ಯಾವುದೇ ನೋವಿಗೂ ಕೊನೆಗಾಲ ಅನ್ನೋದು ಇರೋದಿಲ್ಲ.ಆದರೂ ಬದುಕು ಮುಂದೇ ಸಾಗಲೇ ಬೇಕೆಂಬ ತತ್ವ ನೋವುಗಳ ಜೊತೆಗೆ ಬದುಕುವುದನ್ನು ಕಲಿಸುತ್ತದೆ. ಇದು ಸಂದರ್ಶನವೊಂದರಲ್ಲಿ ನಟಿ ಮೇಘನಾ ಸರ್ಜಾ (Meghana Raj Sarja) ಆಡಿದ ಮಾತು.ಬಹುಷಃ ಇಂತ ಮಾತುಗಳ ಆಳದಲ್ಲಿರೋ ನೋವನ್ನು ಆಕೆ ಮಾತ್ರ ಗ್ರಹಿಸಲು ಸಾಧ್ಯ.

ಆದರೆ ಈ ನೋವುಗಳ ಮಧ್ಯೆ ಮುಂದೇ ಮೇಘನಾಗೆ ಮತ್ತೊಮ್ಮೆ ಪ್ರೀತಿಹುಟ್ಟಬಹುದೇ? ಇಂತಹದೊಂದು ಸೂಕ್ಷ್ಮ ಪ್ರಶ್ನೆಗೆ ಮೇಘನಾ ನೀಡಿದ ಉತ್ತರ ಎಲ್ಲರನ್ನೂ ಚಕಿತಗೊಳಿಸಿದೆ. ಹೌದು ಬದುಕು ನೀಡಿದ ಆಘಾತದಿಂದ ಕುಸಿದು ಕುಗ್ಗಿ ಹೋಗಿದ್ದ ಮೇಘನಾ ರಾಜ್ ಸರ್ಜಾ, ಒಂದಿಷ್ಟು ಕಾಲದ ವನವಾಸದ ಬಳಿಕ ಸದ್ಯ ಬಣ್ಣದ ಲೋಕಕ್ಕೆ ಮರಳಿದ್ದಾರೆ.

ತಮ್ಮ ಖುಷಿಯ ಸ್ಥಳ ಬೆಳ್ಳಿ ತೆರೆ ಎಂಬುದನ್ನು ಅರಿತಿದ್ದ ಮೇಘನಾ ಮತ್ತೆ ಬಣ್ಣ ಹಚ್ಚಿ ನಟನೆಗೆ ಇಳಿದಿದ್ದಾರೆ. ಕಿರುತೆರೆ ಬಳಿಕ ತತ್ಸಮ ತದ್ಭವದಂತ ಸಸ್ಪೆನ್ಸ್ ಥ್ರಿಲ್ಲರ್ ಮೂವಿ ಜೊತೆಗೆ ಮೇಘನಾ ಹಿರಿ ತೆರೆಗೂ ಎಂಟ್ರಿಕೊಟ್ಟಿದ್ದು, ಗ್ರ್ಯಾಂಡ್ ಹಾಗೂ ಗೆಲುವಿನ ವೆಲ್‌ಕಂ ಮೇಘನಾಗೆ ಸಿಕ್ಕಿದೆ.

