Rajat Bedi: ಹಿಟ್ ಆಂಡ್ ರನ್ ಕೇಸ್: ಬಂಧನ ಭೀತಿಯಲ್ಲಿ ಮತ್ತೊಬ್ಬ ಬಾಲಿವುಡ್ ನಟ

ಬಾಲಿವುಡ್ ನ ಕೋಯಿ ಮಿಲ್ ಗಯಾ ಖ್ಯಾತಿಯ ನಟ ರಜತ್ ಬೇಡಿ ಹಿಟ್ ರನ್ ಪ್ರಕರಣವೊಂದರಲ್ಲಿ ಸಿಲುಕಿಕೊಂಡಿದ್ದು, ಬಂಧನ ಭೀತಿ ಎದುರಿಸುತ್ತಿದ್ದಾರೆ. ಮುಂಬೈನ ಡಿ.ಎನ್.ನಗರದ ವ್ಯಕ್ತಿ ಕೆಲಸ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಕಾರಿನಲ್ಲಿ ಡಿಕ್ಕಿ ಹೊಡೆದು ಗಾಯಗೊಳಿಸಿದ ಆರೋಪ ರಜತ್ ಬೇಡಿ ಮೇಲಿದೆ.

ರಜತ್ ಬೇಡಿ ಕಾರು ಡಿಕ್ಕಿ ಹೊಡೆಸಿ ಕೂಲಿ ಕಾರ್ಮಿಕನಾಗಿರುವ ವ್ಯಕ್ತಿಯನ್ನು ಗಾಯಗೊಳಿಸಿದ್ದು, ಬಳಿಕ ಮುಂಬೈನ  ಕೂಪರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯ ಖರ್ಚನ್ನು ಭರಿಸುವುದಾಗಿ ಹೇಳಿದ ರಜತ್ ಬೇಡಿ ಬಳಿಕ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ರಜತ್ ಬೇಡಿ ಕಾರು ಡಿಕ್ಕಿಯಿಂದ ಗಾಯಗೊಂಡ ವ್ಯಕ್ತಿಯ ಕುಟುಂಬಸ್ಥರು ಡಿ.ಎನ್.ನಗರ ಪೊಲೀಸರಿಗೆ ದೂರು ನೀಡಿದ್ದು, ರಜತ್ ಬೇಡಿ ವಿರುದ್ಧ ಮೋಟಾರು ವಾಹನ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ರಜತ್ ಕಾರು ಡಿಕ್ಕಿಯಾಗಿ ಗಾಯಗೊಂಡಿರುವ ವ್ಯಕ್ತಿಯ ಪರಿಸ್ಥಿತಿ ಗಂಭೀರವಾಗಿದ್ದು, ತಲೆಗೆ ಹಾಗೂ ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಹೀಗಾಗಿ ಆತನ ಕುಟುಂಬಸ್ಥರು ಕಂಗಾಲಾಗಿದ್ದು, ನಟ ರಜತ್ ಬೇಡಿ ಬಂಧಿಸಿ ತಮಗೆ ನ್ಯಾಯ ದೊರಕಿಸಬೇಕೆಂದು ಮನವಿ ಮಾಡಿದ್ದಾರೆ.

ಹಲವು ಭಾಷೆಗಳಲ್ಲಿ ನಟಿಸಿರುವ ರಜತ್ ಬೇಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಜಗ್ಗುದಾದಾ ಸಿನಿಮಾದಲ್ಲೂ ನಟಿಸಿದ್ದರು.

FIR against Bollywood actor Rajat Bedi

Comments are closed.