ತಿಂಗಳ ಆರಂಭದಲ್ಲೇ ಗೃಹಿಣಿಯರಿಗೆ ಶಾಕ್….! ಮತ್ತೆ ಸಿಲೆಂಡರ್ ದರ ಏರಿಕೆ….! ಕೈಸುಡುತ್ತಿದೆ ಗ್ಯಾಸ್….!!

ನವದೆಹಲಿ : ಚಿನ್ನದ ಬಳಿಕ ಏರುಮುಖದಲ್ಲಿರೋ ಸಿಲೆಂಡರ್ ದರ ಮತ್ತೊಮ್ಮೆ ಏರಿಕೆಯಾಗಿದ್ದು, ಗೃಹಿಣಿಯರಿಗೆ ಮಾರ್ಚ್ ತಿಂಗಳ ಆರಂಭದಲ್ಲೇ ಶಾಕ್ ತಗುಲಿದೆ. ನಾಲ್ಕು ದಿನಗಳ ಹಿಂದೆ 25 ರೂಪಾಯಿ ದರ ಏರಿಕೆ ಕಂಡಿದ್ದ ಗ್ಯಾಸ್ ಸಿಲೆಂಡರ್ ಮತ್ತೊಮ್ಮೆ 25 ಪ್ರೈಸ್ ಹೈಕ್ ಆಗಿದ್ದು, ಬೆಂಗಳೂರಿನಲ್ಲಿ 14.2 ಕೆಜಿ ಸಿಲೆಂಡರ್ ಗೆ ನೀವಿನ್ನು ಬರೋಬ್ಬರಿ 822 ರೂಪಾಯಿ ಪಾವತಿಸಬೇಕು.

ಫೆಬ್ರವರಿ ತಿಂಗಳೊಂದರಲ್ಲೇ ಮೂರು ಭಾರಿ ದರ ಪರಿಷ್ಕರಣೆಗೊಳಿಸಿದ್ದ ತೈಲಮಾರುಕಟ್ಟೆ ಇದೀಗ ಮಾರ್ಚ್ ತಿಂಗಳ ಮೊದಲ ದಿನದಂದೇ ಪರಿಷ್ಕೃತ ದರ ಪ್ರಕಟಿಸಿದ್ದು, ಸಿಲಿಂಡರ್ ಗೆ 25 ರೂಪಾಯಿ ಹೆಚ್ಚಿಸಲಾಗಿದೆ. ಫೆಬ್ರವರಿ ತಿಂಗಳಿನಲ್ಲೇ ಒಟ್ಟು 100 ರೂಪಾಯಿ ಹೆಚ್ಚಾಗಿದ್ದ ಸಿಲೆಂಡರ್ ಬೆಲೆ ಈಗ ಮತ್ತೆ 25 ರೂಪಾಯಿ ಏರಿಕೆಕಂಡಿದ್ದು, 800 ಅಂಚಿನಲ್ಲಿದ್ದ ದರ ಈಗ 822 ಕ್ಕೆ ತಲುಪಿದೆ.

ಬೆಂಗಳೂರಿನಲ್ಲಿ ಪ್ರಸ್ತುತ ಸಿಲೆಂಡರ್ ದರ 822 ರೂಪಾಯಿಯಾಗಿದ್ದು, ದೆಹಲಿಯಲ್ಲಿ 819 ರೂಪಾಯಿ,ಮುಂಬೈಯಲ್ಲಿ 819 ರೂಪಾಯಿ, ಕೋಲ್ಕತ್ತಾದಲ್ಲಿ 845.50 ರೂಪಾಯಿ, ಚೈನೈನಲ್ಲಿ 835 ರೂಪಾಯಿಗೆ ತಲುಪಿದೆ.

2020 ರ ಡಿಸೆಂಬರ್ ನಿಂದ 2021 ಮಾರ್ಚ್ ವರೆಗೆ ಒಟ್ಟು 200 ರೂಪಾಯಿ ದರ ಏರಿಸಿಕೊಂಡಿರುವ ಸಿಲೆಂಡರ್ ಜನಸಾಮಾನ್ಯರ ನೆಮ್ಮದಿ ಕಸಿದುಕೊಂಡಿದೆ. ಸತತವಾಗಿ ಏರಿಕೆ ಕಾಣುತ್ತಿರುವ ಎಲ್ಪಿಜಿ ಬೆಲೆಯಿಂದ ಜನರು ಕಂಗಲಾಗಾಗಿದ್ದು, ಅಚ್ಚೇ ದಿನ ಅಂದ್ರೇ ಬೆಲೆ ಏರಿಕೆ ನಾ ಅಂತ ಟೀಕಿಸುತ್ತಿದ್ದಾರೆ.

Comments are closed.