ದೇಶದಲ್ಲಿ ದೀಪಾವಳಿ ಸಂಭ್ರಮ ಮನೆಮಾಡಿದೆ. ಸ್ಯಾಂಡಲ್ ವುಡ್ ನಲ್ಲೂ ಬೆಳಕಿನ ಹಬ್ಬದ ಆಚರಣೆ ಜೋರಾಗಿದ್ದು ನಟ-ನಟಿಯರು ಲಕ್ಷ್ಮೀಪೂಜೆ, ವಾಹನ ಪೂಜೆ, ಪೋಟೋಶೂಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಿದ್ದರೇ ಸ್ಯಾಂಡಲ್ ವುಡ್ (Sandalwood) ನಲ್ಲಿ ಬೆಳಕಿನ ದೀಪಾವಳಿ (deepavali) ಹೇಗಿದೆ…! ಇಲ್ಲಿದೆ ಡಿಟೇಲ್ಸ

ಸ್ಯಾಂಡಲ್ ವುಡ್ ನಲ್ಲಿ ಹಬ್ಬದ ಬೆಳಕು,ಮೆರಗು ಜೋರಾಗಿದೆ. ಸದ್ಯ ಚಂದನ ವನದ ಮೋಸ್ಟ್ ಅಡ್ಮಾಯರ್ಡ್ ಕಪಲ್ಸ್ ಎನ್ನಿಸಿರೋ ಯಶ್ ಮತ್ತು ರಾಧಿಕಾ ಮಕ್ಕಳ ಜೊತೆ ಅದ್ದೂರಿ ದೀಪಾವಳಿ ಆಚರಿಸಿದ್ದಾರೆ. ಮಕ್ಕಳೇ ಶೃಂಗರಿಸಿದ ದೀಪಾವಳಿ ಮತ್ತಷ್ಟು ಚೆಂದ ಅನ್ನೋ ಕ್ಯಾಪ್ಸನ್ ಅಡಿಯಲ್ಲಿ ಮನೆಯ ಅಲಂಕಾರದ ಪೋಟೋ ಹಂಚಿಕೊಂಡಿರೋ ರಾಧಿಕಾ (Radika Pandit) ಮತ್ತು ಯಶ್ (yash) ಹಬ್ಬದ ಖುಷಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ಮಗಳ ಸ್ಯಾಂಡಲ್ ವುಡ್ ಪ್ರವೇಶದ ಖುಷಿಯಲ್ಲಿರೋ ಕನ್ನಡದ ಲೇಡಿ ಸೂಪರ್ ಸ್ಟಾರ್ ಮಾಲಾಶ್ರೀ (Malashee) ಮನೆಯಲ್ಲೂ ಲಕ್ಷ್ಮೀಪೂಜೆ ಹಾಗೂ ದೀಪಾವಳಿ ಕಳೆಗಟ್ಟಿದೆ. ಹಬ್ಬದ ಸಂಭ್ರಮದಲ್ಲಿ ಸ್ವತಃ ನಟಿ ಮಾಲಾಶ್ರೀ ಸೀರೆ ಉಟ್ಟು ಕ್ಯಾಮರಾಕ್ಕೆ ಪೋಸ್ ನೀಡಿದ್ದಾರೆ.

ಇನ್ನೂ ತಮ್ಮ ಮೈಬಳುಕಿಸುವ ನೃತ್ಯ ಹಾಗೂ ವರ್ಕೌಟ್ ವಿಡಿಯೋ ಸಿನಿಮಾಗಳಿಂದಲೇ ಸದ್ದು ಮಾಡಿನ ನಟಿ ಹಾಗೂ ನಟಿ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್ ಪರ್ಪಲ್ ಬಣ್ಣದ ಲಂಗ ಬ್ಲೌಸ್ ನಲ್ಲಿ ಗ್ರ್ಯಾಂಡ್ ಪೋಟೋಶೂಟ್ ಮಾಡಿಸಿಕೊಂಡು ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಕೋರಿದ್ದಾರೆ.
ಇದನ್ನೂ ಓದಿ : ಸುಧಾರಾಣಿ 21 ವರ್ಷದ ಬಳಿಕ ಮತ್ತೆ ಡ್ಯುಯೇಟ್: ಸ್ಪೆಶಲ್ ವಿಡಿಯೋ ವೈರಲ್

