Shah Rukh Khan Pathaan Movie : ಶಾರುಖ್‌ ಕೈಯಲ್ಲಿ ಬಾಲಿವುಡ್‌ ಭವಿಷ್ಯ : ಪಠಾಣ್‌ಗೆ ಜರ್ಮನಿಯಲ್ಲಿ ಸಖತ್‌ ರೆಸ್ಪಾನ್ಸ್


ಕಳೆದೆರಡು ವರ್ಷಗಳಿಂದ ಸಾಲು ಸಾಲು ಸೋಲು ಕಂಡ ಬಾಲಿವುಡ್‌ ಸಿನಿರಂಗದವರಿಗೆ ಮುಜುಗರಕ್ಕೆ ಒಳಗಾಗುವಂತೆ ಆಗಿದೆ. ಈ ವರ್ಷ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಸೋತು ಸಾಕಷ್ಟು ನಿರಾಸೆಯನ್ನು ಮೂಡಿಸಿದೆ. ಅದರಲ್ಲೂ ಈ ವರ್ಷ ಬಾಲಿವುಡ್‌ನಲ್ಲಿ ಸೂಪರ್‌ಸ್ಟಾರ್‌ ಸಿನಿಮಾಗಳೇ ಎದ್ದು ನಿಲ್ಲುವುದಕ್ಕೆ ಪರದಾಡುವಂತಹ ಸ್ಥಿತಿ ನಿರ್ಮಾಣ ಆಗಿದ್ದು ಹೀನಾಯ ಎನ್ನಬಹುದು. ಹಾಗಾಗಿ 2022 ಬಾಲಿವುಡ್‌ ಬೆರಳು ಏಣಿಕೆ ಸಿನಿಮಾಗಳನ್ನು ಹೊರತು ಪಡಿಸಿದರೆ, ಸೂಪರ್‌ಸ್ಟಾರ್‌ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಬಾರಿ ನಷ್ಟವನ್ನು ಅನುಭವಿಸಿದೆ. ಹೀಗಾಗಿ ಬಾಲಿವುಡ್‌ನಲ್ಲಿ 2023ರಲ್ಲಿ ಗೆಲುವಿನ ಸಾಕಷ್ಟು (Shah Rukh Khan Pathaan Movie) ನಿರೀಕ್ಷೆಯಲ್ಲಿದೆ.

ಇನ್ನೂ ಹೊಸ ವರ್ಷದ ಮೊದಲ ತಿಂಗಳನಲ್ಲಿ ಬಾಲಿವುಡ್‌ ಬಿಗ್‌ ಬಜೆಟ್‌ ಸಿನಿಮಾವಾದ “ಪಠಾಣ್” ರಿಲೀಸ್‌ ಮಾಡಲು ಸಜ್ಜಾಗಿದೆ. ಈ ಸಿನಿಮಾದ ಮೂಲಕ ಶಾರುಖ್‌ ಖಾನ್‌ ಬಾಲಿವುಡ್‌ನಲ್ಲಿ ದೊಡ್ಡ ಕಮ್‌ ಬ್ಯಾಕ್‌ನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಸಿನಿಮಾ ಈಗಾಗಲೇ ಸಾಕಷ್ಟು ವಿವಾದದಲ್ಲಿ ಸಿಕ್ಕಿದ್ದರೂ, ವಿದೇಶದಲ್ಲಿ ಭರ್ಜರಿ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಈಗಾಗಲೇ ಜರ್ಮನಿಯಲ್ಲಿ ಪಠಾಣ್‌ ಸಿನಿಮಾದ ಅಡ್ವಾನ್ಸ್‌ ಬುಕಿಂಗ್‌ ಓಪನ್‌ ಆಗಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆಯೋಕೆ ಶುರುವಾಗಿದೆ.

ಬಾಲಿವುಡ್‌ನಲ್ಲಿ ಸುಮಾರು ನಾಲ್ಕು ವರ್ಷಗಳ ಬಳಿಕ ಶಾರುಖ್‌ ಖಾನ್‌ ಸಿನಿಮಾ ಬಿಡುಗಡೆಗೆ ತಯಾರಿ ನಡೆಸಿದೆ. ಆದರೆ ಭಾರತದಲ್ಲಿ ಆರಂಭದಲ್ಲೇ ಪಠಾಣ್‌ ಸಿನಿಮಾದ ಸುತ್ತ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿದೆ. ಆದರಿಂದ ಈ ಸಿನಿಮಾದ ಬಗ್ಗೆ ಸಹಜವಾಗಿಯೇ ಬಾಲಿವುಡ್‌ ಮಂದಿಗೆ ಆತಂಕ ಹುಟ್ಟಿಸಿದೆ. ಇದರ ನಡುವೇ ವಿದೇಶಗಳಲ್ಲಿ ಪಠಾಣ್‌ ಸಿನಿಮಾಕ್ಕೆ ಸಿಕ್ಕಾಪಟ್ಟೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗಾಗಲೇ ಜರ್ಮನಿಯಲ್ಲಿ ಶುರುವಾದ ಈ ಸಿನಿಮಾದ ಅಡ್ವಾನ್ಸ್‌ ಬುಕಿಂಗ್‌ ಬಹುತೇಕ ಕಡೆಯಲ್ಲಿ ಟಿಕೆಟ್‌ ಬುಕಿಂಗ್‌ ಜೋರಾಗಿ ನಡೆಯುತ್ತಿದೆ.

