Curry Leaves Benefits: ಬಹುಪಯೋಗಿ ಕರಿಬೇವಿನ ಪ್ರಯೋಜನಗಳು ನಿಮಗೆ ಗೊತ್ತಾ…

ಅಡುಗೆಯ ಪರಿಮಳ ಹೆಚ್ಚಿಸುವ ಕರಿಬೇವು (Curry Leaves) ಯಾರಿಗೆ ಗೊತ್ತಿಲ್ಲ? ಎಲ್ಲರ ಅಡುಗೆ ಮನೆಯಲ್ಲಿ ಸಿಗುವ ಬಹಳ ಮುಖ್ಯ ವಸ್ತು ಇದಾಗಿದೆ. ಸಾರು, ಚಟ್ನಿ, ಚಿತ್ರಾನ್ನ ಎಲ್ಲದಕ್ಕೂ ಕರಿಬೇವು ಬೇಕೇ ಬೇಕು. ಕರಿಬೇವು ಅನೇಕ ಪೋಷಕಾಂಶಗಳಿಂದ ಕೂಡಿದೆ. ಇದು ಅಡುಗೆಗೆ ಮಾತ್ರವಲ್ಲ ಚರ್ಮ ಮತ್ತು ಕೂದಲಿಗೂ ಹಲವಾರು ಪ್ರಯೋಜನಗಳನ್ನು (Curry Leaves Benefits) ನೀಡುತ್ತದೆ. ಕೂದಲು ಉದುರವುದನ್ನು ನಿಲ್ಲಿಸುವುದರ ಜೊತೆಗೆ, ಕೂದಲು ಬಿಳಿಯಾಗುವುದನ್ನೂ ನಿಯಂತ್ರಿಸುತ್ತದೆ. ಇದನ್ನು ಚರ್ಮದ ಆರೈಕೆಗೂ ಬಳಸುತ್ತಾರೆ. ಕರಿಬೇವಿನ ಎಲೆಯಲ್ಲಿ ಆಂಟಿಒಕ್ಸಿಡೆಂಟ್‌ ಮತ್ತು ಪ್ರೋಟೀನ್‌ ಅಧಿಕವಾಗಿರುತ್ತದೆ. ಇದು ಫ್ರೀ ರ್‍ಯಾಡಿಕಲ್‌ಗಳಿಂದ ಕೂದಲನ್ನು ರಕ್ಷಿಸುತ್ತದೆ.

ಬಹುಪಯೋಗಿ ಕರಿಬೇವನ್ನು ಉಪಯೋಗಿಸಿವುದು ಹೇಗೆ?

  • ಕರಿಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ. ಆ ನೀರಿನಿಂದ ಕೂದಲನ್ನು ತೊಳೆದರೆ ಕೂದಲು ಉದುರುವು ನಿಲ್ಲುತ್ತದೆ ಮತ್ತು ಬಿಳಿಯಾಗುವುದನ್ನು ಕಡಿಮೆ ಮಾಡುತ್ತದೆ. ಇದರಿಂದ ಬಿಳಿ ಕೂದಲು ಕಪ್ಪಾಗುವುದಿಲ್ಲ ಆದರೆ ಮತ್ತೆ ಬಿಳಿ ಕೂದಲಾಗುವುದನ್ನು ತಡೆಯುತ್ತದೆ.
  • ಎಣ್ಣೆಯ ಜೊತೆಗೆ ಕರಿಬೇವಿನ ಎಲೆಗಳನ್ನು ಸೇರಿಸಿ ಬಳಸಬಹುದು. ಇದಕ್ಕಾಗಿ ಯಾವುದಾದರು ಒಂದು ನೈಸರ್ಗಿಕ ಎಣ್ಣೆ ತೆಗೆದುಕೊಳ್ಳಿ. ತೆಂಗಿನ ಎಣ್ಣೆ ಉತ್ತಮ. ಅದಕ್ಕೆ ಕರಿಬೇವಿನ ಎಲೆಗಳನ್ನು ಹಾಕಿ ಕಾಯಿಸಿ. ಆ ಎಣ್ಣೆಯಿಂದ ನಿಮ್ಮ ಕೂದಲನ್ನು ಮಸಾಜ್‌ ಮಾಡಿ. ಇದರಿಂದ ಕೂದಲಿನ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ.
  • ಕರಿಬೇವಿನ ಎಲೆಗಳನ್ನು ರುಬ್ಬಿ ಪೇಸ್ಟ್‌ ತಯಾರಿಸಿ, ಅದನ್ನು ಕೂದಲಿನ ಮಾಸ್ಕ್‌ ರೀತಿಯಲ್ಲಿ ಬಳಸಬಹುದು. ಇದರ ಜೊತೆಗೆ ಮೆಹೆಂದಿಯ ಎಲೆಗಳನ್ನು ಸೇರಿಸಿ ರುಬ್ಬಿಕೊಳ್ಳಿ. ಅದಕ್ಕೆ ಮೊಸರು ಸೇರಿಸಿ. ಆ ಪೇಸ್ಟ್‌ ಅನ್ನು ಕೂದಲಿಗೆ ಹಚ್ಚಿ. ಇದು ತೆಲೆಹೊಟ್ಟು ಮತ್ತು ತುರಿಕೆಗಳನ್ನು ನಿವಾರಿಸುತ್ತದೆ.
  • ಮೊಡವೆ (ಎಕ್ನಿ) ಸಮಸ್ಯೆಯಗೂ ಕರಿಬೇವು ಉತ್ತಮವಾಗಿದೆ. ಕರಿಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ. ಆ ನೀರನಿಂದ ಮುಖ ತೊಳೆದುಕೊಳ್ಳುವುದರಿಂದ ಮೊಡವೆಗಳು ಕಡಿಮೆಯಾಗುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಆಂಟಿಬ್ಯಾಕ್ಟೀರಿಯಲ್‌ ಗುಣಹೊಂದಿರುವ ಕರಿಬೇವಿನ ಎಲೆಗಳು ಮೊಡವೆಗಳಾಗುವುದನ್ನು ತಡೆಯುತ್ತದೆ.

ಇದನ್ನೂ ಓದಿ : Myositis: ಏನಿದು ಮಯೋಸಿಟಿಸ್‌ ಕಾಯಿಲೆ; ಲಕ್ಷಣ ಮತ್ತು ಕಾರಣಗಳೇನು…

ಇದನ್ನೂ ಓದಿ : hair masks to stop hair fall in winters :ಚಳಿಗಾಲದಲ್ಲಿ ಕೂದಲಿನ ಆರೈಕೆಗೆ ಟ್ರೈ ಮಾಡಿ ಈ ಹೇರ್​ಮಾಸ್ಕ್​​​

(Curry Leaves Benefits for your hair and skin. Know how to use it?)

Comments are closed.