Sandalwood New Heroines : 2022ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಗೆಲುವು ಸಾಧಿಸಿದ ಹೊಸ ನಟಿ ಮಣಿಯರು

2022 ಕನ್ನಡ ಸಿನಿಲೋಕ ಪಾಲಿಗೆ ಗೋಲ್ಡನ್‌ ಇಯರ್‌ ಎಂದರೆ ತಪ್ಪಾಗಲಾರದು. ಈ ವರ್ಷ ಬಿಡುಗಡೆಗೊಂಡ ಹಲವಾರು ಕನ್ನಡ ಸಿನಿಮಾಗಳು ಭಾರತೀಯ ಸಿನಿಮಾರಂಗದಲ್ಲೇ ಗೆದ್ದು ಬೀಗಿವೆ. ಅದರಲ್ಲೂ ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ಹೊಸ ನಟಿಯರು (Sandalwood New Heroines) ತಮ್ಮ ಅದ್ಭುತ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹಾಗಾಗಿ ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ಹೊಸ ನಟಿಯರದೇ ಮೇಲುಗೈ ಆಗಿದೆ.

ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ತೆರೆಕಂಡ ಜೇಮ್ಸ್, ಕೆಜಿಎಫ್ ಚಾಪ್ಟರ್ 2, ವಿಕ್ರಾಂತ್ ರೋಣ, 777 ಚಾರ್ಲಿ ಹಾಗೂ ಕಾಂತಾರ ಈ ಐದು ಸಿನಿಮಾಗಳು ಸಹ ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿಗಿಂತ ಅಧಿಕ ಹಣ ಗಳಿಸಿ ಅಬ್ಬರಿಸಿವೆ. ಈ ಪೈಕಿ ಕೆಜಿಎಫ್ ಚಾಪ್ಟರ್ 2, ಕಾಂತಾರ ಹಾಗೂ 777 ಚಾರ್ಲಿ ಸಿನಿಮಾಗಳು ಈ ವರ್ಷ ಐಎಂಡಿಬಿ ಬಿಡುಗಡೆಗೊಳಿಸಿದ ಜನಪ್ರಿಯ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಹೀಗೆ ಕನ್ನಡ ಸಿನಿರಂಗ ಈ ವರ್ಷ ಇತರೆ ಸಿನಿರಂಗಗಳಿಗಿಂತ ದೊಡ್ಡ ಯಶಸ್ಸನ್ನು ಪಡೆದುಕೊಂಡಿದ್ದರೆ, ಕೆಲ ಸಿನಿಮಾಗಳು ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿ ಸೋತು ಮಲಗಿದ್ದೂ ಇದೆ.

ಇನ್ನು ನಟರ ವಿಚಾರಕ್ಕೆ ಬಂದರೆ ಈ ವರ್ಷ ಬಿಡುಗಡೆಯಾದ ಸ್ಟಾರ್ ನಟರಾದ ಪುನೀತ್ ರಾಜ್‌ಕುಮಾರ್ ಅವರ ಎಲ್ಲಾ ಸಿನಿಮಾಗಳು ಹಿಟ್ ಆಗಿವೆ. ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಇಡೀ ಭಾರತದಲ್ಲೇ ಅತಿಹೆಚ್ಚು ಗಳಿಸಿದ ಸಿನಿಮಾ ಎನಿಸಿಕೊಂಡಿದೆ. ಸುದೀಪ್ ಅವರ ವಿಕ್ರಾಂತ್ ರೋಣ ಸಹ ನೂರು ಕೋಟಿ ಕ್ಲಬ್ ಸೇರಿದೆ. ರಿಷಬ್ ಹಾಗೂ ರಕ್ಷಿತ್ ಶೆಟ್ಟಿ ಸಹ ಗೆದ್ದಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಗಾಳಿಪಟ 2 ಮೂಲಕ ಗೆದ್ದು ತ್ರಿಬಲ್ ರೈಡಿಂಗ್‌ನಲ್ಲಿ ಸೋತಿದ್ದಾರೆ. ಇನ್ನು ನಟಿಯರ ವಿಚಾರಕ್ಕೆ ಬಂದರೆ ಈ ವರ್ಷ ಸಾಮಾಜಿಕ ಜಾಲತಾಣದಲ್ಲಿ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿರುವ ನಟಿಯರ ಸಿನಿಮಾಗಳು ಸೋತು ಮಲಗಿದ್ದು, ಯುವ ನಟಿಯರ ಸಿನಿಮಾಗಳು ಗೆದ್ದು ಬೀಗಿವೆ. ಹಾಗಿದ್ದರೆ ಈ ವರ್ಷ ಗೆದ್ದ ನಟಿಯರು ಯಾರು ಹಾಗೂ ಸೋತ ಫೇಮಸ್ ನಟಿಯರು ಯಾರು ಎಂದು ತಿಳಿಯೋಣ.

