KGF-2: ಮುನ್ನಾಭಾಯಿ ಬರ್ತಡೇಗೆ ಸ್ಪೆಶಲ್ ಗಿಫ್ಟ್….! ಅಧೀರನ ಲುಕ್ ಕಂಡು ಬೆಚ್ಚಿದ ಸ್ಯಾಂಡಲ್ ವುಡ್….!!

ಬಾಲಿವುಡ್ ನಟ ಹಾಗೂ ಕೆಜಿಎಫ್-2 ಕ್ರೂರ ವಿಲನ್ ಮುನ್ನಾಬಾಯಿ ಅಲಿಯಾಸ್ ಸಂಜಯ್ ದತ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 62 ನೇ ವಸಂತಕ್ಕೆ ಕಾಲಿಟ್ಟಿರೋ ಸಂಜಯ್ ದತ್ ಗೆ ಬಾಲಿವುಡ್,ಸ್ಯಾಂಡಲ್ ವುಡ್ ನಟರು ಶುಭಹಾರೈಸಿದ್ದು, ಕೆಜಿಎಫ್-2 ಚಿತ್ರತಂಡ ಅಧೀರ್ ನ ಲುಕ್ ರಿವೀಲ್ ಮಾಡೋ ಮೂಲಕ ಗಿಫ್ಟ್ ನೀಡಿದೆ.

ಇತ್ತೀಚಿಗಷ್ಟೇ ಕ್ಯಾನ್ಸರ್ ನಿಂದ ಚೇತರಿಸಿಕೊಂಡ ಸಂಜಯ್ ದತ್ ಕೆಜಿಎಫ್-2 ನಲ್ಲಿ ಅಧೀರ್ ಪಾತ್ರದ ಮೂಲಕ ಕುತೂಹಲ ಮೂಡಿಸಿದ್ದರು. ಕ್ರೂರತೆಯೇ ಮೈವೆತ್ತಂತಿರುವ ಅಧೀರ್ ಪಾತ್ರದ ಲುಕ್ ಕೆಜಿಎಫ್-2 ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು.

ಕೆಜಿಎಫ್-2 ರಿಲೀಸ್ ಡೇಟ್ ಅನೌನ್ಸ್ ಮಾಡದ ಚಿತ್ರತಂಡ, ಒಂದೊಂದೇ ಅಪ್ಡೇಟ್ ಮೂಲಕ ಪ್ರೇಕ್ಷಕರಿಗೆ  ಮಾಹಿತಿ ನೀಡುತ್ತಲೇ ಬಂದಿದೆ. ಈಗ ಸಂಜಯ್ ದತ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕೈಯಲ್ಲಿ ಖಡ್ಗ ಹಿಡಿದ ಕ್ರೂರ ಅಧೀರ್ ನ ಪಾತ್ರವನ್ನು ರಿವೀಲ್ ಮಾಡಲಾಗಿದೆ.

ಅಲ್ಲದೇ ಸಂಜಯ್ ದತ್ ಪೋಸ್ಟರ್ ಹಾಗೂ ಪೋಟೋ ಜೊತೆ  ಯುದ್ಧವು ಪ್ರಗತಿಗಾಗಿ ಆಗಿದೆ.

ಇದನ್ನು ರಣಹದ್ದುಗಳು ಸಹ ನನ್ನೊಂದಿಗೆ ಅಪ್ಪುತ್ತವೆ ಎಂದು ಕ್ಯಾಪ್ಸನ್ ನೀಡಲಾಗಿದೆ. ಅಧೀರ್ ನ ಫರ್ಸ್ಟ್ ಲುಕ್ ಗೆ ಯಶ್ ಹಾಗೂ ಕೆಜಿಎಫ್ ಅಭಿಮಾನಿಗಳು ಸಖತ್ ಖುಷಿಯಾಗಿದ್ದು, ಚಿತ್ರಬಿಡುಗಡೆಗೆ ತುದಿಗಾಲಿನಲ್ಲಿ ನಿಂತು ಕಾಯ್ತಿದ್ದಾರೆ.

Comments are closed.