T20 World Cup 2022 : ಜಿಂಬಾಬ್ವೆ ವಿರುದ್ಧ ಭರ್ಜರಿ ಜಯ, ಗ್ರೂಪ್-2ನಿಂದ ಅಗ್ರಸ್ಥಾನಿಯಾಗಿ ಸೆಮಿಫೈನಲ್‌ಗೆ ಭಾರತ ಲಗ್ಗೆ

ಮೆಲ್ಬೋರ್ನ್ : (T20 World Cup 2022) ಟಿ20 ವಿಶ್ವಕಪ್ ಟೂರ್ನಿಯ ಸೂಪರ್-12 ಹಂತದ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಭಾರತ ತಂಡ ಜಿಂಬಾಬ್ವೆ ವಿರುದ್ಧ 71 ರನ್’ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಗ್ರೂಪ್-2ರಲ್ಲಿ ಅಗ್ರಸ್ಥಾನ ಅಲಂಕರಿಸಿ 2016ರ ನಂತರ ಮೊದಲ ಬಾರಿ ಟಿ20 ವಿಶ್ವಕಪ್(T20 World Cup 2022)’ನಲ್ಲಿ ಸೆಮಿಫೈನಲ್’ಗೆ ಲಗ್ಗೆ ಇಟ್ಟಿತು.

ಗ್ರೂಪ್-2ರಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿರುವ ಭಾರತ ತಂಡ, ಸೆಮಿಫೈನಲ್’ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ (India Vs England Semifinal). ಭಾರತ Vs ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಸಮರ ಗುರುವಾರ (ನವೆಂಬರ್ 10) ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯಲಿದೆ. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ (New Zeeland Vs Pakistan Semifinal) ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯ ಬುಧವಾರ (ನವೆಂಬರ್ 9) ಸಿಡ್ನಿಯಲ್ಲಿ ನಡೆಯಲಿದೆ.

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆದ ಟಿ20 ವಿಶ್ವಕಪ್(T20 World Cup 2022) ಟೂರ್ನಿಯ ಸೂಪರ್-12 ಹಂತದ ಕಟ್ಟ ಕಡೆಯ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಕ್ಯಾಪ್ಟನ್ ರೋಹಿತ್ ಕೇವಲ 15 ರನ್ ಗಳಿಸಿ ಔಟಾದ್ರೆ, ಉಪನಾಯಕ ಕೆ.ಎಲ್ ರಾಹುಲ್ 35 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡ ಸ್ಫೋಟಕ 51 ರನ್’ಗಳ ಕಾಣಿಕೆಯಿತ್ತರು. ಇದು ಪ್ರಸಕ್ತ ಟೂರ್ನಿಯಲ್ಲಿ ರಾಹುಲ್ ಬಾರಿಸಿದ ಸತತ 2ನೇ ಹಾಗೂ ಟಿ20 ವಿಶ್ವಕಪ್ ಕರಿಯರ್’ನಲ್ಲಿ ಬಾರಿಸಿದ 5ನೇ ಅರ್ಧಶತಕ.

ಇದನ್ನೂ ಓದಿ : South Africa knocked out : ನೆದರ್ಲೆಂಡ್ಸ್ ವಿರುದ್ಥ ಸೋಲು, ಟಿ20 ವಿಶ್ವಕಪ್’ನಿಂದ ಚೋಕರ್ಸ್ ದಕ್ಷಿಣ ಆಫ್ರಿಕಾ ಔಟ್

4ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದು ಅಬ್ಬರಿಸಿದ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್ ಕೇವಲ 25 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್’ಗಳ ಸಹಿತ ಅಜೇಯ 61 ರನ್ ಸಿಡಿಸಿದರು. ಅಂತಿಮವಾಗಿ ಭಾರತ ನಿಗದಿತ 20 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಕಲೆ ಹಾಕಿತು. ನಂತರ ಗುರಿ ಬೆನ್ನಟ್ಟಿದ ಜಿಂಬಾಬ್ವೆ ಟೀಮ್ ಇಂಡಿಯಾ ಬೌಲರ್’ಗಳ ಸಂಘಟಿತ ದಾಳಿಗೆ ತತ್ತರಿಸಿ 17.2 ಓವರ್’ಗಳಲ್ಲಿ 115 ರನ್ನಿಗೆ ಆಲೌಟಾಯಿತು. ಭಾರತ ಪರ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 22 ರನ್ನಿಗೆ 3 ವಿಕೆಟ್ ಉರುಳಿಸಿದ್ರೆ, ವೇಗಿ ಮೊಹಮ್ಮದ್ ಶಮಿ 14 ರನ್ನಿಗೆ 2 ವಿಕೆಟ್ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 16 ರನ್ನಿಗೆ 2 ವಿಕೆಟ್ ಪಡೆದರು.

