ಪೋಟೋಶೂಟ್ ನಲ್ಲಿ ಮಿಂಚಿದ ಬಿಗ್ ಬಾಸ್ ಚೆಲುವೆ: ವೈಷ್ಣವಿ ನೋಡಿ ಬೆರಗಾದ ಅಭಿಮಾನಿಗಳು!

ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಅತ್ಯಂತ ತಾಳ್ಮೆಯಿಂದ ಆಟವಾಡಿ ಪ್ರೇಕ್ಷಕರ ಮನಗೆದ್ದ ನಟಿ ವೈಷ್ಣವಿ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಅದು ಮತ್ತೇನಲ್ಲ ಕಲರ್ ಫುಲ್ ಪೋಟೋಶೂಟ್ ಮೂಲಕ ಮಿಂಚಿದ್ದಾರೆ.

ಬಿಗ್ ಬಾಸ್ ಸೀಸನ್ 8 ರಲ್ಲಿ ಗೆಲ್ಲುವ ಸ್ಪರ್ಧಿ ಎಂದೇ ಪರಿಗಣಿತವಾಗಿದ್ದ ವೈಷ್ಣವಿ ತಮ್ಮ ತಾಳ್ಮೆಯಿಂದಲೇ ಫಿನಾಲೆಯವರೆಗೂ ತಲುಪಿದ್ದರು. ಇಂತಿಪ್ಪ ವೈಷ್ಣವಿ ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ರಾಣಿಪಿಂಕ್ ಬಣ್ಣದ ಸೀರೆಯಲ್ಲಿ ಪಡ್ಡೆಹೈಕಳ ಮನಗೆದ್ದಿದ್ದಾರೆ.

ಗ್ರಾಮೀಣ ಸೊಗಡಿನ ಪ್ರದೇಶದಲ್ಲಿ ಗ್ರ್ಯಾಂಡ್ ಸೀರೆ ಹಾಗೂ ಅದಕ್ಕೊಪ್ಪುವ ಅಲಂಕಾರದಲ್ಲಿ ವೈಷ್ಣವಿ ಪೋಟೋಶೂಟ್ ಗೆ ಪೋಸ್ ನೀಡಿದ್ದು, ಪೋಟೋಸ್ ಸೋಷಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿದ್ದಾರೆ.

ವೈಷ್ಣವಿ ಪೋಟೋಶೂಟ್ ಗಾಗಿ ಉಟ್ಟಿರೋ ಸೀರೆ ಕೂಡ ವಿಶೇಷವಾಗಿದ್ದು, ಇದರಲ್ಲಿ ಕಲಾವಿದರ ಕೈಚಳಕದಿಂದ ಸೆರಗಿನಲ್ಲಿ ರಾಮಾಯಣವನ್ನು ಬಿಂಬಿಸುವ ರಾಮ, ಸೀತೆ, ಆಂಜನೇಯ, ಸೀತಾಪಹರಣದ ದೃಶ್ಯಗಳು ನೇಯಲ್ಪಟ್ಟಿವೆ.

ವೈಷ್ಣವಿ ಹಂಚಿಕೊಂಡ ಮುದ್ದಾದ ಪೋಟೋಗಳಿಗೆ ಅಭಿಮಾನಿಗಳು ಲೈಕ್ಸ್ ಒತ್ತಿದ್ದು, ಸಖತ್ ಕಮೆಂಟ್ ಕೂಡ ಮಾಡ್ತಿದ್ದಾರೆ. ವೈಷ್ಣವಿ ತಾವು ಲವ್ ಮಾಡೋದ್ರಲ್ಲಿ ಹಿಂದೆ ಉಳಿದಿದ್ದು, ಬಿಗ್ ಬಾಸ್ ಮುಗಿದ ಮೇಲೆ ಮದುವೆಯಾಗೋ ಆಸೆ ಇದೆ ಎಂದಿದ್ದರು.

Comments are closed.