American murder :ಮಗನಿಗೆ ವಿಚ್ಚೇದನ ನೀಡಿಲು ಮುಂದಾದ ಸೊಸೆ, ಅಮೆರಿಕದಲ್ಲಿ ಸೊಸೆಯನ್ನು ಗುಂಡಿಕ್ಕಿ ಹತ್ಯೆಗೈದ ಭಾರತೀಯ ವ್ಯಕ್ತಿ

ನ್ಯೂಯಾರ್ಕ್:(American murder) ಮಗನಿಗೆ ವಿಚ್ಚೇದನ ನೀಡಿದ್ದಾಳೆ ಅನ್ನೋ ಕಾರಣಕ್ಕೆ ಭಾರತೀಯ ಮೂಲದ ವ್ಯಕ್ತಿಯೋರ್ವ ತನ್ನ ಸೊಸೆಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಅಮೇರಿಕಾದ ಕ್ಯಾಲಿಪೋರ್ನಿಯಾದಲ್ಲಿ ನಡೆದಿದೆ. ಆರೋಪಿ ಶೀತಲ್ ಸಿಂಗ್ ದೊಸಾಂಜ್ ಎಂಬಾತನ್ನು ಬಂಧಿಸಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

(American murder)ಗುರುಪ್ರೀತ್‌ ಕೌರ್‌ ಎಂಬಾಕೆಯೇ ಹತ್ಯೆಯಾದವರು.74 ವರ್ಷದ ಶೀತಲ್ ಸಿಂಗ್ ದೊಸಾಂಜ್ ಎಂಬಾತನೇ ಸೊಸೆಯನ್ನು ಹತ್ಯೆ ಮಾಡಿರುವ ವ್ಯಕ್ತಿ. ತನ್ನ ಮಗನಿಗೆ ವಿಚ್ಛೇದನ ನೀಡುತ್ತಾಳೆ ಎಂಬ ಕ್ಷುಲ್ಲಕ ಕಾರಣಕ್ಕೆ ಕೋಪಗೊಂಡು ತನ್ನ ಸೊಸೆ ಗುರುಪ್ರೀತ್‌ ಕೌರ್‌ ಅವರನ್ನು ಆಕೆ ಕೆಲಸ ಮಾಡುತ್ತಿದ್ದ ಸ್ಯಾನ್‌ ಜೋಸ್‌ ವಾಲ್‌ಮಾರ್ಟನ ಪಾರ್ಕಿಂಗ್‌ ಸ್ಥಳದಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಅಮೇರಿಕ ಪೋಲಿಸರು ಸೀತಲ್‌ ಸಿಂಗ್‌ ದೋಸಾಂಜ್‌ ನನ್ನು ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಿದ್ದಾರೆ.

ಕೊಲೆಯಾಗುವ ಮೊದಲು ಗುರುಪ್ರೀತ್ ಕೌರ್ ತನ್ನ ಚಿಕ್ಕಪ್ಪನಿಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದಳು. ಅಲ್ಲದೇ ತನ್ನ ಮಾವ ನನ್ನನ್ನು ಹುಡುಕುತ್ತಿದ್ದಾನೆ ಎಂದು ಭಯದಲ್ಲಿಯೇ ಹೇಳಿಕೊಂಡಿದ್ದಳು. ಸ್ವಲ್ಪ ಹೊತ್ತಿನಲ್ಲೇ ಆಕೆ ಕೆಲಸ ಮಾಡುತ್ತಿದ್ದ ಕಚೇರಿಯ ಬಳಿಗೆ ಬಂದಿದ್ದ ಆಕೆಯ ಮಾವ ಶೀತಲ್ ಸಿಂಗ್ ದೊಸಾಂಜ್ ಪಾರ್ಕಿಂಗ್ ಸ್ಥಳದಲ್ಲಿ ಆಕೆಯ ಮೇಲೆ ಗುಂಡಿನ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಕೂಡಲೇ ಆಕೆಯನ್ನು ಅಲ್ಲಿದ್ದ ಸಿಬ್ಬಂದಿಗಳು ಆಸ್ಪತ್ರೆಗೆ ದಾಖಲು ಮಾಡದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿ:Rashmika Mandanna – Vijay Devarakonda : ಒಂದೇ ವಿಮಾನದಲ್ಲಿ ಒಟ್ಟಿಗೆ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ- ವಿಜಯ ದೇವರಕೊಂಡ

ಇದನ್ನೂ ಓದಿ:Pramod Muthalik contest in Udupi : ಯುಪಿ‌ ಮಾದರಿ ಆಡಳಿತ; ಉಡುಪಿಯಿಂದ ಚುನಾವಣಾ ಕಣಕ್ಕೆ ಪ್ರಮೋದ್ ಮುತಾಲಿಕ್ ?

ಹತ್ಯೆಗೈದ ಸಿತಾಲ್‌ ಸಿಂಗ್‌ ಅವರನ್ನು ಫ್ರೆಸ್ನೊದಲ್ಲಿನ ಮನೆಯಲ್ಲಿ ಬಂಧಿಸಲಾಗಿದೆ. ಅವರ ಮನೆಯಲ್ಲಿದ್ದ ಪಿಸ್ತೂಲ್‌ ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಆರೋಪಿ ಸೀತಲ್‌ ಸಿಂಗ್‌ ಅವರನ್ನು ನಗರದ ಮುಖ್ಯ ಕಾರಗೃಹಕ್ಕೆ ಕಳುಹಿಸಲಾಗಿದೆ. ನವೆಂಬರ್‌ 14ಕ್ಕೆ ಪ್ರಕರಣದ ಕುರಿತು ವಿಚಾರಣೆ ನಡೆಯಲಿದೆ. ಒಟ್ಟಿನಲ್ಲಿ ಮಗನಿಂದ ದೂರವಾಗಿ ಬದುಕ ಬೇಕಾಗಿದ್ದ ಸೊಸೆಯನ್ನು ನಿರ್ದಯವಾಗಿ ಮಾವ ಕೊಂದು ಮುಗಿಸಿದ್ದಾನೆ.

Daughter-in-law who wanted to divorce her son, Indian man shoot dead daughter-in-law in America

Comments are closed.