viral video : ಕ್ರಿಕೆಟ್‌ ಬರಕ್ಕೆ ಪಾಕಿಸ್ತಾನ ತತ್ತರ : ತರಕಾರಿ ತೋಟವಾಗಿ ಬದಲಾಗಿವೆ ಕ್ರಿಕೆಟ್‌ ಸ್ಟೇಡಿಯಂಗಳು

ಒಂದು ಕಾಲದಲ್ಲಿ ಕ್ರಿಕೆಟ್‌ನಲ್ಲಿ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದ ಪಾಕಿಸ್ತಾನದಲ್ಲೀಗ ಕ್ರಿಕೆಟ್‌ ಬರ ಎದುರಾಗಿದೆ. ಭಯೋತ್ಪಾದನೆ, ಕೊರೊನಾ ಆರ್ಭಟಕ್ಕೆ ಪಾಕಿಸ್ತಾನ ತತ್ತರಿಸಿ ಹೋಗಿದೆ. ಅದ್ರಲ್ಲೂ ವಿಶ್ವದ ಯಾವುದೇ ರಾಷ್ಟ್ರಗಳು ಪಾಕಿಸ್ತಾನದಲ್ಲಿ ಕ್ರಿಕೆಟ್‌ ಆಡೋದಕ್ಕೆ ಹಿಂದೇಟು ಹಾಕುತ್ತಿವೆ. ಈ ನಡುವಲ್ಲೇ ಪಾಕಿಸ್ತಾನದ ಕ್ರಿಕೆಟ್‌ ಸ್ಟೇಡಿಯಂಗಳು ತರಕಾರಿ ತೋಟಗಾಗಿ ಪರಿವರ್ತನೆ ಹೊಂದಿವೆ.

ಭಾರತ ಮತ್ತು ಪಾಕಿಸ್ತಾನ ವಿರುದ್ದದ ಕ್ರಿಕೆಟ್‌ ಪಂದ್ಯವೆಂದ್ರೆ ಸಾಕು ಇಡೀ ವಿಶ್ವವೇ ಜಾತಕ ಪಕ್ಷಿಯಂತೆ ಕಾದು ಕುಳಿತಿರುತ್ತೆ. ಪಾಕಿಸ್ತಾನ ಕ್ರಿಕೆಟ್‌ಗೆ ಹೆಚ್ಚು ಮಹತ್ವವನ್ನೂ ನೀಡುತ್ತಿತ್ತು. ಆದ್ರೆ ತಾನು ತೊಡಿಕೊಂಡ ಹೊಂಡಕ್ಕೆ ಇಂದು ತಾನೇ ಬಿದ್ದ ಸ್ಥಿತಿಯಲ್ಲಿದೆ. ಉಗ್ರರರನ್ನು ಸಾಕಿದ ತಪ್ಪಿಗೆ ತವರು ನೆಲದಲ್ಲಿ ಕ್ರಿಕೆಟ್‌ ಪಂದ್ಯವೇ ನಡೆಯದ ಸ್ಥಿತಿಗೆ ತಲುಪಿದೆ.

