KGF chapter 2 :ಕೆಜಿಎಫ್​ 2 ಸಿನಿಮಾ ವೀಕ್ಷಿಸಲಿರುವ ಪ್ರಭಾಸ್​ ಅಭಿಮಾನಿಗಳಿಗೆ ಇಲ್ಲಿದೆ ಗುಡ್​ನ್ಯೂಸ್​

ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಬಹುನಿರೀಕ್ಷಿತ ಕೆಜಿಎಫ್​ ಚಾಪ್ಟರ್​ 2 (KGF chapter 2) ಸಿನಿಮಾ ಇದೇ ಏಪ್ರಿಲ್​ 14ರಂದು ತೆರೆ ಕಾಣಲಿದ್ದು ಅಭಿಮಾನಿಗಳು ಆ ದಿನಕ್ಕಾಗಿ ಕಾತುರರಾಗಿದ್ದಾರೆ. ಸಿನಿಮಾ ರಿಲೀಸ್​ಗೂ ಮುನ್ನ ಸಾಕಷ್ಟು ಕಾರಣಗಳಿಂದ ಕೆಜಿಎಫ್​ 2 ಸಿನಿಮಾ ಅಭಿಮಾನಿಗಳಲ್ಲಿ ಕ್ರೇಜ್​ ಹೆಚ್ಚಿಸುತ್ತಲೇ ಇದೆ. ಈ ಎಲ್ಲದರ ನಡುವೆ ಇದೀಗ ಪ್ರಭಾಸ್​ ಅಭಿಮಾನಿಗಳಿಗೂ ಖುಷಿ ನೀಡುವಂತಹ ವಿಚಾರವೊಂದು ಹೊರಬಿದ್ದಿದೆ. ಕೆಲವು ಹಿಂದಿ ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ ಕೆಜಿಎಫ್​ 2 ಸಿನಿಮಾದ ಜೊತೆಯಲ್ಲಿ ಪ್ರಭಾಸ್​​​ರ ಮುಂದಿನ ಸಿನಿಮಾ ಸಲಾರ್​​​ ಟೀಸರ್​​ ಅಟ್ಯಾಚ್​ ಮಾಡಲಾಗಿದೆಯಂತೆ.


ಈ ರೀತಿಯಾಗಿ ಬಹುನಿರೀಕ್ಷಿತ ಸಿನಿಮಾಗಳಿಗೆ ಬೇರೆ ಸಿನಿಮಾದ ಟೀಸರ್​ಗಳನ್ನು ಅಟ್ಯಾಚ್​ ಮಾಡುವುದು ಇದೇ ಮೊದಲೇನಲ್ಲ. ಉದಾಹರಣೆಗೆ ನಟ ಪುನೀತ್​ ರಾಜ್​ಕುಮಾರ್​ರ ಜೇಮ್ಸ್​ ಸಿನಿಮಾದ ಜೊತೆಯಲ್ಲಿ ಬೈರಾಗಿ ಸಿನಿಮಾದ ಟೀಸರ್​ ಪ್ರಸಾರ ಮಾಡಿದ್ದು ನೆನಪಿದ್ದಿರಬಹುದು.


ಅದೇ ರೀತಿ ಇದೀಗ ಕೆಜಿಎಫ್​ 2 ಸಿನಿಮಾದ ಜೊತೆಯಲ್ಲಿ ಸಲಾರ್​ ಟೀಸರ್​​ ಅಟ್ಯಾಚ್​ ಆಗಲಿದೆ. ಪ್ರಭಾಸ್​​ರ ರಾಧೆ ಶ್ಯಾಮ್​ ಸಿನಿಮಾ ಬಾಕ್ಸಾಫೀಸಿನಲ್ಲಿ ನೆಲ ಕಚ್ಚಿತ್ತು. ಬಾಹುಬಲಿ 2 ಸಿನಿಮಾದ ಬಳಿಕ ಪ್ರಭಾಸ್​​ರ ಯಾವೊಂದು ಸಿನಿಮಾ ಕೂಡ ಟೇಕಾಫ್​ ಆಗುತ್ತಿಲ್ಲ. ಇದೀಗ ಸಲಾರ್​ ಸಿನಿಮಾದ ಮೇಲೆ ಪ್ರಭಾಸ್​ ಮತ್ತೊಮ್ಮೆ ಅಭಿಮಾನಗಳ ಎದುರು ಅದೃಷ್ಟಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ.


ಯಶ್​ ಸಿನಿಮಾ ಕೆಜಿಎಫ್​ 2ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾ ಹೌಸ್​ ಫುಲ್​ ಆಗುತ್ತೆ ಅನ್ನೋದು ಕೂಡ ಎಲ್ಲರಿಗೂ ತಿಳಿದಿದೆ. ಹೀಗಾಗಿ ತಮ್ಮ ಸಿನಿಮಾ ಪ್ರಮೋಷನ್​​ಗೆ ಇದಕ್ಕಿಂತ ಒಳ್ಳೆಯ ವೇದಿಕೆ ಮತ್ತೊಂದಿಲ್ಲ ಎಂದು ಸಲಾರ್​ ಚಿತ್ರತಂಡ ಪ್ಲಾನ್​ ಮಾಡಿದೆ.


ಹೊಂಬಾಳೆ ಫಿಲ್ಮ್ಸಂ ಬ್ಯಾನರ್​ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾಗೆ ಪ್ರಶಾಂತ್​ ನೀಲ್​ ಆ್ಯಕ್ಷನ್ ಕಟ್​ ಹೇಳಿದ್ದಾರೆ. ಅದೇ ರೀತಿ ಸಲಾರ್​ ಸಿನಿಮಾಗೂ ಹೊಂಬಾಳೆ ಫಿಲ್ಮ್ಸಂ ಬಂಡವಾಳ ಹೂಡಿದ್ದರೆ ಪ್ರಶಾಂತ್​ ನೀಲ್​ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನು ಓದಿ : Vijay’s Beast movie : ಕುವೈತ್​​ನಂತೆಯೇ ತಮಿಳುನಾಡಿನಲ್ಲಿಯೂ ‘ಬೀಸ್ಟ್​’ಗೆ ಬ್ಯಾನ್​ ಸಂಕಷ್ಟ

ಇದನ್ನೂ ಓದಿ : KGF 2 in Greece : ಕೆಜಿಎಫ್ 2 ಹವಾ! ಗ್ರೀಸ್ ಲ್ಲಿ ಬಿಡುಗಡೆಗೊಳ್ಳುತ್ತಿರುವ ದಕ್ಷಿಣ ಭಾರತದ ಮೊದಲ ಸಿನಿಮಾ

salaar movie teaser will be released with yash starrer kgf chapter 2 movie

Comments are closed.