ತಡವಾಗಿ ಎಚ್ಚೆತ್ತ ಚಲನಚಿತ್ರ ವಾಣಿಜ್ಯ ಮಂಡಳಿ : ಇನ್ಮುಂದೆ ಶೂಟಿಂಗ್ ಗೆ ಇನ್ಸೂರೆನ್ಸ್ ಕಡ್ಡಾಯ!

ಕಳೆದ ಕೆಲ ವರ್ಷಗಳಿಂದ ಶೂಟಿಂಗ್ ಸೆಟ್ ನಲ್ಲಿ ನಡೆದ ದುರ್ಘಟನೆಗಳು, ಸಾವುಗಳ ಬಳಿಕ ತಡವಾಗಿ ಎಚ್ಚೆತ್ತುಕೊಂಡ ಚಲನಚಿತ್ರ ವಾಣಿಜ್ಯ ಮಂಡಳಿ ಕೊನೆಗೂ ಖಡಕ್ ರೂಲ್ಸ್ ಸಿದ್ಧಪಡಿಸಿದ್ದು, ನಿಯಮ ಪಾಲಿಸುವುದು ಕಡ್ಡಾಯ ಎಂದಿದೆ.

ಲವ್ ಯೂ ರಚ್ಚು ಸಿನಿಮಾದ ಸಾಹಸ ದೃಶ್ಯ ಶೂಟಿಂಗ್ ವೇಳೆ ಫೈಟರ್ ವಿವೇಕ್ ಎಂಬಾತ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದ.  ಈ ಘಟನೆ ಬಳಿಕ ಶೂಟಿಂಗ್ ಸುರಕ್ಷತೆಯ ಬಗ್ಗೆ ಚರ್ಚೆಗಳು ಆರಂಭವಾಗಿದ್ದವು. ಹೀಗಾಗಿ ವಾಣಿಜ್ಯ ಮಂಡಳಿ ಕಠಿಣ ಕಾನೂನು ರೂಪಿಸಿದೆ.

ಇನ್ಮುಂದೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ  ಎಲ್ಲ ಫೈಟರ್ ಗಳು ಸೇರಿದಂತೆ ಕಾರ್ಮಿಕರಿಗೆ ಇನ್ಸುರೆನ್ಸ್ ಕಡ್ಡಾಯ.  ಅಲ್ಲದೇ ಇನ್ಸುರೆನ್ಸ್ ಇರುವ ಕಲಾವಿದರನ್ನು ಮಾತ್ರ  ನಿರ್ಮಾಪಕರು ತಮ್ಮ ಸಿನಿಮಾಗಳಲ್ಲಿ ಬಳಸಿಕೊಳ್ಳಬೇಕು.

ಸಾಹಸ ದೃಶ್ಯಗಳ ಶೂಟಿಂಗ್ ವೇಳೆ ಅಂಬುಲೆನ್ಸ್, ಡಾಕ್ಟರ್ಸ್,ನರ್ಸ್, ಫರ್ಸ್ಟ್ ಏಡ್ ಸೌಲಭ್ಯವನ್ನು ಹೊಂದಿರುವುದು ಕಡ್ಡಾಯ. ಅಲ್ಲದೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವವರಿಗೆ ನಿರ್ಮಾಪಕರು ಗ್ರೂಪ್ ಇನ್ಸೂರೆನ್ಸ್ ಮಾಡಿಸಬೇಕೆಂದು ಮಂಡಳಿ ಹೇಳಿದೆ.

ಇದನ್ನೂ ಓದಿ : ನನ್ನ ಬೆಳೆಸಿರೋ ಜನ ನನ್ನ ನಂಬ್ತಾರೆ : ಸರಿ ತಪ್ಪುಗಳ ಲೆಕ್ಕ ಆ ಭಗವಂತನ ಬಳಿಯಿದೆ ಎಂದ ಡಿಂಪಲ್‌ ಕ್ವೀನ್ ರಚಿತಾ ರಾಮ್‌

ಅಲ್ಲದೇ ಕಾರ್ಮಿಕರು ಶೂಟಿಂಗ್ ಗೆ ಸ್ವಯಂ ಪ್ರೇರಿತವಾಗಿ ಒಪ್ಪಿ, ಒಪ್ಪಿದ ಪತ್ರಕ್ಕೆ ಸಹಿ ಹಾಕಿ ಚಿತ್ರೀಕರಣಕ್ಕೆ ಹಾಜರಾಗಬೇಕು. ಒಂದೊಮ್ಮೆ ಏನಾದ್ರು ಅವಘಡಗಳು ನಡೆದರೇ ಕಾರ್ಮಿಕರ ಸಂಘದ ಸದಸ್ಯರೇ ಹೊಣೆ ಹೊರಬೇಕೆಂದು ಫಿಲ್ಮಂ ಚೇಂಬರ್ ಹೇಳಿದೆ.  ‌

ಇದನ್ನೂ ಓದಿ : LOVE U ರಚ್ಚು ಸಿನಿಮಾ ವೇಳೆ ದುರಂತ : ನಾಲ್ವರ ಬಂಧನ, ಸಂಕಷ್ಟದಲ್ಲಿ ಚಿತ್ರತಂಡ

Comments are closed.