ಟೀಲ್ ಅನ್ನು ಮುಂಚೂಣಿಯಿಂದ ಮುನ್ನಡೆಸಿದ್ದಾರೆ.

ಇದನ್ನೂ ಓದಿ : Student Gang Raped : ಹೋಟೆಲ್‌ನಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ : ಇಬ್ಬರು ಅರೆಸ್ಟ್‌, ಮೂವರು ಎಸ್ಕೇಪ್

ಇರಾನಿ ಅವರು 1992-93ರಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟದ (CII) ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಟಾಟಾ ಸ್ಟೀಲ್ ಮತ್ತು ಟಾಟಾ ಸನ್ಸ್ ಜೊತೆಗೆ, ಇರಾನಿ ಟಾಟಾ ಮೋಟಾರ್ಸ್ ಮತ್ತು ಟಾಟಾ ಟೆಲಿಸರ್ವೀಸಸ್ ಸೇರಿದಂತೆ ಹಲವಾರು ಟಾಟಾ ಗ್ರೂಪ್ ಕಂಪನಿಗಳ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 1996 ರಲ್ಲಿ ರಾಯಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್‌ನ ಇಂಟರ್ನ್ಯಾಷನಲ್ ಫೆಲೋ ಆಗಿ ನೇಮಕಗೊಂಡಿದ್ದರು. 2004 ರಲ್ಲಿ, ಭಾರತ ಸರ್ಕಾರವು ಇರಾನಿ ಅವರನ್ನು ಭಾರತದ ಹೊಸ ಕಂಪನಿಗಳ ಕಾಯಿದೆಯ ರಚನೆಗೆ ರಚಿಸಿದ ತಜ್ಞರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದೆ. ಜೂನ್ 2011ರಲ್ಲಿ ಟಾಟಾ ಸ್ಟೀಲ್ ಮಂಡಳಿಯ ಮ್ಯಾನೆಜಿಂಗ್‌ ಡೈರೆಕ್ಟರ್‌ ಹುದ್ದೆಯಿಂದ ನಿವೃತ್ತರಾಗಿದ್ದರು.

ಇದನ್ನೂ ಓದಿ : Maharashtra car Accident : ಪಂಡರಾಪುರಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳ ಮೇಲೆ ಹರಿದ ಕಾರು : 7 ಸಾವು, ಹಲವರು ಗಂಭೀರ

ಇದನ್ನೂ ಓದಿ : Two Finger Test : ಅತ್ಯಾಚಾರ ಸಂತ್ರಸ್ತರಿಗೆ ಎರಡು ಬೆರಳು ಪರೀಕ್ಷೆ ನಿಷೇಧ ; ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

1997 ರಲ್ಲಿ ರಾಣಿ ಎಲಿಜಬೆತ್ II ಇಂಡೋ-ಬ್ರಿಟಿಷ್ ವ್ಯಾಪಾರ ಮತ್ತು ಸಹಕಾರಕ್ಕೆ ನೀಡಿದ ಕೊಡುಗೆಗಳಿಗಾಗಿ ಗೌರವ ನೈಟ್‌ಹುಡ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದು ಕೊಂಡಿದ್ದಾರೆ. ಇನ್ನು ಉದ್ಯಮ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಗಳಿಗಾಗಿ ಅವರಿಗೆ 2007 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಲೋಹಶಾಸ್ತ್ರ ಕ್ಷೇತ್ರದಲ್ಲಿ ಅವರ ಸೇವೆಗಳನ್ನು ಗುರುತಿಸಿ ಅವರಿಗೆ 2008 ರಲ್ಲಿ ಭಾರತ ಸರ್ಕಾರದಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ಕೂಡ ನೀಡಲಾಗಿದೆ.

(Jamshed J Irani) India’s man of steel Jamshed J Irani passed away on Monday late night. Jamshed J Irani was 86 years old. He (Jamshed J Irani) passed away at Jamshedpur.

Comments are closed.