Uttar pradesh Strange incident: ಪಿಎಂ ಆವಾಸ್ ಯೋಜನಾ ಹಣವನ್ನು ಸ್ವೀಕರಿಸಿ ಪ್ರೇಮಿಗಳೊಂದಿಗೆ ಪಲಾಯನಗೈದ ವಿವಾಹಿತ ಮಹಿಳೆಯರು

ಉತ್ತರ ಪ್ರದೇಶ: (Uttar pradesh Strange incident) ನಾಲ್ವರು ವಿವಾಹಿತ ಮಹಿಳೆಯರು ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ ಹಣವನ್ನು ಪಡೆದ ನಂತರ ಗಂಡನನ್ನು ಬಿಟ್ಟು ತಮ್ಮ ಪ್ರೇಮಿಗಳೊಂದಿಗೆ ಓಡಿಹೋದ ವಿಚಿತ್ರ ಘಟನೆಯೊಂದು ನಡೆದಿದೆ. ಉತ್ತರ ಪ್ರದೇಶದಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ವಿವಾಹಿತ ಮಹಿಳೆಯರ ಗಂಡಂದಿರು ಆಘಾತಕ್ಕೊಳಗಾಗಿದ್ದಾರೆ.

PMAY ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಆರ್ಥಿಕವಾಗಿ ದುರ್ಬಲ ವರ್ಗ (EWS), ಮತ್ತು ಕಡಿಮೆ ಮತ್ತು ಮಧ್ಯಮ ಆದಾಯದ ಗುಂಪುಗಳಿಗೆ ಸೇರಿದವರು, ಬಡವರಲ್ಲಿನ ನಗರ ವಸತಿ ಕೊರತೆಯನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ, ಸರ್ಕಾರವು ಫಲಾನುಭವಿಗಳ ಖಾತೆಗಳಿಗೆ ನಗದು ಹಣವನ್ನು ವರ್ಗಾಯಿಸುತ್ತದೆ ಇದರಿಂದ ಅವರು ಮನೆಯನ್ನು ಹೊಂದಬಹುದು. ಹೀಗೆ ಇದೇ ಯೋಜನೆಗೆ ಸಂಬಂಧಿಸಿದಂತೆ ದುಡಾದ ಯೋಜನಾಧಿಕಾರಿ ಸೌರಭ್ ತ್ರಿಪಾಠಿ ಅವರು ಯೋಜನೆಯ ಫಲಾನುಭವಿಗಳಿಗೆ ನೋಟಿಸ್ ಕಳುಹಿಸಿದ್ದು, ಕೂಡಲೇ ಮನೆ ನಿರ್ಮಾಣ ಕಾಮಗಾರಿ ಆರಂಭಿಸುವಂತೆ ಆದೇಶ ನೀಡಿದ್ದರೂ ಕೂಡ ಯಾವುದೇ ಅಭಿವೃದ್ಧಿಯಾಗಿಲ್ಲ. ಅವರ ಮನೆಗಳ ನಿರ್ಮಾಣ ಕಾಮಗಾರಿ ಆರಂಭವಾಗದಿದ್ದಾಗ ಈ ವಿಚಿತ್ರ ಪ್ರಕರಣ ಅಧಿಕಾರಿಗಳ ಗಮನಕ್ಕೆ ಬಂದಿದೆ.

ಪಿಎಂಎವೈ ಅಡಿಯಲ್ಲಿ ಕುಟುಂಬದ ಮಹಿಳಾ ಮುಖ್ಯಸ್ಥರು ಮನೆಯ ಮಾಲೀಕರು ಅಥವಾ ಸಹ-ಮಾಲೀಕರಾಗಿರುವುದನ್ನು ಕೇಂದ್ರವು ಕಡ್ಡಾಯಗೊಳಿಸಿದೆ. ಅಂತೆಯೇ ಈ ಯೋಜನೆಯ ಫಲಾನುಭವಿಗಳಾದ ನಾಲ್ವರು ಮಹಿಳೆಯರು ಈ ನಿಬಂಧನೆಯನ್ನು ಬಳಸಿಕೊಂಡಿದ್ದು, ಅವರ ಖಾತೆಗೆ 50,000 ರೂ ಅನುದಾನ ಬಂದ ತಕ್ಷಣ ಅವರು ತಮ್ಮ ಗಂಡನನ್ನು ತೊರೆದು, ತಮ್ಮ ಪ್ರಿಯಕರರೊಂದಿಗೆ ಪಲಾಯನಗೈದಿದ್ದಾರೆ.

