Ranveer Singh: ದೀಪಿಕಾ -ರಣವೀರ್​ ದಾಂಪತ್ಯ ವಿರಸದ ವದಂತಿಗೆ ತೆರೆ ಎಳೆದ ದೀಪ್​ವೀರ್​ ದಂಪತಿ

Ranveer Singh Deepika Padukone :ಕಳೆದ ಕೆಲವು ವಾರಗಳಿಂದ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​​ ಪರಸ್ಪರ ದೂರವಾಗ್ತಿದ್ದಾರಾ ಎಂಬ ವದಂತಿಯು ಕಳೆದ ಅನೇಕ ದಿನಗಳಿಂದ ಚರ್ಚೆಯಲ್ಲಿದೆ. ಈ ನಡುವೆ ರಣವೀರ್​ ಸಿಂಗ್​​ ಹಾಗೂ ದೀಪಿಕಾ ಪಡುಕೋಣೆ ಈ ವದಂತಿಗಳನ್ನು ತಳ್ಳಿ ಹಾಕಿದ್ದಾರೆ. ರಣವೀರ್​ ಸಿಂಗ್​ ತನ್ನ ಪತ್ನಿ ದೀಪಿಕಾ ಪಡುಕೋಣೆಯನ್ನು ನನ್ನ ರಾಣಿ ಎಂದು ಕರೆದಿದ್ದಾರೆ. ಈ ಮೂಲಕ ತಮ್ಮ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಎಲ್ಲಾ ವದಂತಿಗಳನ್ನು ತಳ್ಳಿ ಹಾಕಿದ್ದಾರೆ.

ರಣವೀರ್​ ಸಿಂಗ್​ ಹಾಗೂ ದೀಪಿಕಾ ಪಡುಕೋಣೆ ಬಾಲಿವುಡ್​ನ ಫೇಮಸ್​ ಜೋಡಿಗಳಲ್ಲಿ ಒಬ್ಬರು ಎಂಬುವುದರಲ್ಲಿ ಎರಡು ಮಾತಿಲ್ಲ. ವಿಮಾನ ನಿಲ್ದಾಣಗಳಲ್ಲಿ, ಯಾವುದೇ ಕಾರ್ಯಾಕ್ರಮಗಳಲ್ಲಿ ಹಾಗೂ ರೆಸ್ಟಾರೆಂಟ್​ಗಳಲ್ಲಿ ಈ ಜೋಡಿಗಳನ್ನು ಪದೇ ಪದೇ ಪಪ್ಪರಾಜಿಗಳು ಕಂಡು ಹಿಡಿಯುತ್ತಿದ್ದರು. ಆದರೆ ಇತ್ತೀಚಿಗೆ ಈ ದಂಪತಿ ನಡುವೆ ವೈಮನಸ್ಯ ಮೂಡಿದೆ ಎಂಬ ವದಂತಿ ಎಲ್ಲೆಡೆ ಹರಿದಾಡಿತ್ತು. ಹೀಗಾಗಿ ಇಬ್ಬರು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಅಂತಾ ಸಹ ಹೇಳಲಾಗುತ್ತಿತ್ತು. ಆದರೆ ರಣವೀರ್​ ಸಿಂಗ್​ ಹಾಗೂ ದೀಪಿಕಾ ಪಡುಕೋಣೆ ಸೋಶಿಯಲ್​ ಮೀಡಿಯಾ ವೇದಿಕೆಯಲ್ಲಿ ಈ ವದಂತಿಗಳನ್ನು ಮುಚ್ಚಿ ಹಾಕಿದ್ದಾರೆ.

