ತುಪ್ಪದ ಬೆಡಗಿಯ ಸಿನಿಮಾ ಜೀವನಕ್ಕೆ ಬೀಳುತ್ತಾ ಫುಲ್ ಸ್ಟಾಪ್ ?

0

ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಇದೀಗ ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ಆರೋಪಕ್ಕೆ ತುತ್ತಾಗಿದ್ದಾರೆ. ಮಾತ್ರವಲ್ಲ ಸಿಸಿಬಿ ಅಧಿಕಾರಿಗಳು ರಾಗಿಣಿಯನ್ನು ಬಂಧಿಸಿ ವಿಚಾರಣೆಯನ್ನೂ ನಡೆಸುತ್ತಿದ್ದಾರೆ. ಒಂದೊಮ್ಮೆ ರಾಗಿಣಿ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರೋದು ದೃಢಪಟ್ಟರೆ ರಾಗಿಣಿ ದ್ವಿವೇದಿ ಸಿನಿಮಾ ಬದುಕು ಅಂತ್ಯವಾಗೋದು ಗ್ಯಾರಂಟಿ.

ಪಂಜಾಬಿ ಕುಟುಂಬದಲ್ಲಿ 1990ರಲ್ಲಿ ಜನಿಸಿದ ರಾಗಿಣಿ ದ್ವಿವೇದಿ ಬಾಲ್ಯದಿಂದಲೇ ಸಿನಿಮಾ ಕ್ಷೇತ್ರಕ್ಕೆ ಬರಲು ಕನಸು ಕಂಡವರು. ರಾಗಿಣಿ ತಂದೆ ಭಾರತೀಯ ಸೇನೆಯಲ್ಲಿ ಜನರ್ಲ್ ಆಗಿದ್ದವರು. 2008ರಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಎಂಟ್ರಿಕೊಟ್ಟ ರಾಗಿಣಿ ಣಿ ಹೈದಾರಾಬಾದಿನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ ಸ್ಫರ್ಧೆಯಲ್ಲಿ ರನ್ನರ್-ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಅಲ್ಲದೇ 2009ರಲ್ಲಿ ಮುಂಬೈ ನಲ್ಲಿ ನಡೆದ ಫೆಮಿನಾ ಮಿಸ್ ಬ್ಯೂಟಿಪುಲ್ ಹೇರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು.

ಕಿಚ್ಚ ಸುದೀಪ್‌ ಅಭಿನಯದ ವೀರ ಮದಕರಿ' ಮೂಲಕ ತನ್ನ ಸಿನಿಪಯಣ ಆರಂಭಿಸಿದ ರಾಗಿಣಿ ಶಿವಣ್ಣ, ಉಪೇಂದ್ರ ಸೇರಿದಂತೆ ಕನ್ನಡದ ಸ್ಟಾರ್ ನಟರ ಜೊತೆಗೂ ತೆರೆ ಹಂಚಿಕೊಂಡಿದ್ದಾರೆ.

ವೀರ ಮದಕರಿ, ಗಂಡೆದೆ, ಕಳ್ಳ ಮಳ್ಳ ಸುಳ್ಳ, ಕಾಂಚನ, ಮಲ್ಲಿಕಾರ್ಜು, ಕೆಂಪೇಗೌಡ, ವಿಲನ್, ಶಿವ, ಆರಕ್ಷಕ, ಎಲೆಕ್ಷನ್, ನಮಸ್ತೆ ಮೇಡಂ, ಲಕ್ಷ್ಮೀ, ಶಿವ, ಪರಪಂಚ, ವೀರ ರಣಚಂಡಿ, ದಿ ಟೆರರಿಸ್ಟ್, ಕಿಚ್ಚು, ಎಂಎಂಸಿಎಚ್, ಅಧ್ಯಕ್ಷ ಇನ್ ಅಮೇರಿಕಾ ಸೇರಿದಂತೆ ಒಟ್ಟು 25 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಅಮ್ಮ ಇನ್ನಷ್ಟೇ ತೆರೆ ಕಾಣಬೇಕಾಗಿದೆ.

ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಹಾಗೂ ಮಲಯಾಲಂ ಸಿನಿಮಾಗಳಲ್ಲಿಯೂ ರಾಗಿಣಿ ಬಣ್ಣ ಹಚ್ಚಿದ್ದಾರೆ. ಮಲಯಾಲಂನ ಕಂದಹಾರ್, ತಮಿಳಿನ ನಿಮಿರುಂದು ನಿಲ್, ಆರ್ಯನ್ ಹಾಗೂ ತೆಲುಗಿನ ಜಂಡಾ ಪಾಯ್ ಕಪಿರಾಜು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಒಂದು ಕಾಲದಲ್ಲಿ ಕನ್ನಡ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದ ರಾಗಿಣಿಗೆ ಶಿವಣ್ಣ ಜೊತೆ ನಟಿಸಿದಶಿವ’ ಚಿತ್ರಕ್ಕೆ ಸೈಮಾ ಪ್ರಶಸ್ತಿ ಕೂಡ ಪಡೆದಿದ್ದಾರೆ. ನಂದಿನಿ ಉತ್ಪನ್ನಗಳ ರಾಯಭಾರಿ ಯಾಗಿಯೂ ಗುರುತಿಸಿಕೊಂಡಿದ್ದ ರಾಗಿಣಿ ಸ್ವತಃ ನೋಂದಾಯಿತ ಅಭಿಮಾನಿಗಳ ಸಂಘವನ್ನು ಹೊಂದಿರುವ ಕನ್ನಡದ ಏಕೈಕ ನಟಿ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಇದೀಗ ಭಾರೀ ಸದ್ದು ಮಾಡುತ್ತಿದೆ. ಸಿನಿಮಾ ನಟರು, ನಟಿಯರು, ರಾಜಕಾರಣಿಗಳ ಮಕ್ಕಳು, ಉದ್ಯಮಿಗಳು ಹಾಗೂ ಸರಕಾರಿ ನೌಕರರ ನಿಜ ಬಣ್ಣ ಬಯಲಾಗಿದೆ. ಕರುನಾಡಲ್ಲಿ ನಡೆಯುತ್ತಿದ್ದ ಡ್ರಗ್ಸ್ ಜಾಲದ ಬೆನ್ನತ್ತಿರುವ ಎನ್ ಸಿಬಿ ಹಾಗೂ ಸಿಸಿಬಿ ಅಧಿಕಾರಿಗಳು ಈಗಾಗಲೇ 13 ಮಂದಿಯ ವಿರುದ್ದ ಎಪ್ ಐಆರ್ ದಾಖಲಿಸಿದ್ದಾರೆ. ಈ ಪೈಕಿ ಪಂಜಾಬಿ ಬೆಡಗಿ ರಾಗಿಣಿ ದ್ವಿವೇದಿಯನ್ನು 2ನೇ ಆರೋಪಿಯನ್ನಾಗಿ ಹೆಸರಿಸಲಾಗಿದೆ.

ಕಳೆದೆರಡು ದಿನಗಳಿಂದಲೂ ಸಿಸಿಬಿ ಅಧಿಕಾರಿಗಳು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಒಂದೊಮ್ಮೆ ವಿಚಾರಣೆಯ ವೇಳೆಯಲ್ಲಿ ರಾಗಿಣಿ ದ್ವಿವೇದಿ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರೋದು ಖಚಿತವಾದ್ರೆ ಗರಿಷ್ಟ 20 ವರ್ಷಗಳ ಕಾಲ ಶಿಕ್ಷೆ ನೀಡಲು ಅವಕಾಶವಿದೆ. ಹೀಗಾಗಿ ಸಿನಿಮಾ ಬದುಕಿಗೆ ಮುಳುವಾಗೋದು ಗ್ಯಾರಂಟಿ.

Leave A Reply

Your email address will not be published.