Heeraben Modi lifestyle: ಅತ್ಯಂತ ಸರಳ ಜೀವಿಯಾದ ಶತಾಯುಷಿ ಹೀರಾಬೆನ್‌ ಮೋದಿ ಅವರ ಜೀವನ ಶೈಲಿ ಹೇಗಿತ್ತು ಗೊತ್ತಾ?

(Heeraben Modi lifestyle) ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರು ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಈ ದುಃಖದ ಸಂಗತಿಯನ್ನು ಪ್ರಧಾನಿ ಮೋದಿ ಅವರು ಭಾವನಾತ್ಮಕ ಬರವಣಿಗೆಯೊಂದಿಗೆ ಸ್ವತಃ ಟ್ವೀಟ್‌ ನಲ್ಲಿ ತಿಳಿಸಿದ್ದಾರೆ. ಹಾಗೇಯೇ “ಅವಳ 100 ನೇ ಹುಟ್ಟುಹಬ್ಬದಂದು ನಾನು ಅವಳನ್ನು ಭೇಟಿಯಾದಾಗ, ಅವಳು ಒಂದು ಮಾತನ್ನು ಹೇಳಿದಳು. ಬುದ್ಧಿವಂತಿಕೆಯಿಂದ ಕೆಲಸ ಮಾಡಿ, ಶುದ್ಧತೆಯಿಂದ ಜೀವನ ನಡೆಸು” ಎಂದು ಈ ಮೂಲಕ ಅವಳು ಯಾವಾಗಲೂ ನೆನಪಿನಲ್ಲಿರುತ್ತಾಳೆ ಎಂದು ಕೂಡ ಬರೆದುಕೊಂಡಿದ್ದರು.

ಪ್ರಧಾನಿ ಮೋದಿ ಹಾಗೂ ತಾಯಿ ಹೀರಾಬೆನ್‌ ಅವರ ಬಾಂಧ್ಯವ್ಯ ಹೇಗಿತ್ತು?
ಪ್ರಧಾನಿ ಮೋದಿ ಅವರು ತಮ್ಮ ತಾಯಿಯೊಂದಿಗೆ ಮಿತಿಯಿಲ್ಲದ ಪ್ರೀತಿಯನ್ನು ಹೊಂದಿದ್ದರು. ಪ್ರಧಾನಮಂತ್ರಿಯವರು ತಮ್ಮ ತಾಯಿಯನ್ನು ಭೇಟಿಯಾಗುತ್ತಿರುವ ಪ್ರತಿ ಚಿತ್ರಣಗಳು ಯಾವಾಗಲೂ ಪಕ್ಷದ ರೇಖೆಗಳನ್ನು ಮೀರಿ ಸಾಮಾನ್ಯ ಜನರೊಂದಿಗೆ ಸಂಪರ್ಕ ಹೊಂದಿವೆ. ಏಕೆಂದರೆ ಅದು ತಾಯಿ ಮತ್ತು ಮಗನ ನಡುವಿನ ಸಾರ್ವತ್ರಿಕ ಪ್ರೀತಿಯ ಬಗ್ಗೆ ತಿಳಿಸುವ ಒಂದು ಅದ್ಭುತ ಸಾಧನವಾಗಿದೆ.

ಹೀರಾಬೆನ್‌ ಮೋದಿ ಅವರ ಜೀವನ (Heeraben Modi lifestyle) ;
ಹೀರಾಬೆನ್ ಮೋದಿ 1922 ರಲ್ಲಿ ಗುಜರಾತ್‌ನ ಮೆಹ್ಸಾನಾದಲ್ಲಿ ಜನಿಸಿದರು. ದಾಮೋದರ ದಾಸ್‌ ಮುಲ್ಚಂದ್‌ ಮೋದಿ ಅವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೀರಾಬೆನ್‌ ಅವರ ಜೀವನ ಹೇಳುವಷ್ಟು ಸುಲಭವೇನಲ್ಲ. ಅವರ ಜೀವನವು ಕಷ್ಟಗಳಿಂದ ತುಂಬಿತ್ತು. ಇದನ್ನು ಸ್ವತಃ ಪ್ರಧಾನಿಯವರೇ ದಾಖಲಿಸಿದ್ದಾರೆ. ಎಲ್ಲಾ ಮನೆಕೆಲಸಗಳನ್ನು ಸ್ವತಃ ಮಾಡುವುದರಿಂದ ಹಿಡಿದು ಇತರ ಜನರ ನಿವಾಸಗಳಲ್ಲಿ ಪಾತ್ರೆಗಳನ್ನು ತೊಳೆಯುವವರೆಗೆ ಹೆಚ್ಚುವರಿ ಹಣವನ್ನು ಗಳಿಸಲು ದುಡಿಯುತ್ತಿದ್ದರು. ತಮ್ಮ ಕುಟುಂಬವನ್ನು ಪೋಷಿಸಲು ತಮಗೆ ಸಾಧ್ಯವಿರುವ ಎಲ್ಲಾ ಕೆಲಸಗಳನ್ನು ಹೀರಾಬೆನ್‌ ಅವರು ಮಾಡಿದ್ದಾರೆ. ಮಳೆಗಾಲದಲ್ಲಿ, ನಮ್ಮ ಛಾವಣಿ ಸೋರುತ್ತದೆ, ಮತ್ತು ಮನೆಗೆ ಪ್ರವಾಹ ಉಂಟಾಗುತ್ತದೆ. ಮಳೆನೀರನ್ನು ಸಂಗ್ರಹಿಸಲು ತಾಯಿ ಬಕೆಟ್ ಮತ್ತು ಪಾತ್ರೆಗಳನ್ನು ಸೋರಿಕೆಯ ಕೆಳಗೆ ಇಡುತ್ತಿದ್ದರು. ಈ ಪ್ರತಿಕೂಲ ಪರಿಸ್ಥಿತಿಯಲ್ಲೂ ತಾಯಿ ಸ್ಥೈರ್ಯದ ಪ್ರತೀಕವಾಗಿದ್ದರು. ಅವರ ಆಲೋಚನಾ ಪ್ರಕ್ರಿಯೆ ಮತ್ತು ದೂರದೃಷ್ಟಿಯ ಚಿಂತನೆಯು ಯಾವಾಗಲೂ ಆಶ್ಚರ್ಯಗೊಳಿಸುವಂತದ್ದು.

