RRR vs James : ಆರ್‌ಆರ್‌ಆರ್‌ಗಾಗಿ ಬಲಿಯಾಗುತ್ತಾ ಜೇಮ್ಸ್ ಚಿತ್ರ : ಖಡಕ್ ಎಚ್ಚರಿಕೆ ಕೊಟ್ಟ ಕರವೇ

ಬೆಂಗಳೂರು : ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಕರ್ನಾಟಕದಲ್ಲೇ ಪರದಾಡುವ ಸ್ಥಿತಿ ಇದೆ ಎನ್ನುವ ಮಾತು ಆಗಾಗ ಚಂದನವನದಲ್ಲಿ ಕೇಳಿ ಬರುತ್ತಿದೆ‌. ಈ ಮಾತಿಗೆ ಈಗ ಮತ್ತೊಮ್ಮೆ ಸಾಕ್ಷಿ ಸಿಕ್ಕಂತಾಗಿದ್ದು ನಾಳೆ ರಿಲೀಸ್ ಆಗ್ತಿರೋ ಆರ್ ಆರ್ ಆರ್ (RRR ) ಸಿನಿಮಾಗಾಗಿ‌ ಜೇಮ್ಸ್ (James) ಸಿನಿಮಾ ಎತ್ತಂಗಡಿಯಾಗ್ತಿದೆ ಅನ್ನೋ ಮಾತು ಕೇಳಿ ಬರ್ತಿದೆ. ಈ ಎತ್ತಂಗಡಿ ಹಾಗೂ ಕನ್ನಡ ವಿರೋಧಿ ನೀತಿಗೆ ಕರವೇ ಹಾಗೂ ಕನ್ನಡರ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಪುನೀತ್ ಕೊನೆಯ ಚಿತ್ರವಾಗಿರೋ ಜೇಮ್ಸ್ ಮಾರ್ಚ್ 17 ರಂದು ತೆರೆ ಕಂಡಿದ್ದು ಇದುವರೆಗೂ ಯಶಸ್ವಿ ಪ್ರದರ್ಶನ ಕಾಣ್ತಿದೆ. ಈ ಮಧ್ಯೆ ಮಾರ್ಚ್ 25ಕ್ಕೆ RRR ರಿಲೀಸ್ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಜೇಮ್ಸ್ (James) ಶೋ ರದ್ದುಗೊಳಿಸಿ ಆರ್ ಆರ್ ಆರ್ ಶೋಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಹೀಗಾಗಿ ಆರ್ ಆರ್ ಆರ್ ವಿತರಕರಿಗೆ ಹಾಗೂ ಪರಭಾಷಾ ಸಿನಿಮಾಕ್ಕೆ ಮನ್ನಣೆ ಕೊಡ್ತಿರೋ ಥಿಯೇಟರ್ ಗಳಿಗೆ ಕನ್ನಡ ಪರ ಸಂಘಟನೆಗಳಿಂದ ಎಚ್ಚರಿಕೆ ನೀಡಿವೆ. ಈಗಾಗಲೇ ಹಲವಾರು ಚಿತ್ರಮಂದಿರಗಳಿಂದ ಜೇಮ್ಸ್ ಬದಲಿಗೆ ಆರ್‌ಆರ್‌ಆರ್‌ ಹಾಕಲು ನಿರ್ಧರಿಸಲಾಗಿದೆ. ಆನ್ ಲೈನ್ ನಲ್ಲಿ ಟಿಕೆಟ್ ಮಾರಾಟವಾಗುತ್ತಿದ್ದು ಬಹುತೇಕ ಸೋಲ್ಡ್ ಔಟ್ ಆಗಿದೆ. ಬೆಳಗಿನ ಜಾವ 4 ಗಂಟೆಯಿಂದಲೇ ಆರ್‌ಆರ್‌ಆರ್‌ ಪ್ರದರ್ಶನಕ್ಕೆ ಸಿದ್ಧತೆ ಮಾಡಲಾಗಿದೆ

