ಕೊನೆಗೂ ಫಿಕ್ಸ್ ಆಯ್ತು ರಾಣಾದಗ್ಗುಬಾಟಿ – ಮಿಹಿಕಾ ಬಜಾಜ್​ ಮದುವೆ

0

ಟಾಲಿವುಡ್ ಖ್ಯಾತ ನಟ ರಾಣಾ ದಗ್ಗುಬಾಟಿ ಹಾಗೂ ಉದ್ಯಮಿ ಮಿಹಿಕಾ ಬಜಾಜ್ ಇತ್ತೀಚಿಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಪ್ರೀತಿಯ ವಿಚಾರವನ್ನು ಖಚಿತಪಡಿಸಿದ್ದರು.

ಲಾಕ್​ಡೌನ್​ ನಡುವಲ್ಲೇ ಇಬ್ಬರ ಕುಟುಂಬಸ್ಥರು ಸೇರಿ ಸರಳವಾಗಿಯೇ ರಾಣಾ ಮತ್ತು ಮಿಹಿಕಾ ನಿಶ್ಚಿತಾರ್ಥ ನೆರವೇರಿಸಿದ್ದರು. ಆದ್ರೆ ಮದುವೆಯಾಗಾ ಅನ್ನೋ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು.

ಈ ಹಿಂದೆ ಎಪ್ರಿಲ್ 22ರಂದು ಹೈದ್ರಾಬಾದ್ ನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ದಗ್ಗುಬಾಟಿ ಮೇ 12ಕ್ಕೆ ಮಿಹಿಕಾರನ್ನು ಮದುವೆಯಾಗೋದಕ್ಕೆ ಹೇಳಿಕೊಂಡಿದ್ದರು. ಆದ್ರೀಗ ಇಬ್ಬರ ಮದುವೆ ಅಗಸ್ಟ್ 8ಕ್ಕೆ ನಡೆಯುವುದು ಫಿಕ್ಸ್ ಆಗಿದೆ.

ಹೈದ್ರಾಬಾದ್ ನಲ್ಲಿ ಮಿಹಿಕಾ ಮತ್ತು ದಗ್ಗುಬಾಟಿ ವಿವಾಹ ನಡೆಯಲಿದೆ ಅನ್ನೋದನ್ನು ಸುರೇಶ್ ಬಾಬು ಖಚಿತ ಪಡಿಸಿದ್ದಾರೆ. ಆದರೆ ಮದುವೆಯಲ್ಲಿ ಎರಡೂ ಕುಟುಂಬಗಳ ಆಪ್ತರು ಮಾತ್ರವೇ ಪಾಲ್ಗೊಳ್ಳಲಿದ್ದಾರೆ.

ಸರಕಾರದ ಮಾರ್ಗಸೂಚಿಯಂತೆಯೇ ಮದುವೆಯಾಗೋದಕ್ಕೆ ದಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಬಜಾಜ್ ರೆಡಿಯಾಗಿದ್ದಾರೆ. ಮದುವೆಯ ಕುರಿತು ರಾಣಾ ದಗ್ಗುಬಾಟಿ ಯಾವುದೇ ಹೇಳಿಕೆಗಳನ್ನೂ ನೀಡಿಲ್ಲ.

ಟಾಲಿವುಡ್ ಖ್ಯಾತ ನಟನಾಗಿರುವ ರಾಣಾ ಸದ್ಯ ವಿರಾಟಪರ್ವ‘ಸಿನಿಮಾದಲ್ಲಿ ನಟಿಸುತ್ತಿದ್ದ ಲಾಕ್ ಡೌನ್ ನಿಂದಾಗಿ ಚಿತ್ರದ ಚಿತ್ರೀಕರಣದ ಸದ್ಯಕ್ಕೆ ಸ್ಥಗಿತವಾಗಿದೆ. ಒಟ್ಟಿನಲ್ಲಿ ಬಹುಕಾಲದ ಪ್ರೇಮಿಗಳ ವಿವಾಹ ಫಿಕ್ಸ್ ಆಗಿರೋದು ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ.

Leave A Reply

Your email address will not be published.