ಈ ಗೆಲುವಿನ ಖುಷಿಯಲ್ಲೇ ಮೇಘನಾ ಹೊಸದೊಂದು ನಾಯಕಿ ಪ್ರಧಾನ ಸಿನಿಮಾಗೂ ಸಹಿ ಹಾಕಿದ್ದಾರೆ. ಈ ಎಲ್ಲ ಖುಷಿಗಳ ಮಧ್ಯೆಯೂ ಮೇಘನಾಗೆ ಹೋದಲ್ಲೆಲ್ಲ ಒಂದಿಷ್ಟು ಕಾಮನ್ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತವೆ.
ಇದನ್ನೂ ಓದಿ : ಸ್ಯಾಂಡಲ್ ವುಡ್ ನಿಂದ ಹಾಲಿವುಡ್ ಗೆ : ಇದು ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾದ ಗುಡ್ ನ್ಯೂಸ್
ಅದರಲ್ಲಿ ಮೊದಲನೇ ಪ್ರಶ್ನೆ ಮೇಘನಾ ಸರ್ಜಾ ಮತ್ತೆ ಮದುವೆಯಾಗ್ತಾರಾ ? ಮೇಘನಾಗೆ ಮತ್ತೊಮ್ಮೆ ಲವ್ ಮಾಡ್ತಾರಾ? ಮೇಘನಾಗೆ ಮತ್ತೊಮ್ಮೆ ಲವ್ ಆಗುತ್ತಾ ಅನ್ನೋದು. ಆದರೆ ಯಾವಾಗಲೂ ತಮ್ಮ ಮೆಚ್ಯುರಿಟಿಯಿಂದಲೇ ಇತರರಿಗಿಂತ ಭಿನ್ನವಾಗಿ ನಿಂತಿರೋ ಮೇಘನಾ ಸರ್ಜಾ ಈ ಪ್ರಶ್ನೆಗಳಿಗೂ ಅತ್ಯಂತ ಸಮಾಧಾನದಿಂದಲೇ ಉತ್ತರಿಸಿದ್ದಾರೆ.

ಜನರು ತಾವು ಕೇಳುವ ಪ್ರಶ್ನೆಗಳಿಗೆ ನನ್ನಿಂದ ಸ್ಪಷ್ಟವಾದ ಉತ್ತರ ಬಯಸುತ್ತಾರೆ. ಆದರೆ ಈ ವಿಷ್ಯದಲ್ಲಿ ನನ್ನಿಂದ ಸ್ಪಷ್ಟವಾದ ಉತ್ತರ ಪಡೆಯೋದು ಕಷ್ಟ. ಯಾಕೆಂದರೇ ನಾನಿನ್ನು ಆ ವಿಷಯಗಳ ಬಗ್ಗೆ ವಿಚಾರವನ್ನೇ ಮಾಡಿಲ್ಲ.
ಇದನ್ನೂ ಓದಿ : ಮಗನ ಜೊತೆ ಪ್ರಪಂಚ ಸುತ್ತುವಾಸೆ: ರಾಯನ್ ರಾಜ್ ಸರ್ಜಾ ಬಗ್ಗೆ ನಟಿ ಮೇಘನಾ ರಾಜ್ ಮಾತು
ಆದರೆ ಆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಅಂದ್ರೇ ಅದು ತಪ್ಪಾಗುತ್ತೆ. ನಾನು ಸುಳ್ಳು ಹೇಳಲು ಬಯಸುವುದಿಲ್ಲ. ನನ್ನ ಸುತ್ತ ಮುತ್ತ ಯಾವಾಗಲೂ ಈ ವಿಚಾರ ಚರ್ಚೆಯಾಗುತ್ತಲೇ ಇರುತ್ತದೆ. ನನ್ನ ಕಿವಿಗೂ ಬೀಳುವಂತೆ ಹಲವರು ಮಾತನಾಡುತ್ತಾರೆ.

ನಾನಿನ್ನು ಆ ವಿಚಾರದ ಬಗ್ಗೆ ಯೋಚನೆಯನ್ನೂ ಮಾಡಿಲ್ಲ. ನಿಮಗೆ ಇನ್ನೊಮ್ಮೆಲವ್ ಆಗಬಹುದಾ ಎಂಬ ಪ್ರಶ್ನೆಗೆ ನಾನು ಈಗ ಉತ್ತರ ನೀಡಲು ಸಾಧ್ಯವಿಲ್ಲ. ಬಹುಷಃ ಮುಂದೇ ಯಾವುದಾದರೂ ವ್ಯಕ್ತಿಇದ್ದರೇ ಈ ಪ್ರಶ್ನೆಗೆ ಉತ್ತರ ಸಿಗಬಹುದು.