ಇದನ್ನು ತೀವ್ರವಾಗಿ ಖಂಡಿಸಿ, ಪ್ರತಿಭಟನೆ ಮಾಡಲು ಕರವೇ ನಿರ್ಧಾರ ಮಾಡಿದೆ. ಚಿಕ್ಕಬಳ್ಳಾಪುರದಲ್ಲಿ ಕಾರ್ಯಕ್ರಮ ಮಾಡಿ ಶಿವಣ್ಣ, ಸಿಎಂ ಬೊಮ್ಮಾಯಿಯನ್ನೆಲ್ಲ ಕರೆಸಿದ್ದಾರೆ. ಇವರ ಈ ಸ್ಟ್ರಾಟಜಿಗಳೆಲ್ಲಾ ಕರ್ನಾಟಕದಲ್ಲಿ ವರ್ಕ್ ಔಟ್ ಆಗಲ್ಲ. ಆರ್‌ಆರ್‌ಆರ್ ಚಿತ್ರ ತಂಡ ಪುನೀತ್ ರಾಜ್ ಕುಮಾರ್ ಹೆಗಲ‌ ಮೇಲೆ ಬಂದೂಕು ಇಟ್ಟು ಕನ್ನಡಿಗರ ಗೋಲಿಬಾರ್ ಮಾಡಲು ಹೊರಟಿದೆ. ಜೇಮ್ಸ್ ಚಿತ್ರ ಪ್ರದರ್ಶನಗೊಳ್ಳುತ್ತಿರುವ ಚಿತ್ರ ಮಂದಿರಗಳಲ್ಲಿ ಜೇಮ್ಸ್ ಚಿತ್ರವೇ ಮುಂದುವರೆಯಬೇಕು ಎಂದು ಕರವೇ ಒತ್ತಾಯಿಸಿದೆ.

ಆರ್‌ಆರ್‌ಆರ್‌ ಬೇಕಿದ್ದರೆ ಬೇರೆ ಸಣ್ಣ ಪುಟ್ಟ ಚಿತ್ರ ಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿ. ತೆಲುಗು ಆವೃತಿಯೇ ಹೆಚ್ಚು ಪ್ರದರ್ಶನಕ್ಕೆ ಕರ್ನಾಟಕದಲ್ಲಿ ಇಡಲಾಗಿದೆ. ಕನ್ನಡದಲ್ಲಿ ಡಬ್ಬಿಂಗ್ ಮಾಡಲಾಗಿದ್ದರೂ ತೆಲುಗು ಆವೃತ್ತಿಯನ್ನೇ ಬಿಡುಗಡೆ ಮಾಡ್ತಿರೋದು ಅವರ ಕನ್ನಡ ವಿರೋಧಿ ನೀತಿಯನ್ನು ಸಾರುತ್ತಿದೆ. ಹೀಗಾಗಿ ತೆಲುಗು ಚಿತ್ರಕ್ಕಾಗಿ ಕನ್ನಡ ಸಿನಿಮಾ ಬಲಿಯಾಗಲು ನಾವು ಬಿಡೋದಿಲ್ಲ ಎಂದು ಕರವೇ ಸವಾಲು ಹಾಕಿದೆ‌‌‌.

ಇದನ್ನೂ ಓದಿ : ಮಲ್ಟಿಪ್ಲೆಕ್ಸ್ ನಿಂದ ಜೇಮ್ಸ್ ಕಿಕ್ ಔಟ್ ಗೆ ಒತ್ತಡ : ಬಿಜೆಪಿ ಶಾಸಕರ ವಿರುದ್ಧ ನಿರ್ಮಾಪಕರ ಅಸಮಧಾನ

ಇದನ್ನೂ ಓದಿ :  ಬಾಲಿವುಡ್ ನಲ್ಲಿ ಬಯೋಪಿಕ್ ಪರ್ವ: ತೆರೆಗೆ ಬರಲಿದೆ ವೀರ ಸಾರ್ವಕರ್ ಲೈಫ್ ಸ್ಟೋರಿ

( RRR vs James Movie, Karnataka Rakshana Vedike Warning)

Comments are closed.