ಈ ವರ್ಷ ಯುವ ನಟಿಯರು ನಟಿಸಿದ ಸಿನಿಮಾಗಳೇ ಹೆಚ್ಚಾಗಿ ಗೆದ್ದಿವೆ. ಕೆಜಿಎಫ್ ಸರಣಿ ಸಿನಿಮಾಗಳಲ್ಲಿ ನಟಿಸಿದ ಶ್ರೀ ನಿಧಿ ಶೆಟ್ಟಿ ಯುವ ನಾಯಕಿಯಾಗಿದ್ದು ತಮ್ಮ ಖಡಕ್‌ ಪಾತ್ರದಲ್ಲಿ ಅದ್ಬುತವಾಗಿ ನಟಿಸಿ ಸ್ಯಾಂಡಲ್‌ವುಡ್‌ನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ. ಈ ಹಿಂದೆ ಪಾಪ್‌ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ನಟಿಸಿದ್ದ ಸಪ್ತಮಿ ಗೌಡ ಈ ವರ್ಷ ಕಾಂತಾರ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡು ಗೆದ್ದಿದ್ದು, ಸದ್ಯ ಈ ನಟಿಗೆ ಬೃಹತ್ ಬೇಡಿಕೆ ಹುಟ್ಟಿಕೊಂಡಿದೆ.

ಇದೇ ರೀತಿ ರಿಷಬ್ ಶೆಟ್ಟಿ ನಟನೆಯ ಹೀರೋ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಗಾನವಿ ಲಕ್ಷ್ಮಣ್ ಈ ವರ್ಷ ವೇದ ಮೂಲಕ ಬೃಹತ್ ಗೆಲುವು ಕಂಡಿದ್ದಾರೆ. ಈ ಇಬ್ಬರೂ ನಟಿಯರು ಈ ವರ್ಷ ನಿರ್ವಹಿಸಿದ್ದು ಪಕ್ಕಾ ಹಳ್ಳಿ ಹುಡುಗಿ ಪಾತ್ರಗಳು. ಈ ಮೂಲಕ ನಟಿಯರು ದೊಡ್ಡ ಗೆಲುವು ಸಾಧಿಸಲು ಗ್ಲಾಮರಸ್ ಪಾತ್ರಗಳನ್ನು ಮಾಡಬೇಕು ಎಂಬುದನ್ನು ಹುಸಿಗೊಳಿಸಿದ್ದಾರೆ.

ಕನ್ನಡ ಸಿನಿರಂಗದಲ್ಲಿ ಸದ್ಯ ಫೇಮಸ್ ನಟಿಯರು ಎಂಬ ವಿಷಯ ಕೇಳಿದರೆ ಎಲ್ಲರಿಗೂ ನೆನಪಾಗುವ ಇಬ್ಬರು ನಟಿಯರೆಂದರೆ ಅದು ಆಶಿಕಾ ರಂಗನಾಥ್ ಹಾಗೂ ರಚಿತಾ ರಾಮ್. ಈ ಇಬ್ಬರೂ ನಟಿಯರೂ ಸಹ ಈ ವರ್ಷ ಹಿಟ್ ಸಿಗಲಾರದೇ ಹಿನ್ನಡೆ ಅನುಭವಿಸಿದ್ದಾರೆ. ಇದೇ ವರ್ಷ ಇಬ್ಬರೂ ಪರಭಾಷಾ ಸಿನಿಮಾರಂಗಗಳ ಪ್ರವೇಶ ಮಾಡಿದರಾದರೂ ಅಲ್ಲಿ ಸಿಕ್ಕಿದ್ದು ಮಾತ್ರ ಹೀನಾಯ ಸೋಲು. ರಚಿತಾ ರಾಮ್ ನಟನೆಯ ಏಕ್ ಲವ್ ಯಾ, ಮಾನ್ಸೂನ್ ರಾಗ ಸಿನಿಮಾಗಳು ಸೋಲನ್ನು ಕಂಡಿದೆ.