ಕತ್ತಲೆಯ ಮೇಲೆ ಬೆಳಕಿನ ವಿಜಯದ ಸಂಕೇತವಾದ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸೋಣ ಎಂದು ಅಭಿಮಾನಿಗಳಿಗೆ ಸಂದೇಶ ನೀಡಿದ ಖಡಕ್ ರೋಲ್ ನ ಸುಂದರಿ ರಾಗಿಣಿ ದ್ವಿವೇದಿ ಸೀರೆ ಉಟ್ಟು ಮದುಮಗಳಳಂತೆ ಪೋಸ್ ನೀಡಿ ಹಬ್ಬದ ಖುಷಿ ಹೆಚ್ಚಿಸಿದ್ದಾರೆ.
ಸಿನಿಮಾ ನಡುವೆ ಕೃಷಿಯ ನಂಟನ್ನೂ ಬೆಳೆಸಿಕೊಂಡು ಹೋಗ್ತಿರೋ ನಟಿ ಶ್ರುತಿ ಫಾರ್ಮ್ ಹೌಸ್ ನಲ್ಲಿ ಮಗಳ ಜೊತೆ ಹಬ್ಬ ಆಚರಿಸಿದ್ದಾರೆ. ಸದ್ಯ ವಿದೇಶ ದಲ್ಲೇ ವಾಸ್ತವ್ಯ ಹೂಡಿರೋ ನಟಿ ರಮ್ಯ ತಮ್ಮ ನಿರ್ಮಾಣದ ಮೊದಲ ಚಿತ್ರ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾಗೆ ಶುಭಕೋರುವ ಮೂಲಕ ಹಬ್ಬ ಆಚರಿಸಿದ್ದಾರೆ.
ಇದನ್ನೂ ಓದಿ : ರಾಜಕೀಯಕ್ಕೆ ನಟಿ ರಾಧಿಕಾ ಕುಮಾರಸ್ವಾಮಿ ! ಬರ್ತಡೇ ದಿನವೇ ಬಿಗ್ ಅನೌನ್ಸ್ ಮೆಂಟ್ ?
ರಾಬರ್ಟ್ ಖ್ಯಾತಿಯ ನಟಿ ಆಶಾ ಭಟ್ ದೀಪಗಳನ್ನು ಬೆಳಗುತ್ತಾ, ಮೆಹಂದಿ ಹಚ್ಚಿಕೊಂಡು ಸಂಭ್ರಮಿಸುತ್ತಾ ಬೆಳಕಿನ ಹಬ್ಬದ ಮೆರುಗು ಹೆಚ್ಚಿಸಿ ಕೊಂಡಿದ್ದಾರೆ. ಇನ್ನೂ ಸದ್ಯ ಬ್ಯಾಡ್ ಮ್ಯಾನರ್ಸ್ ಸಿನಿಮಾದ ಟೀಸರ್ ರಿಲೀಸ್ ಮಾಡಿರೋ ಖುಷಿಯಲ್ಲಿರೋ ನಟ ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಜೊತೆ ಮೊದಲ ದೀಪಾವಳಿ ಖುಷಿಯಲ್ಲಿದ್ದಾರೆ.

ಕಾಟೇರಾ ಸಿನಿಮಾದ ಅಚ್ಚ ಕೆಂಪು ರುಮಾಲಿನ ಹೊಸ ರಗಡ್ ಡ್ರೆಸ್ ನ ಪೋಸ್ಟರ್ ಹಂಚಿಕೊಂಡಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ದೀಪಾವಳಿ ನಿಮ್ಮ ಬದುಕಿನಲ್ಲಿ ಖುಷಿಯ ಬೆಳಕನ್ನು ತುಂಬಲಿ ಎಂದು ಹಾರೈಸಿದ್ದಾರೆ. ಯಾವ ಸ್ಟಾರ್ ನಟರಿಗೂ ಕಡಿಮೆ ಇಲ್ಲದಷ್ಟು ಫ್ಯಾನ್ಸ್ ಹೊಂದಿರೋ ಸಿಂಗರ್ ಹಾಗೂ ಬಹುಭಾಷಾ ನಟ ಸುದೀಪ್ ಪ್ರೀತಿಯ ಪುತ್ರಿ ಸಾನ್ವಿ ಸುದೀಪ್ ಸಖತ್ ಟ್ರೆಡಿಶನಲ್ ಡ್ರೆಸ್ ನಲ್ಲಿ ಮಿಂಚೋ ಮೂಲಕ ಅಭಿಮಾನಿಗಳ ಖುಷಿ ಹೆಚ್ಚಿಸಿದ್ದಾರೆ.
ಇದನ್ನೂ ಓದಿ : ಶೂಟಿಂಗ್ ಸೆಟ್ ನಲ್ಲಿ ಪುನೀತ್ ಪುತ್ರಿ: ನಟನೆಗೆ ಎಂಟ್ರಿಕೊಟ್ಟರಾ ವಂದಿತಾ ಪುನೀತ್ ರಾಜ್ ಕುಮಾರ್
ಸಕಾರಾತ್ಮಕವಾದ ಬೆಳಕು ನಿಮ್ಮೆಲ್ಲರ ಬೆಳಕನ್ನು ಬೆಳಗಲಿ ಎಂದಿರೋ ಶಿವರಾಜ್ ಕುಮಾರ್ ಕ್ರಿಕೆಟ್ ಮ್ಯಾಚ್ ನೋಡುತ್ತಾ ದೀಪಾವಳಿಯ ಹಬ್ಬವನ್ನು ಎಂಜಾಯ್ ಮಾಡಿದ್ದಾರೆ. ಒಟ್ಟಿನಲ್ಲಿ ಚಂದನವನದಲ್ಲಿ ಸುಂದರ ದೀಪಾವಳಿ ಸಂಭ್ರಮ ಮನೆ ಮಾಡಿದ್ದು ಅಭಿಮಾನಿಗಳಿಗಾಗಿ ಸ್ಟಾರ್ ಗಳ ದೀಪಾವಳಿ ಝಲಕ್ ಇಲ್ಲಿದೆ ನೋಡಿ.
Sandalwood Celebration Diwali Here’s a Color Full Album Yash Radhika Pandit, Shivaraj Kumar, Abhishek Ambarish Ramya Ragini dwivedi