Tokyo Olympics: ಕ್ವಾರ್ಟರ್ ಫೈನಲ್ ಗೆ ಎಂಟ್ರಿ ಕೊಟ್ಟ ಭಾರತದ ಪಿ. ವಿ. ಸಿಂಧು

ಟೋಕಿಯೊ : ಭಾರತದ ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧೂ ಅವರು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮಹಿಳಾ ಸಿಂಗಲ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಪದಕ ಗೆಲ್ಲುವ ಭಾರತೀಯರ ಆಸೆಗೆ ಇನ್ನಷ್ಟು ಹತ್ತಿರವಾಗಿದ್ದಾರೆ.

ಈ ಬಾರಿ ಒಲಿಂಪಿಕ್ಸ್‌ ನಲ್ಲಿ ಭರ್ಜರಿ ಆಟ ಪ್ರದರ್ಶಿಸುತ್ತಿರುವ ಪಿ.ವಿ.ಸಿಂಧೂ ಅವರು 16 ರ ಸುತ್ತಿನಲ್ಲಿ ಡೆನ್ಮಾರ್ಕ್ ನ ಮಿಯಾ ಬ್ಲಿಚ್ ಫೆಲ್ಡ್ ಅವರನ್ನು 21-15, 21-13 ರಿಂದ ಪಿ.ವಿ. ಸಿಂಧು ಸೋಲಿಸಿದ್ದಾರೆ. ಈ ಮೂಲಕ ಟೋಕಿಯೊ ಒಲಂಪಿಕ್ಸ್ 2020 ರ ಕ್ವಾರ್ಟರ್ ಫೈನಲ್ ಗೆ ಎಂಟ್ರಿ ಕೊಟ್ಟಿದ್ದಾರೆ.

ಹಿಂದಿನ ಪಂದ್ಯಗಳಲ್ಲಿಯೂ ಪಿ.ವಿ.ಸಿಂಧೂ ಎರಡು ಸೆಟ್‌ ಗಳಲ್ಲಿಯೇ ಗೆಲುವು ಕಂಡಿದ್ದಾರೆ. ಅಲ್ಲದೇ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡವು ಒಲಿಂಪಿಕ್ ಚಾಂಪಿಯನ್ ಅರ್ಜೆಂಟೀನಾವನ್ನು ಎದುರಿಸುತ್ತಿದೆ.

Comments are closed.