ಸೂಪರ್ ಮಚ್ಚಿ ಎಂಬ ತೆಲುಗು ಸಿನಿಮಾದಲ್ಲಿ ರಚಿತಾ ರಾಮ್ ನಟಿಸಿದ್ದರಾದರೂ ಅಲ್ಲಿ ಕೂಡ ಸೋಲನ್ನು ಕಂಡಿದ್ದಾರೆ. ಹಾಗೆ ನೋಡುವುದಾದರೆ ನಟಸಾರ್ವಭೌಮ ಬಳಿಕ ರಚಿತಾ ರಾಮ್ ನಟನೆಯ ಯಾವ ಸಿನಿಮಾವೂ ಅಬ್ಬರಿಸಿಲ್ಲ. ಮುಂದಿನ ವರ್ಷ ತೆರೆ ಕಾಣುವ ಕ್ರಾಂತಿ ಸಿನಿಮಾದ ಮೇಲೆ ಸದ್ಯ ನಿರೀಕ್ಷೆ ಇದ್ದು, ಈ ಸಿನಿಮಾ ರಚಿತಾಗೆ ಹಿಟ್ ತಂದುಕೊಡುತ್ತಾ ಕಾದು ನೋಡಬೇಕಿದೆ.

ಇದನ್ನೂ ಓದಿ : Modi’s mother Heeraben passed away : ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ನಿಧನ : ಸಂತಾಪ ಸೂಚಿಸಿದ ಬಾಲಿವುಡ್‌ ದಿಗ್ಗಜರು

ಇದನ್ನೂ ಓದಿ : Dr. Vishnuvardhan Death Anniversary : ಡಾ. ವಿಷ್ಣುವರ್ಧನ್‌ 13ನೇ ವರ್ಷದ ಪುಣ್ಯಸ್ಮರಣೆ : ಸಾಹಸಸಿಂಹನ ಸ್ಮರಣೆಯಲ್ಲಿ ಅಭಿಮಾನಿಗಳು

ಇದನ್ನೂ ಓದಿ : Pathaan Controversy : ಪಠಾಣ್‌ ಸಿನಿಮಾದ ಕೆಲವು ದೃಶ್ಯ, ಹಾಡಿನಲ್ಲಿ ಬದಲಾವಣೆ ಮಾಡಲು ಸಲಹೆ ನೀಡಿದ ಸೆನ್ಸಾರ್‌ ಮಂಡಳಿ

ಮೊದಲೇ ಹೇಳಿದ ಹಾಗೆ ರಚಿತಾ ಬಿಟ್ಟರೆ ಸ್ಯಾಂಡಲ್‌ವುಡ್ನಲ್ಲಿ ಹೆಚ್ಚಾಗಿ ಕೇಳಿಬರುವ ನಟಿಯ ಹೆಸರು ಆಶಿಕಾ ರಂಗನಾಥ್. ಇನ್ನೂ ಸಹ ಕನ್ನಡದ ಯಾವ ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗದ ಆಶಿಕಾ ನಟನೆಯ ಈ ವರ್ಷದ ಸಿನಿಮಾಗಳು ಸೋತಿವೆ. ಅವತಾರ ಪುರುಷ, ಗರುಡ, ಕಾಣೆಯಾದವರ ಬಗ್ಗೆ ಪ್ರಕಟಣೆ ಹಾಗೂ ರೇಮೊ ಸಿನಿಮಾಗಳು ಸೋಲು ಕಂಡಿವೆ. ಇನ್ನು ಪಟ್ಟದು ಅರಸನ್ ಎಂಬ ಸಿನಿಮಾದ ಮೂಲಕ ತಮಿಳು ಸಿನಿರಂಗಕ್ಕೆ ಕಾಲಿಟ್ಟ ಆಶಿಕಾ ಮೊದಲ ಸಿನಿಮಾದಲ್ಲೇ ಸೋಲನ್ನು ಕಂಡಿದ್ದಾರೆ.

Sandalwood New Heroines To Win In Sandalwood In 2022

Comments are closed.