Chicken Green Masala Recipe : ಮನೆಯಲ್ಲೇ ಮಾಡಿ ಸ್ಪೇಶನ್‌ ಚಿಕನ್‌ ಗ್ರೀನ್‌ ಮಸಾಲ

ವಾರ ಪೂರ್ತಿ ತರಕಾರಿಯನ್ನು ತಿಂದ ಮಂಸಾಹಾರಿಗಳಿಗೆ ವಾರಕ್ಕೊಮ್ಮೆ ಆದರೂ ಮಂಸಾಹಾರ ಬೇಕು ಅನ್ನಿಸದೇ ಇರದು. ಹೆಚ್ಚಿನವರ ಮನೆಯಲ್ಲಿ ಭಾನುವಾರದ ಬಾಡೂಟವೇ ನಡೆದು ಬಿಡುತ್ತದೆ. ಮೀನು ಹಾಗೂ ಮಾಂಸವನ್ನು ಸೇವಿಸುವವರು ಭಾನುವಾರದಂದು ಹೊಸ ಹೊಸ ತರಹದ ಖಾದ್ಯಗಳನ್ನು ತಯಾರಿಸುತ್ತಾರೆ. ಹಾಗಾದರೆ ಭಾನುವಾರದ ಬಾಡೂಟಕ್ಕೆ ಸ್ಪೇಶನ್‌ (Chicken Green Masala Recipe)ಚಿಕನ್‌ ಗ್ರೀನ್‌ ಮಸಾಲವನ್ನು ಹೇಗೆ ತಯಾರಿಸುವುದು ಎಂದು ತಿಳಿಯೋಣ.

ಬೇಕಾಗುವ ಸಾಮಾಗ್ರಿ :

  • ಚಿಕನ್‌
  • ಟೊಮೊಟೊ
  • ಕಾಳುಮೆಣಸು
  • ಈರುಳ್ಳಿ
  • ಹಸಿಮೆಣಸು
  • ಕೊತ್ತಂಬರಿ ಸೊಪ್ಪು
  • ಪುದಿನ ಸೊಪ್ಪು
  • ಶುಂಠಿ
  • ಬೆಳ್ಳುಳ್ಳಿ
  • ಗರಮಸಾಲ ಚಕ್ಕೆ
  • ಕಾಯಿತುರಿ

(Chicken Green Masala Recipe) ತಯಾರಿಸುವ ವಿಧಾನ:

(ಎರಡು ಕೆಜಿ ಚಿಕನ್‌ ಗ್ರೀನ್ ಮಸಾಲ) ಮೊದಲಿಗೆ ಚಿಕನ್‌ ಗ್ರೀನ್‌ ಮಸಾಲಕ್ಕೆ ಬೇಕಾಗುವ ಮಸಾಲೆಯನ್ನು ತಯಾರಿಸಿಕೊಳ್ಳಬೇಕು. ಒಂದು ಮಿಕ್ಸಿ ಜಾರಿನಲ್ಲಿ ಒಂದು ಬೌಲ್‌ನಷ್ಟು ಕೊತ್ತಂಬರಿ ಸೊಪ್ಪು, ಪುದಿನ ಸೊಪ್ಪು, ಎರಡು ಟೊಮೊಟೊ, ಒಂದು ಟೇಬಲ್‌ ಸ್ಪೂನ್‌ ಕಾಳುಮೆಣಸು, ಒಂದು ಈರುಳ್ಳಿ, ಆರು ಹಸಿಮೆಣಸು(ಖಾರದ ಹದಕ್ಕೆ ಬೇಕಾದಷ್ಟು), ಸ್ವಲ್ಪ ಶುಂಠಿ, ಒಂದೂವರೆ ಹಿಡಿಯಷ್ಟು ಬೆಳ್ಳುಳ್ಳಿ, ಗರಮಸಾಲೆ ಚಕ್ಕೆ, ಒಂದು ಕಪ್‌ನಷ್ಟು ಕಾಯಿತುರಿ ಚಿಟಿಕೆಯಷ್ಟು ಅರಶಿನ ಪುಡಿ ಹಾಗೂ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ಗಟ್ಟಿ ಮಸಾಲೆಯನ್ನು ರುಬ್ಬಿಕೊಳ್ಳಬೇಕು.

