ಗಿಲ್ಲಿಗೆ ಹೊಡೆದ ರಿಷಾ! ಆದ್ರೂ ಬಿಗ್ ಬಾಸ್ ಮನೆಯಲ್ಲಿದ್ದಾರೆ ಎಂದು ಫ್ಯಾನ್ಸ್ ಪ್ರಶ್ನೆ

ಬಿಗ್ ಬಾಸ್.. ಎಲ್ಲರ ನೆಚ್ಚನ ರಿಯಾಲಿಟಿ ಶೋ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್‍ಗೆ ಅದರದ್ದೇ ಆದ ಫ್ಯಾನ್ಸ್ ಇದ್ದಾರೆ. ಬಿಗ್ ಬಾಸ್‍ನ ನಿಯಮಗಳನ್ನು ಮೀರಿದ್ರೆ ಎಲ್ಲರಿಗೂ ಶಿಕ್ಷೆ ಆಗುತ್ತೆ. ಅದರಲ್ಲೂ ದೈಹಿಕವಾಗಿ ಹಲ್ಲೆ ಮಾಡುವಂತಿಲ್ಲ ಎಂಬ ನಿಯಮ ಇದೆ. ಆ ರೀತಿ ಮಾಡಿದ್ರೆ ಆ ಕ್ಷಣವೇ ಸ್ಪರ್ಧಿಗಳನ್ನು ಮನೆಯಿಂದ ಹೊರ ಹಾಕಲಾಗುತ್ತೆ. ಹುಚ್ಚ ವೆಂಕಟ್, ಸಂಯುಕ್ತಾ ಹೆಗಡೆ ಅವರು ಇತರೆ ಸ್ಪರ್ಧಿಗಳ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೋಗಿದ್ರು. ಆದ್ರೆ ರಿಷಾ ಗಿಲ್ಲಿ ನಟನಿಗೆ ಹೊಡೆದಿದ್ರು ಇನ್ನು ಮನೆಯಲ್ಲಿದ್ದಾರೆ. ಅದಕ್ಕೆ ಅಭಿಮಾನಿಗಳು ವಾಹಿನಿಗೆ ಪ್ರಶ್ನೆ ಮಾಡ್ತಾ ಇದ್ದಾರೆ. ರಿಷಾ ಇನ್ನೂ ಏಕೆ ಹೋಗಿಲ್ಲ ಎಂದು ಕೇಳ್ತಾ ಇದ್ದಾರೆ.

ವೈಲ್ಡ್ ಕಾರ್ಡ್ ಎಂಟ್ರಿ ರಿಷಾ
ರಿಷಾ ಬಿಗ್ ಬಾಸ್ 12ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದಿದ್ರು. ಬಂದಾಗ ಫುಲ್ ಮಾಸ್ ಆಗಿ ಎಂಟ್ರಿ ಕೊಟ್ಟಿದ್ರು. ಎಲ್ಲರ ಮುಖವಾಡ ಕಳಚುತ್ತೇನೆ. ಎಲ್ಲರಿಗೂ ಠಕ್ಕರ್ ಕೊಟ್ಟು ಆಡುತ್ತೇನೆ ಎಂದು ಹೇಳ್ತಾರೆ. ಆದ್ರೆ ರಿಷಾ ಹೇಳಿದ್ದೇ ಒಂದು ಮಾಡುತ್ತಿರುವುದೇ ಇನ್ನೊಂದು ಎನ್ನುವ ರೀತಿ ಆಗಿದೆ. ಬರೀ ಜಗಳವಾಡ್ತಾ ಕಾಲ ಕಳೆಯುತ್ತಿದ್ದಾರೆ.

ಗಿಲ್ಲಿ-ರಿಷಾ ಜಗಳ
ಗಿಲ್ಲಿ ನಟ ಮತ್ತು ರಿಷ ಸ್ನಾನದ ವಿಚಾರ ಮತ್ತು ಬಾಕೆಟ್ ವಿಚಾರವಾಗಿ ಜಗಳವಾಡಿದ್ದಾರೆ. ಗಿಲ್ಲಿ ಸ್ನಾನಕ್ಕೆ ಹೋಗಬೇಕಿತ್ತು. ಆದ್ರೆ ರಿಷಾ ಹೋಗಿ ಡೋರ್ ಹಾಕಿಕೊಳ್ಳುತ್ತಾರೆ. ಬಾಕೆಟ್ ಸಹ ಕೊಡಲ್ಲ. ಅದಕ್ಕೆ ಗಿಲ್ಲಿ ಕೋಪ ಮಾಡಿಕೊಂಡು ರಿಷಾ ಬಟ್ಟೆಗಳನ್ನು ಬಾತ್ ರೂಮ್‍ಗೆ ತಂದು ಹಾಕುತ್ತಾರೆ. ಅದಕ್ಕೆ ಇಬ್ಬರಿಗೂ ಮಾತಿಗೆ ಮಾತು ಬೆಳೆಯುತ್ತೆ.

ಗಿಲ್ಲಿಗೆ ಹೊಡೆದ ರಿಷಾ
ಇಬ್ಬರು ಮಾತನಾಡುತ್ತಾ, ರಿಷಾ ಕೋಪ ಮಾಡಿಕೊಂಡು ಗಿಲ್ಲಿಗೆ ಹೊಡೆಯುತ್ತಾರೆ. ಮನೆಯವರು ಸಹ ಅದನ್ನು ನೋಡ್ತಾರೆ. ನಂತರ ರಿಷಾ ಗಿಲ್ಲಿ ಬಟ್ಟೆಗಳನ್ನು ಹರಡುತ್ತಾರೆ. ಅಲ್ಲದೇ ನಾನು ತಮಾಷೆಗೆ ಹೊಡೆದೆ ಎಂದು ಹೇಳ್ತಾರೆ. ಆದ್ರೂ ಪ್ರೇಕ್ಷಕರು ರಿಷಾರನ್ನು ಹೊರಗೆ ಕಳಿಸಿ ಎನ್ನುತ್ತಿದ್ದಾರೆ.

ಇನ್ನು ಬಿಗ್ ಬಾಸ್ ಪ್ರಸಾರವಾಗುವ ವೇಳೆ, ಈ ಎಲ್ಲಾ ವಿಚಾರಗಳನ್ನು ವಾರಾಂತ್ಯದಲ್ಲಿ ಸುದೀಪ್ ಅವರ ಚರ್ಚೆ ಮಾಡ್ತಾರೆ ಎಂದಿದ್ದಾರೆ. ರಿಷಾ ಮನೆಗೆ ಹೋಗ್ತಾರಾ ಕಾದು ನೋಡ್ಬೇಕು. ಏನೇನ್ ಪಂಚಾಯಿತಿ ಆಗುತ್ತೆ ಎಂದು ಪ್ರೇಕ್ಷಕರು ಕಾಯ್ತಾ ಇದ್ದಾರೆ.

ಈ ವಿಡಿಯೋ ಲಿಂಕ್ ಕ್ಲಿಕ್ ಮಾಡಿ: https://www.youtube.com/watch?v=yYoz6XHjMbw

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories