Hombalefilms:ಸುದೀಪ್ ಗಾಗಿ ಹೊಂಬಾಳೆ ನೆಕ್ಸ್ಟ್ ಸಿನಿಮಾ? ಕುತೂಹಲ ಮೂಡಿಸಿದೆ ಟ್ವೀಟ್….!!

ಒಂದಾದ ಮೇಲೊಂದು ಸಿನಿ ಬ್ರೇಕಿಂಗ್  ಸುದ್ದಿಗಳನ್ನು ನೀಡುತ್ತಲೇ ಸಾಗುತ್ತಿರುವ ಸಿನಿಮಾ ನಿರ್ಮಾಣ ಕ್ಷೇತ್ರದ ದೈತ್ಯ ಶಕ್ತಿಯಾಗಿ ಬೆಳೆಯುತ್ತಿರುವ ಹೊಂಬಾಳೆ ಫಿಲ್ಸ್ಮಂ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ. ಸಾಲು ಸಾಲು ಬಿಗ್ ಬಜೆಟ್ ಚಿತ್ರಗಳ ನಡುವೆಯೇ ನಾಳೆ ಅಂದ್ರೆ ಅಗಸ್ಟ್ 6 ರಂದು 11 ನೇ ಚಿತ್ರ ಘೋಷಿಸುವುದಾಗಿ ಹೇಳಿದೆ.

2013 ರಲ್ಲಿ ನಿನ್ನಿಂದಲೇ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಸಿನಿಮಾ ನಿರ್ಮಾಣ ಕ್ಷೇತ್ರ ಭರವಸೆಯಾಗಿ ಎಂಟ್ರಿಕೊಟ್ಟ ಹೊಂಬಾಳೆ ಫಿಲ್ಸ್ಮಂ ಒಂದಾದ ಮೇಲೊಂದು ಬಿಗ್ ಬಜೆಟ್ ಹಾಗೂ ಸ್ಟಾರ್ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನೀಡುತ್ತಲೇ ಬರುತ್ತಿದೆ.

ಕೆಲ ದಿನಗಳ ಹಿಂದೆಯಷ್ಟೇ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ರಿಚರ್ಡ್ ಆಂಟ್ಯನಿ ಸಿನಿಮಾ ಘೋಷಿಸಿರುವ ಹೊಂಬಾಳೆ ಫಿಲ್ಸ್ಮಂ ತನ್ನ 11 ಸಿನಿಮಾ ಘೋಷಿಸಲು ಸಿದ್ಧವಾಗಿದೆ.

ಅಗಸ್ಟ್ 6 ರಂದು 11 ನೇ ಸಿನಿಮಾದ ಟೈಟಲ್ ಹಾಗೂ ಫರ್ಸ್ಟ್ ಲುಕ್ ಅನೌನ್ಸ್ ಮಾಡೋದಾಗಿ ಹೊಂಬಾಳೆ ಟ್ವೀಟ್ ಮಾಡಿದೆ. ಅಲ್ಲದೇ ನಿನ್ನೊಳಗಿನ ಕಿಚ್ಚು ನಿನ್ನನ್ನು ಸುಡದಿರಲಿ ಎಂಬ ಟ್ಯಾಗ್ ಲೈನ್ ನೀಡಿರುವ ಹೊಂಬಾಳೆ ಸಿನಿಮಾತಂಡ ಕಿಚ್ಚು ಶಬ್ದಕ್ಕೆ ಕೋಟ್ ಮಾಡಿದೆ.

ಹೀಗಾಗಿ ಬಹುತೇಕ ಎಲ್ಲ ಸ್ಟಾರ್ ಗಳಿಗಾಗಿ ಸಿನಿಮಾ ನಿರ್ಮಿಸಿರುವ ತಮ್ಮ 11 ನೇ ಸಿನಿಮಾದಲ್ಲಿ ಸುದೀಪ್ ರನ್ನು ನಾಯಕರನ್ನಾಗಿ ಆಯ್ಕೆಮಾಡಿಕೊಂಡಿದೆ ಎಂದು ಅಂದಾಜಿಸಲಾಗುತ್ತಿದೆ.ಎಲ್ಲ ಸಂದೇಹಗಳಿಗೆ ಶುಕ್ರವಾರ 11.43 ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಉತ್ತರ ನೀಡಲಿದೆ.

Comments are closed.