ರಶ್ಮಿಕಾ ಮಂದಣ್ಣ – ವಿಜಯ್ದೇವರಕೊಂಡ ಕೊಡವ ಸಂಪ್ರದಾಯದಲ್ಲಿ ಅದ್ಧೂರಿ ಆರತಕ್ಷತೆ
Rashmika Mandanna Kadagu Reception : ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಮದುವೆ ಸಂಭ್ರಮ ಇಂದಿಗೂ ಕೊನೆಯಾಗಿಲ್ಲ. ಉದಯ್ಪುರದಲ್ಲಿ ಅದ್ಧೂರಿ ವಿವಾಹ ಹಾಗೂ ಹೈದರಾಬಾದ್ನಲ್ಲಿ ಆರತಕ್ಷತೆ ಕಾರ್ಯಕ್ರಮದ ಮೂಲಕ ಗಮನಸೆಳೆದಿದ್ದ ಈ ಜೋಡಿ ಇದೀಗ ಕೊಡಗಿನಲ್ಲೂ ಮೋಡಿ ಮಾಡಿದೆ. ರಶ್ಮಿಕಾ ಮಂದಣ್ಣ ತಮ್ಮ ತವರಾದ ಕೊಡವ ಸಂಪ್ರದಾಯದಲ್ಲಿ ಯಾವುದೇ ರೀತಿಯ ಮದುವೆಯ ಆಚರಣೆ ಮಾಡಿಕೊಂಡಿಲ್ಲ ಎಂಬ ಅಪವಾದ ಎದುರಿಸುತ್ತಿದ್ದರು. ಆದರೆ ಇದೀಗ ತಮ್ಮ ತವರಿನಲ್ಲಿ ಅದ್ಧೂರಿ ಆರತಕ್ಷತೆ ನಡೆಸುವ ಮೂಲಕ ಈ ಅಪವಾದಕ್ಕೆ ಪೂರ್ಣವಿರಾಮ ಇರಿಸಿದ್ದಾರೆ.
ಕೊಡಗಿನ ವಿರಾಜಪೇಟೆಯ ಸೆರೆನಿಟಿ ಹಾಲ್ನಲ್ಲಿ ನಡೆದ ಈ ಅದ್ಧೂರಿ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಕೊಡವ ಸಂಪ್ರದಾಯದಂತೆ ಸೀರೆ ಹಾಗೂ ಆಭರಣಗಳನ್ನು ಧರಿಸಿ ಗಮನಸೆಳೆದಿದ್ದಾರೆ. ಸಾಂಪ್ರದಾಯಿಕ ಕೊಡವ ಶೈಲಿಯ ಮಹಿಳೆಯಂತೆ ಕಂಗೊಳಿಸಿದ್ದಾರೆ.
ಇದನ್ನೂ ಓದಿ: 25 ವರ್ಷಗಳ ಬಳಿಕ ಮತ್ತೆ ಬರ್ತಿದ್ದಾನೆ ‘ಕೋಟಿಗೊಬ್ಬ’: ದಾದಾ ಕ್ರೇಜ್ಗೆ ಶೋಗಳು ವಾರಕ್ಕೂ ಮುನ್ನವೇ ಹೌಸ್ಫುಲ್
ರಶ್ಮಿಕಾ ಮಂದಣ್ಣ ಕಾಂಜಿವರಂನ ಹಸಿರು ಹಾಗೂ ಗುಲಾಬಿ ಬಣ್ಣದ ಸೀರೆಯನ್ನು ಧರಿಸಿದ್ದು, ಇದಕ್ಕೆ ಕೊಡವ ಸಂಪ್ರದಾಯದ ಆಭರಣಗಳಾದ ಪತ್ತಕ್, ಜೋಮಾಲೆ, ಕೊಕ್ಕೆ ತಾತಿ ಮತ್ತು ಪೌಂಚಿಯನ್ನು ಧರಿಸಿ ತಲೆಗೆ ಮಲ್ಲಿಗೆ ಮುಡಿದಿದ್ದಾರೆ. ಇತ್ತ ನಟ ವಿಜಯ್ ದೇವರಕೊಂಡ ಕಪ್ಪು ಬಣ್ಣದ ಫ್ಲೇರ್ಡ್ ಪ್ಯಾಂಟ್, ಬಿಳಿ ಶರ್ಟ್ ಮತ್ತು ಬ್ಲೇಜರ್ ಧರಿಸಿ ವಿಂಟೇಜ್ ಲುಕ್ನಲ್ಲಿ ಮಿಂಚಿದ್ದಾರೆ. ಈ ಆರತಕ್ಷತೆಯ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿ್ಕಕಾಪಟ್ಟೆ ವೈರಲ್ ಆಗಿದೆ.