ಇದನ್ನೂ ಓದಿ : Danushka Gunathilaka : ಅತ್ಯಾಚಾರ ಆರೋಪ ಶ್ರೀಲಂಕಾ ಕ್ರಿಕೆಟಿಗ ಧನುಷ್ಕಾ ಗುಣತಿಲಕ ಅರೆಸ್ಟ್

ಸೂಪರ್-12 ಹಂತದ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 71 ರನ್’ಗಳ ಭರ್ಜರಿ ಗೆಲುವು ದಾಖಲಿಸಿದ ಟೀಮ್ ಇಂಡಿಯಾ, ಗ್ರೂಪ್-2ರಲ್ಲಿ ಅಗ್ರಸ್ಥಾನ ಅಲಂಕರಿಸಿತು. ಆಡಿದ 5 ಲೀಗ್ ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದ ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ಮಾತ್ರ ಸೋತಿತ್ತು. ಅಂತಿಮವಾಗಿ 8 ಅಂಕಗಳನ್ನು ಕಲೆ ಹಾಕಿದ ರೋಹಿತ್ ಶರ್ಮಾ ಬಳಗ, ಗ್ರೂಪ್’ನಿಂದ ಅಗ್ರಸ್ಥಾನಿಯಾಗಿ ಸೆಮಿಫೈನಲ್’ಗೆ ಲಗ್ಗೆಯಿಟ್ಟಿದೆ. ಭಾನುವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ ಸೆಮಿಫೈನಲ್ ತಲುಪಿರುವ ಪಾಕಿಸ್ತಾನ, ಆಡಿದ 5 ಪಂದ್ಯಗಳಿಂದ 3 ಗೆಲುವು, 2 ಸೋಲಿನೊಂದಿಗೆ 6 ಅಂಕ ಗಳಿಸಿ ಗ್ರೂಪ್-2ರಲ್ಲಿ 2ನೇ ಸ್ಥಾನ ಪಡೆಯಿತು.
ಮತ್ತೊಂದೆಡೆ ಗ್ರೂಪ್-1ರಿಂದ ಸೆಮಿಫೈನಲ್ ತಲುಪಿರುವ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳು ಆಡಿದ ಐದು ಪಂದ್ಯಗಳಿಂದ ತಲಾ 7 ಅಂಕ ಗಳಿಸಿವೆ. ಆದರೆ ಉತ್ತಮ ರನ್’ರೇಟ್ ಆಧಾರದಲ್ಲಿ ನ್ಯೂಜಿಲೆಂಡ್ ಗ್ರೂಪ್-1ರಲ್ಲಿ ಅಗ್ರಸ್ಥಾನ ಪಡೆದಿದೆ.

ಇದನ್ನೂ ಓದಿ : T20 World Cup: ಶ್ರೀಲಂಕಾ ವಿರುದ್ಧ ಗೆದ್ದ ಇಂಗ್ಲೆಂಡ್ ಸೆಮೀಸ್‌ಗೆ, ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ಕಿಕೌಟ್

ಟಿ20 ವಿಶ್ವಕಪ್ ಸೆಮಿಫೈನಲ್ ಲೈನಪ್

  1. ನ್ಯೂಜಿಲೆಂಡ್ Vs ಪಾಕಿಸ್ತಾನ
    ಸ್ಥಳ: ಸಿಡ್ನಿ ಕ್ರಿಕೆಟ್ ಗ್ರೌಂಡ್
    ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ (ಭಾರತೀಯ ಕಾಲಮಾನ)
  2. ಭಾರತ Vs ಇಂಗ್ಲೆಂಡ್
    ಸ್ಥಳ: ಅಡಿಲೇಡ್ ಓವಲ್, ಅಡಿಲೇಡ್
    ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ (ಭಾರತೀಯ ಕಾಲಮಾನ)

(T20 World Cup 2022) India recorded a resounding 71-run victory over Zimbabwe in their final league match of the Super-12 stage of the T20 World Cup tournament. With this win, Team India led by Rohit Sharma topped Group-2 and advanced to the semi-finals of the T20 World Cup 2022 for the first time since 2016.

Comments are closed.