Rocking star Yash‌ : ಕಾಂತಾರ ನನ್ನದೇ ಸಿನಿಮಾ : ಯಶ್ ಅಭಿಮಾನಕ್ಕೆ ಎಲ್ಲೆಡೆ ಮೆಚ್ಚುಗೆ


ಬಿಗ್ ಬಜೆಟ್ ಸಿನಿಮಾಗಳ ಜೊತೆ ಪ್ಯಾನ್ ಇಂಡಿಯಾ ಮಟ್ಟದಲ್ಲೂ ಕನ್ನಡದ ಸಿನಿಮಾಗಳು ಸದ್ದು ಮಾಡಲಾರಂಭಿಸಿದೆ. ಸ್ಯಾಂಡಲ್ ವುಡ್ ಬದಲಾವಣೆಯನ್ನು ಕಂಡಿರುತ್ತದೆ.ಇಷ್ಟಕ್ಕೆ ಮುಗಿದಿಲ್ಲ. ಈಗ ಸ್ಯಾಂಡಲ್ ವುಡ್ ಸ್ಟಾರ್ ಗಳು ಕೂಡ ಒಬ್ಬರನ್ನೊಬ್ಬರು ಬೆಂಬಲಿಸಿಕೊಂಡು ಕನ್ನಡದ ಕೀರ್ತಿ ಪತಾಕೆಯನ್ನು ದೇಶ- ವಿದೇಶದಲ್ಲಿ ಹಾರಿಸುತ್ತಿದ್ದಾರೆ. ಇದಕ್ಕೆ ಈಗ ರಾಕಿಂಗ್ ಸ್ಟಾರ್, ಪ್ಯಾನ್ ಇಂಡಿಯಾ ಹೀರೋ ಯಶ್(Rocking star Yash‌) ಕೂಡ ಸಾಕ್ಷಿಯಾಗಿದ್ದಾರೆ. ರಾಷ್ಟ್ರ ಮಟ್ಟದ ಸಂವಾದದಲ್ಲಿ ಕಾಂತಾರ ನನ್ನದೇ ಸಿನಿಮಾ ಎಂದು ಹೆಮ್ಮೆ ಪಟ್ಟಿದ್ದಾರೆ.

ಮುಂಬೈಯಲ್ಲಿ ನಡೆದ ಇಂಡಿಯಾ ಟುಡೇ ಕಾನ್ ಕ್ಲೇವ್ 2022 ಕಾರ್ಯಕ್ರಮದಲ್ಲಿ ಯಶ್ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ವೇಳೆ ನಡೆದ ಸಂವಾದದಲ್ಲಿ ಯಶ್ ತಮ್ಮ ಸಿನಿ ಜರ್ನಿ, ಕುಟುಂಬ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಈ ವೇಳೆ ಕಾಂತಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಮುಕ್ತವಾಗಿ ಹಾಗೂ ಅಭಿಮಾನದಿಂದ ಮಾತನಾಡಿದ ಯಶ್, ಕಾಂತಾರ ಸಿನಿಮಾ ಕೂಡ ನನ್ನ ಸಿನಿಮಾವೇ‌. ಕಾಂತಾರ ಸಿನಿಮಾ ಮಾತ್ರವಲ್ಲ ಪ್ರತಿಯೊಂದು ಕನ್ನಡ ಸಿನಿಮಾವೂ ನಮ್ಮದೇ. ಕನ್ನಡ ಸಿನಿಮಾವೊಂದು ಇಷ್ಟು ಶ್ಲಾಘನೆ ಪಡೆಯುತ್ತಿರೋದು ನಿಜಕ್ಕೂ ಅಭಿಮಾನದ ಸಂಗತಿ. ಕಾಂತಾರ ಮಾತ್ರವಲ್ಲ ಗರುಡ ಗಮನ ವೃಷಭ ವಾಹನ, ಚಾರ್ಲಿ 777 ಸಿನಿಮಾಗಳು ಗಡಿ ಮೀರಿ ನೋಡಲ್ಪಟ್ಟಿವೆ. ಕನ್ನಡ ಸಿನಿಮಾಗಳು ಈಗ ಜಾಗತಿಕ ಮನ್ನಣೆ ಪಡೆಯುತ್ತಿವೆ ಎಂದು ಮೆಚ್ಚುಗೆ ಮಾತನಾಡಿದ್ದಾರೆ‌.