ಈ ಘಟನೆಯ ಪರಿಣಾಮವಾಗಿ ಮಹಿಳೆಯರ ಗಂಡಂದಿರು ಪ್ರಸ್ತುತ ಎರಡು ವಿಭಿನ್ನ ಸಮಸ್ಯೆಗಳನ್ನು ಎದುರಿಸುತ್ತಿದ್ದು,ಮನೆ ನಿರ್ಮಾಣ ಪ್ರಾರಂಭವಾಗದ ಕಾರಣ ಜಿಲ್ಲಾ ನಗರಾಭಿವೃದ್ಧಿ ಸಂಸ್ಥೆ (DUDA) ಯಿಂದ ಎಚ್ಚರಿಕೆಯನ್ನು ಪಡೆದಿದ್ದಾರೆ. ಅಲ್ಲದೇ ಇದರಿಂದಾಗಿ ಗಂಡಂದಿರು ಆತಂಕಕ್ಕೊಳಗಾಗಿದ್ದಾರೆ. ಗೊಂದಲಕ್ಕೊಳಗಾದ ಗಂಡಂದಿರಿಗೆ ಈಗ ಏನು ಮಾಡಬೇಕೆಂದು ತೋಚುತ್ತಿಲ್ಲ, ಅದಕ್ಕಾಗಿಯೇ ಅವರು ತಮ್ಮ ಓಡಿಹೋದ ಹೆಂಡತಿಯರ ಬ್ಯಾಂಕ್ ಖಾತೆಗಳಿಗೆ ಮುಂದಿನ ಕಂತನ್ನು ಕಳುಹಿಸದಂತೆ DUDA ಯ ಯೋಜನಾಧಿಕಾರಿಯನ್ನು ಕೇಳಿದ್ದಾರೆ.

ಇದನ್ನೂ ಓದಿ : Lanka prime minister: ಭಾರತ ಶ್ರೀಲಂಕಾ ನಡುವಿನ ನಂಟನ್ನು ಬಿಚ್ಚಿಟ್ಟ ಲಂಕಾ ಪ್ರಧಾನಿ

ಕೊನೆಯದಾಗಿ ಮಹಿಳೆಯರ ಗಂಡಂದಿರು ಸರ್ಕಾರಿ ಕಚೇರಿಗೆ ಭೇಟಿ ನೀಡಿ ತಮ್ಮ ಹೆಂಡತಿಯರು ಹಣವನ್ನು ಪಡೆದುಕೊಂಡು ತಮ್ಮ ಪ್ರಿಯಕರನೊಂದಿಗೆ ಹೊರಟು ಹೋಗಿದ್ದಾರೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದು, ಪಿಎಂಎವೈ ಎರಡನೇ ಕಂತನ್ನು ಜಮಾ ಮಾಡದಂತೆ ಕೇಳಿಕೊಂಡರು. ಇದೀಗ ಈ ಫಲಾನುಭವಿಗಳಿಂದ ಹಣವನ್ನು ವಸೂಲಿ ಮಾಡುವುದು ಹೇಗೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದು, ಪ್ರತಿ ಫಲಾನುಭವಿಯಿಂದ ಹಣವನ್ನು ಮರುಪಡೆಯಲು ಇಲಾಖೆ ಪ್ರಯತ್ನಿಸುತ್ತಿದೆ ಎಂದು ಶ್ರೀ ತ್ರಿಪಾಠಿ ಹೇಳಿದ್ದಾರೆ.

Uttar pradesh Strange incident: Married women eloped with lovers after receiving PM Awas Yojana money

Comments are closed.