ಈ ಸಿನಿಮಾ ಬಿಡುಗಡೆಗೆ ಇನ್ನೂ ೨೭ದಿನಗಳು ಬಾಕಿ ಉಳಿದಿದ್ದು, ಜರ್ಮನಿಯಲ್ಲಿ ಅಡ್ವಾನ್ಸ್‌ ಬುಕಿಂಗ್‌ ಅವಕಾಶ ನೀಡಲಾಗಿದೆ. ಹಾಗಾಗಿ ಜರ್ಮನ್‌ನಲ್ಲಿ ಕಿಂಗ್‌ ಖಾನ್‌ಗೆ ಉತ್ತಮ ರೆಸ್ಪಾನ್ಸ್‌ ಸಿಕ್ಕಿರುತ್ತದೆ. ಅಲ್ಲಿ ಮಲ್ಟಿಪ್ಲೆಕ್ಸ್ ಚೈನ್ ಸಿನಿಮ್ಯಾಕ್ಸ್ ಇರುವ ಬಹುತೇಕ ನಗರಗಳಲ್ಲಿ ಅಡ್ವಾನ್ಸ್ ಬುಕಿಂಗ್ ಆಗಿದೆ. ಬರ್ಲಿನ್,ಎಸ್ಸೆನ್,ಡ್ಯಾಮ್ಟರ್, ಹ್ಯಾನೋವರ್, ಹಾರ್ಬರ್ಗ್, ಮ್ಯೂನಿಚ್, ಆಫೆನ್‌ಬಾಕ್ ಕಡೆಗಳಲ್ಲಿ ಸಿನಿಮಾದ ಬಹುತೇಕ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿರುತ್ತದೆ.

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಸಿನಿಮಾಗಳು ಭಾರತದಲ್ಲಿ ಸೋಲನ್ನು ಕಂಡರೂ, ವಿದೇಶದಲ್ಲಿ ಕೈ ಹಿಡಿದಿದೆ. ಈ ಹಿಂದೆ ತೆರೆಕಂಡ ‘ದಿಲ್ವಾಲೆ’ ಸಿನಿಮಾ ಕೂಡ ಭಾರತದ ಬಾಕ್ಸಾಫೀಸ್ ಸೋತಿತ್ತು. ಆದರೆ ವಿದೇಶಗಳಲ್ಲಿ ಈ ಸಿನಿಮಾ ಸೂಪರ್‌ ಕಲೆಕ್ಷನ್ ಮಾಡಿತ್ತು. ಹಲವು ಸಂದರ್ಭಗಳಲ್ಲಿ ಶಾರುಖ್ ಖಾನ್‌ನ್ನು ಕಿಂಗ್ ಆಫ್ ಓವರ್‌ಸೀಸ್ ಅನ್ನೋ ಸಾಬೀತು ಮಾಡಿದ್ದಾರೆ.

ಇದನ್ನೂ ಓದಿ : Pathaan Controversy : ಪಠಾಣ್‌ ಸಿನಿಮಾದ ಕೆಲವು ದೃಶ್ಯ, ಹಾಡಿನಲ್ಲಿ ಬದಲಾವಣೆ ಮಾಡಲು ಸಲಹೆ ನೀಡಿದ ಸೆನ್ಸಾರ್‌ ಮಂಡಳಿ

ಇದನ್ನೂ ಓದಿ : Modi’s mother Heeraben passed away : ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ನಿಧನ : ಸಂತಾಪ ಸೂಚಿಸಿದ ಬಾಲಿವುಡ್‌ ದಿಗ್ಗಜರು

ಇದನ್ನೂ ಓದಿ : Sandalwood New Heroines : 2022ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಗೆಲುವು ಸಾಧಿಸಿದ ಹೊಸ ನಟಿ ಮಣಿಯರು

ಪಠಾಣ್’ ಸಿನಿಮಾದ ‘ಬೇಷರಂ ರಂಗ್..’ ಸಾಂಗ್ ಸಾಕಷ್ಟು ವಿವಾದಕ್ಕೆ ಸಿಲುಕಿತ್ತು. ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ವಿವಾದ ದೇಶದೆಲ್ಲೆಡೆ ಕಿಚ್ಚು ಹಚ್ಚಿತ್ತು. ಹಿಂದೂಪರ ಸಂಘಟನೆಗಳು ಅಷ್ಟೇ ಅಲ್ಲದೇ, ಮುಸ್ಲಿಂ ಸಂಘಟನೆಗಳೂ ಕೂಡ ವಿರೋಧ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಸೆನ್ಸಾರ್ ಬೋರ್ಡ್ ಕೂಡ ಹಾಡಿನ ಜೊತೆ ಕೆಲವು ದೃಶ್ಯಗಳನ್ನು ಬದಲಾವಣೆ ಮಾಡುವಂತೆ ಸೂಚನೆ ನೀಡಿದೆ ಎಂದು ವರದಿಯಾಗಿದೆ.

Shah Rukh Khan Pathaan Movie: Future of Bollywood in Shah Rukh’s Hands: Strong Response to Pathan in Germany

Comments are closed.