ಸೋಮವಾರದಂದು ದೀಪಿಕಾ ಪಡುಕೋಣೆಯನ್ನು ಜನಪ್ರಿಯ ಆಭರಣ ಹಾಗೂ ವಾಚ್​ ಬ್ರ್ಯಾಂಡ್​ ತಯಾರಕ ಮಳಿಗೆಯು ತಮ್ಮ ಉತ್ಪನ್ನಗಳಿಗೆ ಅಧಿಕೃತ ಬ್ರ್ಯಾಂಡ್​​ ಎಂದು ಘೋಷಣೆ ಮಾಡಲಾಗಿದೆ. ರಣವೀರ್​ ಸಿಂಗ್​ ಟ್ವಿಟರ್​​ನಲ್ಲಿ ಈ ವಿಚಾರವಾಗಿ ನಮ್ಮ ರಾಣಿ.. ನನಗೆ ಹೆಮ್ಮೆ ಎಂದು ಬರೆಯುವ ಮೂಲಕ ಎಲ್ಲಾ ವದಂತಿಗಳಿಗೆ ಪೂರ್ಣವಿರಾಮ ಇಟ್ಟಿದ್ದಾರೆ.

ರಣವೀರ್​ ಸಿಂಗ್​ ಹಾಗೂ ದೀಪಿಕಾ ಪಡುಕೋಣೆ ಶೀಘ್ರದಲ್ಲಿಯೇ ಸಿನಿಮಾವೊಂದರಲ್ಲಿ ಒಟ್ಟಾಗಿ ನಟಿಸಲಿದ್ದಾರೆ. ಈ ವಿಚಾರವಾಗಿ ಮಾತನಾಡಿದ್ದ ನಟ ರಣವೀರ್​ ಸಿಂಗ್​, ನನ್ನ ಬಳಿ ಮತ್ತೇನಿಲ್ಲ. ಆದರೆ ದೀಪಿಕಾ ಬಗ್ಗೆ ಅಗಾಧವಾದ ಗೌರವ ಹಾಗೂ ಮೆಚ್ಚುಗೆಯಿದೆ. ನಾನು ಆಕೆಯಿಂದ ಸಾಕಷ್ಟು ಕಲಿತಿದ್ದೇನೆ . ನಿಮಗೆಲ್ಲರಿಗೂ ಒಂದು ಸಿಹಿಯಾದ ಸುದ್ದಿ ಕಾದಿದೆ. ನೀವು ಶೀಘ್ರದಲ್ಲಿಯೇ ನಮ್ಮನ್ನು ತೆರೆ ಮೇಲೆ ಒಟ್ಟಾಗಿ ನೋಡಲಿದ್ದೀರಿ. ನನ್ನ ಜೀವನದಲ್ಲಿ ಸಂಭವಿಸಿದ ಅತ್ಯದ್ಭುತ ವಿಚಾರಗಳಲ್ಲಿ ದೀಪಿಕಾ ಕೂಡ ಒಬ್ಬಳು. ನಾವು 2012ರಲ್ಲಿ ಭೇಟಿಯಾಗಿ ಇಂದಿಗೆ ಹತ್ತು ವರ್ಷಗಳು ಪೂರೈಸಿವೆ ಎಂದು ಹೇಳಿದ್ದಾರೆ.ದೀಪಿಕಾ ಹಾಗೂ ರಣವೀರ್​ ಸಿಂಗ್​​ರ ಮುಂದಿನ ಸಿನಿಮಾದ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

ಇದನ್ನು ಓದಿ : KL Rahul Virat Kohli : ದಕ್ಷಿಣ ಆಫ್ರಿಕಾ ವಿರುದ್ಧದ ಟಿ20: ರಾಹುಲ್, ಕೊಹ್ಲಿಗೆ ರೆಸ್ಟ್, ಓಪನರ್ ಯಾರು ?

ಇದನ್ನೂ ಓದಿ : COVID 19 : ಬೆಂಗಳೂರಲ್ಲಿ ಕೋವಿಡ್‌ ಸೋಂಕು ಬಾರೀ ಇಳಿಕೆ : ಒಂದು ಸಾವು

Ranveer Singh shuts down separation rumours with Deepika Padukone again, calls her ‘my queen’

Comments are closed.