Rishab v/s Rashmika: ‘ಕಿರಿಕ್’ ಬೆಡಗಿ ರಶ್ಮಿಕಾ ಧಿಮಾಕಿಗೆ ಆಕೆ ಸ್ಟೈಲ್ ನಲ್ಲೇ ತಿರುಗೇಟು ನೀಡಿದ ರಿಷಬ್ ಶೆಟ್ಟಿ; ಅಭಿಮಾನಿಗಳು ಫುಲ್ ಖುಷ್..

Rishab v/s Rashmika: ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆಯಲಿ, ಹತ್ತಿದ ಏಣಿಯನ್ನು ಮಾತ್ರ ಮರೆಯಬಾರದು ಅನ್ನೋ ಮಾತಿದೆ. ಆದರೆ ನಟಿ ರಶ್ಮಿಕಾ ಮಂದಣ್ಣಗೆ ಮಾತ್ರ ಅದಿಲ್ಲ. ತನ್ನ ಈ ಮಟ್ಟದ ಯಶಸ್ಸಿಗೆ ಕಾರಣರಾದವರನ್ನು ಕಿರಿಕ್ ಬೆಡಗಿ ಸಂಪೂರ್ಣವಾಗಿ ಮರೆತುಬಿಟ್ಟಿದ್ದಾರೆ. ಬರೀ ಮರೆತಿದ್ದರೆ ಪರವಾಗಿಲ್ಲ ಅಂದುಕೊಳ್ಳಬಹುದಿತ್ತು. ಆದರೆ ಸಂದರ್ಶನವೊಂದರಲ್ಲಿ ರಿಷಬ್ ಶೆಟ್ಟಿ ಪ್ರೊಡಕ್ಷನ್ ಹೌಸ್ ಬಗ್ಗೆ ರಶ್ಮಿಕಾ ಆಡಿರುವ ಮಾತು ರಿಷಬ್ ಶೆಟ್ಟರನ್ನು ಕೆರಳಿಸಿದೆ. ಎಷ್ಟರಮಟ್ಟಿಗೆ ಎಂದರೆ ವಿವಾದಗಳಿಂದ ದೂರವಿರುವ ರಿಷಬ್ ಅವರೇ ರಶ್ಮಿಕಾಗೆ ಖಡಕ್ ಜವಾಬ್ ನೀಡಿದ್ದು, ಇದೀಗ ಎಲ್ಲೆಡೆ ವೈರಲ್ ಆಗಿದೆ.

ಇದನ್ನೂ ಓದಿ: Srikanth Meka: ವಿಚ್ಛೇದನ ವದಂತಿ ತಳ್ಳಿಹಾಕಿದ ತೆಲುಗು ನಟ ಶ್ರೀಕಾಂತ್; ಸುಳ್ಳು ಸುದ್ದಿ ಹರಡಿಸಿದರೆ ಕಾನೂನು ಕ್ರಮದ ಎಚ್ಚರಿಕೆ

