ಆನೆಗುಡ್ಡೆಯಲ್ಲಿ ನಟ ರಿಷಬ್ ಶೆಟ್ಟಿ ಮೂಡುಗಣಪತಿ ಸೇವೆ…

ಉಡುಪಿ: ಕರಾವಳಿಯ ಪ್ರಸಿದ್ಧ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಭಕ್ತಿಭಾವದಿಂದ ಮೂಡುಗಣಪತಿ ಸೇವೆ ಸಲ್ಲಿಸಿದರು. ಬೆಳಗಿನ ವೇಳೆಯಲ್ಲಿ ದೇವಾಲಯಕ್ಕೆ ಆಗಮಿಸಿದ ಅವರು ವಿಶೇಷ ಪೂಜೆಯಲ್ಲಿ ಭಾಗವಹಿಸಿ ಶ್ರೀ ಗಣೇಶನ ಅನುಗ್ರಹ ಬೇಡಿದರು.
ಪೂಜೆಯ ಬಳಿಕ ದೇವಾಲಯದ ಅರ್ಚಕರು ರಿಷಬ್ ಶೆಟ್ಟಿಗೆ ಪ್ರಸಾದ ನೀಡಿ ಆಶೀರ್ವಾದ ಮಾಡಿದರು. ಈ ವೇಳೆ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು ರಿಷಬ್ ಶೆಟ್ಟಿಯನ್ನು ನೋಡಿ ಸಂತಸ ವ್ಯಕ್ತಪಡಿಸಿ, ಕೆಲವರು ಶುಭಾಶಯಗಳನ್ನು ಕೋರಿದರು. ಯಾವುದೇ ಅಡಂಬರವಿಲ್ಲದೆ ಸರಳವಾಗಿ ಪೂಜೆಯಲ್ಲಿ ಪಾಲ್ಗೊಂಡ ರಿಷಬ್ ಶೆಟ್ಟಿ ಅವರ ಭಕ್ತಿಭಾವ ಭಕ್ತರ ಗಮನ ಸೆಳೆಯಿತು.

ಇದನ್ನೂ ಓದಿ: ಚಿಕ್ಕಮಗಳೂರಿನ ನಿರ್ದೇಶಕ ಗಿಲ್ಲಿ ವೆಂಕಟೇಶ್ ಸಿನಿಮಾ 5 ಭಾಷೆಗಳಲ್ಲಿ ಬಿಡುಗಡೆ!

ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ಶೈಲಿ ಹಾಗೂ ಕರಾವಳಿಯ ಸಂಸ್ಕೃತಿ ಮೂಲದ ಕಥೆಗಳ ಮೂಲಕ ಹೆಸರು ಮಾಡಿರುವ ರಿಷಬ್ ಶೆಟ್ಟಿ ಅವರು, ಸದಾ ದೇವರ ಮೇಲೆ ಅಪಾರ ನಂಬಿಕೆ ಇರಿಸಿಕೊಂಡವರು. ಈ ಹಿಂದೆ ಕಾಂತಾರ ಚಿತ್ರದ ಮಹೂರ್ತವನ್ನು ಕೂಡ ಇದೇ ಆನೆಗುಡ್ಡೆ ಶ್ರೀ ವಿನಾಯಕನ ದೇವರ ಸನ್ನಿಧಿಯಲ್ಲಿ ಪ್ರಾರಂಭಿಸಿದ್ದರು.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories