ಮಂಗಳೂರಲ್ಲಿ ಕೊರಗಜ್ಜನ ದರ್ಶನ ಪಡೆದ ಡಿ ಬಾಸ್

0

ಸ್ಯಾಂಡಲ್ ವುಡ್ ಡಿ ಬಾಸ್ ದರ್ಶನ್ ತೂಗುದೀಪ್ ಕಡಲನಗರಿ ಮಂಗಳೂರಿಗೆ ಸರ್ಪ್ಲ್ರೈಸ್ ಎಂಟ್ರಿ ಕೊಟ್ಟಿದ್ದಾರೆ. ಅದ್ರಲ್ಲೂ ಕರಾವಳಿಗರ ಪಾಲಿನ ಆರಾಧ್ಯ ದೈವ ಎಸಿಕೊಂಡಿರುವ ಕೊರಗಜ್ಜನ ಪುಣ್ಯಕ್ಷೇತ್ರಕ್ಕೆ ಭೇಟಿ ಕೊಟ್ಟು ಎಲ್ಲರಲ್ಲಿಯೂ ದರ್ಶನ್ ಅಚ್ಚರಿ ಮೂಡಿಸಿದ್ದಾರೆ.

ಕರಾವಳಿಗರ ಪಾಲಿಗೆ ಕೊರಗಜ್ಜ ಇಷ್ಟಾರ್ಥಗಳನ್ನು ಕರುಣಿಸುವ ದೈವ. ತಮ್ಮ ಕಷ್ಟ ಕಾರ್ಪಣ್ಯಗಳನ್ನು ಅಜ್ಜನ ಬಳಿಯಲ್ಲಿ ಹೇಳಿಕೊಂಡು ಸಂಕಷ್ಟಗಳಿಂದ ಪಾರಾಗುತ್ತಾರೆ. ಮದುವೆಯಾಗದವರು, ಮಕ್ಕಳಿಲ್ಲದವರು, ಉದ್ಯೋಗವನ್ನು ಬೇಡಿ ಬರುವವರು ಹೀಗೆ ತನ್ನ ಬಳಿಗೆ ಬೇಡಿ ಬರುವ ಭಕ್ತರಿಗೆ ಸಕಲವನ್ನೂ ಕರಣಿಸುತ್ತಾರೆಂಬ ನಂಬಿಕೆ ಭಕ್ತರಲ್ಲಿದೆ. ಮಾತ್ರವಲ್ಲ ತಮ್ಮ ಹರಿಕೆಯನ್ನು ಹೊತ್ತುಕೊಂಡು ಇಷ್ಟಾರ್ಥಗಳು ಈಡೇರುತ್ತಿದ್ದಂತೆಯೇ ಅಜ್ಜನಿಗೆ ಹರಿಕೆ ಸಲ್ಲಿಸುವುದು ತುಳುನಾಡಲ್ಲಿ ವಾಡಿಕೆ.

ಲಾಕ್ ಡೌನ್ ವೇಳೆಯಿಂದಲೂ ಸಾಕುಪ್ರಾಣಿಗಳ ಜೊತೆಗೆ ಕಾಲ ಕಳೆಯುತ್ತಿರುವ ದರ್ಶನ್ ತೂಗುದೀಪ್ ಅವರು ಬಿಡುವು ಮಾಡಿಕೊಂಡು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.ತಮ್ಮ ಸ್ನೇಹಿತರ ಮೂಲಕವಾಗಿ ಕೊರಗಜ್ಜನ ಪವಾಡಗಳನ್ನು ಅರಿತಿರುವ ದರ್ಶನ್ ತೂಗುದೀಪ್ ಅವರು ಸಡನ್ ಆಗಿ ಮಂಗಳೂರಿಗೆ ಎಂಟ್ರಿಕೊಟ್ಟಿದ್ದಾರೆ. ತನ್ನ ಸ್ನೇಹಿತರ ಜೊತೆಯಲ್ಲಿ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿಯನ್ನು ಕೊಟ್ಟು ತಮ್ಮ ಕೋರಿಕೆಯನ್ನು ಅಜ್ಜನ ಮುಂದೆ ಇರಿಸಿದ್ದಾರೆ.

ಸಾಕಷ್ಟು ಹೊತ್ತು ಕೊರಗಜ್ಜನ ಕ್ಷೇತ್ರದಲ್ಲಿ ಉಳಿದುಕೊಂಡು, ಅಜ್ಜನ ಮಹತ್ವವನ್ನು ಅರಿತುಕೊಂಡಿದ್ದಾರೆ ಡಿ ಬಾಸ್ ದರ್ಶನ್ ತೂಗುದೀಪ್
ಕೊರಗಜ್ಜನ ಗುಡಿಯ ಮುಂಭಾಗದಲ್ಲಿ ನಿಂತು ತನ್ನ ಗೆಳೆಯರೊಂದಿಗೆ ಕ್ಲಿಕ್ಕಿಸಿಕೊಂಡಿರುವ ಪೋಟೋ ಇದೀಗ ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗುತ್ತಿದ್ದಂತೆಯೇ ಡಿ ಬಾಸ್ ಅಭಿಮಾನಿಗಳು ಸಾಕಷ್ಟು ಖುಷಿಯಾಗಿದ್ದಾರೆ.

ಅದ್ರಲ್ಲೂ ಕೊರಗಜ್ಜನ ಕ್ಷೇತ್ರದಕ್ಕೆ ನಟ ದರ್ಶನ್ ತೂಗುದೀಪ್ ಅವರು ಭೇಟಿ ಕೊಟ್ಟಿರುವುದು ಕೊರಗಜ್ಜನ ಭಕ್ತರಿಗೂ ಸಂತಸವನ್ನು ತಂದಿದೆ.

Leave A Reply

Your email address will not be published.