ಇದನ್ನೂ ಓದಿ : ತಾನೇ ಅಪ್ಘಾನ್‌ ಅಧ್ಯಕ್ಷನೆಂದು ಘೋಷಿಸಿಕೊಂಡ ಉಪಾಧ್ಯಕ್ಷ ಅಮರುಲ್ಲಾ ಸಲೇಹ್

ಪಾಕಿಸ್ತಾನದಲ್ಲಿ 2009 ರಲ್ಲಿ ಶ್ರೀಲಂಕಾ ತಂಡದ ಮೇಲೆ ನಡೆದ ಭಯೋತ್ಪಾದಕ ದಾಳಿಯಿಂದಾಗಿ ವಿಶ್ವದ ಯಾವುದೇ ರಾಷ್ಟ್ರಗಳು ಕೂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕಿವೆ. ಹೀಗಾಗಿ ಯಾವುದೇ ಅಂತರಾಷ್ಟ್ರೀಯ ಪಂದ್ಯಾವಳಿಗಳೇ ನಡೆಯುತ್ತಿಲ್ಲ. ಅದ್ರಲ್ಲೂ ಕರಾಚಿ ಹಾಗೂ ಲಾಹೋರ್‌ನಲ್ಲಿ ಒಂದಿಷ್ಟು ಅಂತರಾಷ್ಟ್ರೀಯ ಪಂದ್ಯಗಳ ಆಯೋಜನೆಯಾಗಿದ್ದರೂ ಕೂಡ ಕೊರೊನಾ ಮಹಾಮಾರಿಯ ಹೊಡೆತಕ್ಕೆ ಕ್ರಿಕೆಟ್‌ ಬರ ಎದುರಾಗಿದೆ.

ಮುಲ್ತಾನ್ ಮತ್ತು ಫೈಸಲಾಬಾದ್ ಕೂಡ ಕ್ರಿಕೆಟ್ ಸ್ಟೇಡಿಯಂಗಳು ಅಂತರಾಷ್ಟ್ರೀಯ ಪಂದ್ಯಾವಳಿಗಳನ್ನುಆಯೋಜಿಸುತ್ತಿದ್ದವು, ಆದರೆ ದೇಶದಲ್ಲಿ ಹೆಚ್ಚಿನ ಕ್ರೀಡಾಂಗಣಗಳಿಲ್ಲ. ಕೆಲವು ಕ್ರೀಡಾಂಗಣಗಳ ಪರಿಸ್ಥಿತಿಗಳು ಬದಲಾಗಿವೆ. ಆಘಾತಕಾರಿ ಘಟನೆಯೊಂದರಲ್ಲಿ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಖಾನೆವಾಲ್‌ನಲ್ಲಿರುವ ಕ್ರಿಕೆಟ್ ಕ್ರೀಡಾಂಗಣವು ತರಕಾರಿ ತೋಟವಾಗಿ ಬದಲಾಗುತ್ತಿರುವ ಚಿತ್ರಗಳು ವೈರಲ್ ಆಗಿವೆ.

ಇದನ್ನೂ ಓದಿ : ಸಂಕಷ್ಟದಲ್ಲೇ ಟಿ 20 ವಿಶ್ವಕಪ್ ಗೆ ಸಿದ್ದವಾಗ್ತಿದೆ ಅಪ್ಘಾನಿಸ್ತಾನ್‌ ಕ್ರಿಕೆಟ್‌ ತಂಡ

ಕ್ರಿಕೆಟಿಗರನ್ನು ಕ್ರೀಡೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಕ್ರೀಡಾಂಗಣವನ್ನು ನಿರ್ಮಿಸಲು ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಕ್ರೀಡಾಂಗಣವು ಸರಿಯಾದ ಅಭ್ಯಾಸ ಪ್ರದೇಶ, ಗ್ಯಾಲರಿ ಮತ್ತು ಸುಸಜ್ಜಿತ ಮೈದಾನವನ್ನು ನಿರ್ಮಾಣ ಮಾಡಲಾಗಿತ್ತು. ಆದ್ರೀಗ ಕ್ರಿಕೆಟ್‌ ಮೈದಾನ ರೈತರ ವಶದಲ್ಲಿದ್ದು, ಕ್ರೀಡಾಂಗಣವನ್ನು ತರಕಾರಿ ತೋಟವಾಗಿ ಪರಿವರ್ತನೆ ಮಾಡಲಾಗಿದ್ದು, ಮೆಣಸಿನಕಾಯಿ, ಕುಂಬಳಕಾಯಿ ಇತ್ಯಾದಿಗಳನ್ನು ಬೆಳೆಯುತ್ತಿದೆ.

Comments are closed.