ಯಶ್ ಕನ್ನಡ ಸಿನಿಮಾ ಕ್ಷೇತ್ರ ಹಾಗೂ ಕಾಂತಾರದ ಬಗ್ಗೆ ಆಡಿದ ಮಾತುಗಳು ಈಗ ಸಖತ್ ವೈರಲ್ ಆಗಿದ್ದು, ಯಶ್ ಅಭಿಮಾನಿಗಳು ಸೇರಿದಂತೆ ಕನ್ನಡ ಸಿನಿ ಪ್ರೇಕ್ಷಕರು ಸಂಭ್ರಮಿಸುತ್ತಿದ್ದಾರೆ. ಅಲ್ಲದೇ ತಾನು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದರೂ ನನಗೆ ಕನ್ನಡವೇ ಮೊದಲು ಹಾಗೂ ಕನ್ನಡ ಸಿನಿಮಾಗಳೇ ಮೊದಲ ಆದ್ಯತೆ ಎಂದಿದ್ದು, ಯಶ್ ಕನ್ನಡಾಭಿಮಾನ ಈಗ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಇದನ್ನೂ ಓದಿ : Kantara Rishab Shetty : ಕಾಂತಾರ ಬಳಿಕ ಖುಲಾಯಿಸಿತು ರಿಶಬ್ ಅದೃಷ್ಟ: ಬಾಲಿವುಡ್ ಸಿನಿಮಾಗೂ ಬರ್ತಿದೆ ಆಫರ್

ಇದನ್ನೂ ಓದಿ : Alia Bhatt-Ranbir Kapoor : ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಆಲಿಯಾ ಭಟ್ : ತಂದೆಯಾದ ರಣಬೀರ್ ಕಪೂರ್

ಇದನ್ನೂ ಓದಿ : Alia Bhatt-Ranbir Kapoor : ಆಸ್ಪತ್ರೆಗೆ ದಾಖಲಾದ ಆಲಿಯಾ ಭಟ್ : ಮೊದಲ ಮಗುವಿನ ನಿರೀಕ್ಷೆಯಲ್ಲಿ ರಣಬೀರ್ ಕಪೂರ್

ಕೇವಲ ಸಿನಿಮಾ ಮಾತ್ರವಲ್ಲ ವೈಯಕ್ತಿಕ ಬದುಕಿನ ಬಗ್ಗೆಯೂ ಮಾತನಾಡಿದ ಯಶ್ ತಾವು ಸಿನಿಮಾದಲ್ಲಿ ಹೆಸರು ಗಳಿಸಿದ ಬಳಿಕವೂ ತಂದೆ ಬಿಎಂಟಿಸಿ ಚಾಲಕರಾಗಿ ವೃತ್ತಿ ಮುಂದುವರೆಸಿದ್ದನ್ನು ಸ್ಮರಿಸಿಕೊಂಡರು. ಅಲ್ಲದೇ, ಈಗ ತಾವು ಪಡೆದ ಯಶಸ್ಸಿಗಾಗಿ ತಾವು 5 ವರ್ಷಗಳಿಂದ ಕನಸು ಕಂಡಿದ್ದೇ ಎಂದಿದ್ದಾರೆ. ಒಟ್ಟಿನಲ್ಲಿ ಯಶ್ ಇಂಟರವ್ಯೂ ಸಖತ್ ಸದ್ದು ಮಾಡುತ್ತಿರುವುದು ಸತ್ಯ.

Rocking star Yash‌ : Kantara is my own movie: Yash’s fandom is appreciated everywhere

Comments are closed.