ನಂತರ ಒಂದು ಬಾಣಲೆಯಲ್ಲಿ ನಾಲ್ಕು ಟೇಬಲ್‌ ಸ್ಪೂನ್ ಅಡುಗೆ ಎಣ್ಣೆಯನ್ನು ಹಾಕಿ ಅದಕ್ಕೆ‌ ಕಟ್‌ ಮಾಡಿ ಇಟ್ಟುಕೊಂಡಿರುವ ಮೂರು ಈರುಳ್ಳಿಯನ್ನು ಹಾಕಿ ಎರಡು ನಿಮಿಷಗಳ ಕಾಲ ಪ್ರೈ ಮಾಡಬೇಕು. ಆಮೇಲೆ ಮೂರು ಸಣ್ಣಕ್ಕೆ ಕಟ್‌ ಮಾಡಿ ಇಟ್ಟುಕೊಂಡ ಟೊಮೊಟೊವನ್ನು ಹಾಕಿ ಮಿಕ್ಸ್‌ ಮಾಡಿ ಪಾತ್ರೆಯನ್ನು ಎರಡು ನಿಮಿಷಗಳ ಕಾಲ ಮುಚ್ಚಿಇಡಬೇಕು. ನಂತರ ಮುಚ್ಚಿದ ಪಾತ್ರೆಯನ್ನು ತೆಗೆದು ಅದಕ್ಕೆ ಚಿಕನ್‌ ಹಾಗೂ ರುಚಿಗೆ ತಕ್ಕಷ್ಟು ಉಪ್ಪುನ್ನು ಬೆರೆಸಿ ಪಾತ್ರೆಯ ಮುಚ್ಚಿ ಬೇಯಸಬೇಕು.

ಇದನ್ನೂ ಓದಿ : Katta Mitta : ಬಾಯಲ್ಲಿ ನೀರೂರಿಸುತ್ತೆ ಹುಣಸೆ ಹಣ್ಣಿನ “ಕಟ್ಟಾ ಮಿಟ್ಟಾ”

ಇದನ್ನೂ ಓದಿ : Mushroom Biryani Recipe : ನೀವು ಸಸ್ಯಹಾರಿಗಳೇ ? ಬಿರಿಯಾನಿ ತಿನ್ನಲು ಆಸೆಯೇ ? ಮನೆಯಲ್ಲೇ ಮಾಡಿ ಮಶ್ರೂಮ್‌ ಬಿರಿಯಾನಿ

ಇದನ್ನೂ ಓದಿ : banana shawige :ಥಟ್​ ಅಂತಾ ರೆಡಿಯಾಗುತ್ತೆ ಬಾಳೆಹಣ್ಣಿನ ಶ್ಯಾವಿಗೆ

ಹೀಗೆ ಚಿಕನ್‌ ಚೆನ್ನಾಗಿ ಬೆಂದ ಮೇಲೆ ರೆಡಿ ಮಾಡಿ ಇಟ್ಟುಕೊಂಡ ಮಸಾಲೆಯನ್ನು ಹಾಕಿ ಅದರ ಜೊತೆ ನೀರು ಬೇಕಾಗಿದ್ದರೆ ಮಾತ್ರ ಸ್ವಲ್ಪ ಬೆರೆಸಿ 10 ನಿಮಿಷಗಳ ಕಾಲ ಬೇಯಸಬೇಕು. ನಂತರ ಅದಕ್ಕೆ ಸಣ್ಣಕ್ಕೆ ಹಚ್ಚಿ ಇಟ್ಟುಕೊಂಡ ಕೊತ್ತಂಬರಿಸೊಪ್ಪನ್ನು ಹಾಕಿದ್ದರೆ, ಬಿಸಿ ಬಿಸಿ ಸ್ಪೇಶಲ್‌ ಚಿಕನ್‌ ಗ್ರೀನ್‌ ಮಸಾಲಾ ಸವಿಯಲ್ಲೂ ಸಿದ್ದವಾಗುತ್ತದೆ. ಇದನ್ನೂ ವೈಟ್‌ ರೈಸ್‌ ರೊಟ್ಟಿ, ಪರೋಟ ಹಾಗೂ ಚಪಾತಿಗಳ ಜೊತೆ ತಿನ್ನಲು ಬಹಳ ರುಚಿಯಾಗಿರುತ್ತದೆ. ಹಾಗೆ ಗೀ ರೈಸ್‌ ಜೊತೆ ಕೂಡ ಚೆನ್ನಾಗಿ ಇರುತ್ತದೆ.

Homemade Spiced Chicken Green Masala

Comments are closed.