ಕಾಂತಾರ ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಸಂದರ್ಶನ ನೀಡುವುದರಲ್ಲಿ ಬ್ಯುಸಿಯಾಗಿದ್ದರೆ, ರಶ್ಮಿಕಾ ಮಂದಣ್ಣ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಹೀಗಿರುವಾಗ ಕಳೆದ ಕೆಲ ದಿನಗಳ ಹಿಂದೆ ರಿಷಬ್ ಶೆಟ್ಟಿ ಅವರ ಬಗ್ಗೆ ಆಕೆ ನಡೆದುಕೊಂಡ ರೀತಿ ಕನ್ನಡಿಗರನ್ನು ಕೆರಳಿಸಿದೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ರಶ್ಮಿಕಾ ಸಂದರ್ಶನ ನೀಡುತ್ತಾ ತಮ್ಮ ಸಿನಿಮಾ ಜರ್ನಿ ಕುರಿತು ಮಾತನಾಡಿದ್ದಾರೆ. ಮಾಡೆಲ್ ಆಗಿ ವೃತ್ತಿ ಜೀವನಕ್ಕೆ ಕಾಲಿಟ್ಟೆ. ಪೇಪರ್ ನಲ್ಲಿ ಫೋಟೋ ಬಂತು. ಬಳಿಕ ಸಿನಿಮಾ ಆಫರ್ ಬಂತು ಎಂಬಿತ್ಯಾದಿ ವಿಚಾರಗಳ ಬಗ್ಗೆ ಹೇಳಿದ್ದಾರೆ. ಆ ಬಳಿಕ ತಮ್ಮ ಚೊಚ್ಚಲ ಚಿತ್ರದಲ್ಲಿ ಆಫರ್ ಸಿಕ್ಕ ಬಗ್ಗೆ ಕೇಳಲಾಯ್ತು. ಅದಕ್ಕೆ ರಶ್ಮಿಕಾ ಕಿರಿಕ್ ಪಾರ್ಟಿ ಸಿನಿಮಾದ ಹೆಸರನ್ನು ಹೇಳಲು ಹಿಂದೇಟು ಹಾಕಿದ್ದಾರೆ. ಅಲ್ಲದೇ ತನಗೆ ಅವಕಾಶ ನೀಡಿದ ನಿರ್ಮಾಣ ಸಂಸ್ಥೆಯ ಹೆಸರನ್ನು ಹೇಳದೇ ಧಿಮಾಕಿನಿಂದ ಕೈಗಳಿಂದ ಕೋಟ್ ರೀತಿಯಲ್ಲಿ ಸನ್ನೆ ಮಾಡಿ ತೋರಿಸಿದ್ದಾರೆ. ಇದು ರಿಷಬ್ ಶೆಟ್ಟಿ ಸೇರಿದಂತೆ ಅವರ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Yuvraj Singh: ಯುವರಾಜ್ ಸಿಂಗ್ ಗೆ ‘ಬಂಗಲೆ’ ಸಂಕಷ್ಟ; ಡಿ.8ರಂದು ವಿಚಾರಣೆಗೆ ಹಾಜರಾಗುವಂತೆ ಗೋವಾ ಸರ್ಕಾರದಿಂದ ನೋಟಿಸ್

ಇದಕ್ಕೆ ಉತ್ತರ ನೀಡಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದ ರಿಷಬ್ ಶೆಟ್ಟಿ ಅವರಿಗೆ ಸಂದರ್ಶನವೊಂದರಲ್ಲಿ ಸಮಂತಾ, ಸಾಯಿಪಲ್ಲವಿ, ಕೀರ್ತಿ ಸುರೇಶ್, ರಶ್ಮಿಕಾ ಇವರಲ್ಲಿ ಯಾರ ನಟನೆ ಇಷ್ಟ..? ಯಾರೊಂದಿಗೆ ನಟಿಸ್ತೀರಾ ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಅವರು ರಶ್ಮಿಕಾ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸದೇ ಸ್ಕ್ರಿಪ್ಟ್ ಮುಗಿದ ಮೇಲೆ ಕಲಾವಿದರ ಬಗ್ಗೆ ಯೋಚಿಸುತ್ತೇನೆ. ಹೊಸ ಕಲಾವಿದರ ಜೊತೆ ನಟಿಸಲು ಇಷ್ಟಪಡುತ್ತೇನೆ. ನೀವು ಹೇಳಿದ ಹೆಸರುಗಳಲ್ಲಿ (ಕೋಟ್ ರೀತಿಯಲ್ಲಿ ಸನ್ನೆ ಮಾಡಿ) ನಟಿಯರು ನನಗೆ ಇಷ್ಟವಿಲ್ಲ. ಸಮಂತಾ, ಸಾಯಿಪಲ್ಲವಿ ಅಭಿನಯ ಇಷ್ಟವಾಗುತ್ತೆ ಎಂದಿದ್ದಾರೆ. ಹೀಗೆ ರಶ್ಮಿಕಾ ಅವರ ಧಿಮಾಕಿಗೆ ಅವರ ರೀತಿಯಲ್ಲೇ ರಿಷಬ್ ಶೆಟ್ಟಿ ತಿರುಗೇಟು ನೀಡಿದ್ದಾರೆ.

Rishab v/s Rashmika: Rishab Shetty hits back at Rashmika Mandanna’s ego with her own style

Comments are closed.