ಹೀರಾಬೆನ್ (Heeraben Modi lifestyle) ತನ್ನ ಮಗ ವಿಶ್ವದ ಅತ್ಯಂತ ಶಕ್ತಿಶಾಲಿ ನಾಯಕರಲ್ಲಿ ಒಬ್ಬನಾಗಿದ್ದರೂ ಸಹ ತುಂಬಾ ಸರಳ ಜೀವನವನ್ನು ನಡೆಸಿಕೊಂಡು ಬಂದಿದ್ದಾರೆ. ಎಂದಿಗೂ ಯಾವುದೇ ಆಭರಣಗಳನ್ನು ಧರಿಸಿದವರಲ್ಲ ಮತ್ತು ಅವರ ಹೆಸರಿನಲ್ಲಿ ಯಾವುದೇ ಆಸ್ತಿಯನ್ನು ಕೂಡ ಹೊಂದಿಲ್ಲ. ಅದರ ಬಗ್ಗೆ ಅವರಿಗೆ ಆಸಕ್ತಿಯೂ ಇಲ್ಲ. ಜೀವಿಸಲು ಅತ್ಯಂತ ದೊಡ್ಡ ಬಂಗಲೆಯಿದ್ದರೂ ಕೂಡ ಅವರು ತನ್ನ ಚಿಕ್ಕ ಕೋಣೆಯಲ್ಲಿ ಅತ್ಯಂತ ಸರಳವಾಗಿಯೇ ಜೀವನಶೇಲಿಯನ್ನು ಮುಂದುವರೆಸಿಕೊಂಡು ಬಂದವರು.

ಹೀರಾಬೆನ್‌ ಅವರು ಯಾವಾಗಲೂ ತಮ್ಮ ಹೆಮ್ಮೆಯ ಪುತ್ರನ ದೊಡ್ಡ ದೊಡ್ಡ ನಿರ್ದಾರಗಳನ್ನು ಬೆಂಬಲಿಸುತ್ತಿದ್ದರು. ನೋಟು ಅಮಾನ್ಯೀಕರಣದ ಸಮಯದಲ್ಲೂ ಕೂಡ ಎಟಿಎಂ ಮುಂದೆ ಸಾಮಾನ್ಯರಂತೆ ಸರದಿ ಸಾಲಿನಲ್ಲಿ ನಿಂತು ಹಣವನ್ನು ಹಿಂಪಡೆದಿದ್ದರು. ಪ್ರಧಾನಿ ಮೋದಿಯವರು ತಮ್ಮ ಪ್ರೀತಿಯ ತಾಯಿಯನ್ನು “ತಮ್ಮ ಜೀವನದ ಆಧಾರಸ್ತಂಭ” ಎಂದೇ ಬಣ್ಣಿಸಿದ್ದಾರೆ

ಇದನ್ನೂ ಓದಿ : PM Modi’s duty conscious: ತಾಯಿಯ ಅಗಲಿಕೆಯ ನೋವಲ್ಲೂ ಕರ್ತವ್ಯ ಪ್ರಜ್ಞೆ ಮೆರೆದ ಪ್ರಧಾನಿ ನರೇಂದ್ರ ಮೋದಿ

From doing all the housework herself to washing dishes at other people’s residences, she worked to earn extra money. Heeraben has done all she can to support her family.

Comments are closed.