ಈಗಲೇ ಆ ಬಗ್ಗೆ ಉತ್ತರಿಸುವುದು ಕಷ್ಟ. ಆದರೆ ಆ ಸಮಯದಲ್ಲಿ ಯಾವುದು ಸರಿ ಎನ್ನಿಸುತ್ತೋ ಆ ನಿರ್ಧಾರವನ್ನು ನಾನು ತೆಗೆದುಕೊಳ್ಳುತ್ತೇನೆ ಎಂದಷ್ಟೆ ಹೇಳಿದ್ದಾರೆ. ಸಾಮಾನ್ಯವಾಗಿ ಈ ತರದ ಪರ್ಸನಲ್ ವಿಚಾರ ಬಂದಾಗ ನಟಿಯರು ತಮ್ಮ ಇಮೇಜ್, ಸೋಷಿಯಲ್ ಮೀಡಿಯಾ ಟ್ರೋಲ್, ಸಿನಿಮಾ ಇಂಡಸ್ಟ್ರಿ ಒಫಿನಿಯನ್ , ಪೋಷಕರ ಗೌರವ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಸುಳ್ಳು ಹೇಳೋದು ಕಾಮನ್.
ಇದನ್ನೂ ಓದಿ : ಬಾಲಿವುಡ್ ನಟಿಯರಿಗೂ ಸೆಡ್ಡು ಹೊಡೆಯೋ ಸುಂದರಿ: ಇದು ಧನ್ಯಾ ರಾಮಕುಮಾರ್ ಮನಸೆಳೆಯೋ ಪೋಟೋಶೂಟ್
ಆದರೆ ಮೇಘನಾ ರಾಜ್ ಸರ್ಜಾ ಮಾತ್ರ ಈ ವಿಚಾರದಲ್ಲೂ ಅತ್ಯಂತ ಮೆಚ್ಯುರಿಟಿಯಿಂದ ವರ್ತಿಸಿ ಸಮಂಜಸ ಉತ್ತರ ನೀಡಿದ್ದಾರೆ. ನಾನು ಚಿರುವನ್ನು ಮರೆತು ಮುಂದುವರೆದು ಇನ್ನೊಂದು ಮದುವೆಯಾಗುತ್ತೇನೆ ಎಂದು ಮೇಘನಾ ಎಲ್ಲಿಯೂ ಹೇಳಿಲ್ಲ. ಅಷ್ಟೇ ಅಲ್ಲ, ನಾನೆಂದೂ ಮದುವೆಯಾಗೋದೇ ಇಲ್ಲ ಎಂದು ಮಹಾನ್ ಪಟ್ಟಕ್ಕೆ ಏರುವ ತ್ಯಾಗದ ಹೇಳಿಕೆಯನ್ನು ನೀಡಿಲ್ಲ.

ಮೇಘನಾ ಈ ಮಾತಿಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ರೆಸ್ಪಾನ್ಸ್ ಬಂದಿದ್ದು, ಮೇಘನಾ ಓಫನ್ ಹಾರ್ಟ್ ಆನ್ಸರ್ ಗೆ ಅಭಿಮಾನಿಗಳು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ ಮಾತ್ರವಲ್ಲ ಅತ್ಯಂತ ಪ್ರಾಮಾಣಿಕವಾದ ನಿಮ್ಮ ಭಾವನೆಯನ್ನು ನಾವು ಸದಾ ಗೌರವಿಸುತ್ತೇವೆ. ಸದಾ ಹೀಗೆ ಇರಿ….ಖುಷಿಯಾಗಿರಿ.
ಚಿರು ಪ್ರೀತಿ ನಿಮ್ಮನ್ನು ಸದಾ ಕಾಯಲಿ ಎಂದು ಹಾರೈಸಿದ್ದಾರೆ. ಇನ್ನೂ ಹಲವರು ನೀವು ಚಿರು ನೆನಪಿನಲ್ಲೇ ಇರಿ ಆದರೆ ಇನ್ನೊಂದು ಮದುವೆಯಾಗಿ ಎಂದು ಕಮೆಂಟ್ ಮಾಡಿದ್ದಾರೆ.
Sandalwood Actress Meghana Raj Sarja Second Marriage Question Straight Answer Chiranjeevi Sarja Wife