ಶೂಟಿಂಗ್ ವೇಳೆಯಲ್ಲಿ ಪೆಟ್ರೋಲ್ ಬಾಂಬ್ ಸ್ಪೋಟ : ರಿಷಬ್ ಶೆಟ್ಟಿ ಬೆನ್ನು, ತಲೆಗೆ ಬೆಂಕಿ

ಹಾಸನ : ಹಿರೋ ಸಿನಿಮಾದ ಶೂಟಿಂಗ್ ವೇಳೆಯಲ್ಲಿ ಸ್ಯಾಂಡಲ್ ವುಡ್ ನಟ ರಿಷಬ್ ಶೆಟ್ಟಿ ಅವರಿಗೆ ಬೆಂಕಿ ತಗುಲಿದ ಘಟನೆ ಹಾಸನ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ.

ಹೀರೋ ಚಿತ್ರದ ಚಿತ್ರೀಕರಣ ಬೇಲೂರಿನಲ್ಲಿ ನಡೆಯುತ್ತಿತ್ತು. ಚಿತ್ರಕರಣದ ವೇಳೆಯಲ್ಲಿ ಪೆಟ್ರೋಲ್ ಬಾಂಬ್ ಸಿಡಿಸಲಾಗಿತ್ತು. ಈ ವೇಳೆಯಲ್ಲಿ ವೃಷಬ್ ಶೆಟ್ಟಿ ತಲೆ ಹಾಗೂ ಬೆನ್ನಿನ ಭಾಗಕ್ಕೆ ಬೆಂಕಿ ತಲುಗಿದೆ. ತಲೆ ಕೂದಲು ಸುಟ್ಟು ಹೋಗಿದ್ದು, ಬೆನ್ನಿನ ಭಾಗಕ್ಕೆ ಗಾಯವಾಗಿದೆ. ಆದರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವೃಷಬ್ ಶೆಟ್ಟಿ ನಿರ್ದೇಶನದ ಹಿರೋ ಸಿನಿಮಾ ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾವೂ ಹೌದು. ವೃಷಬ್ ಶೆಟ್ಟಿ ಅವರಿಗೆ ಮಗಳು ಜಾನಕಿ ಖ್ಯಾತಿಯ ಗಾನವಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾ ಸೆಟ್ ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಶೂಟಿಂಗ್ ಸಿಬ್ಬಂದಿಗಳು ವೃಷಬ್ ಶೆಟ್ಟಿ ಅವರನ್ನು ರಕ್ಷಿಸಿದ್ದಾರೆ. ಕೆಲಕಾಲ ಶೂಟಿಂಗ್ ನ್ನು ಸ್ಥಗಿತಗೊಳಿಸಲಾಗಿತ್ತು.

Comments are closed.