Surrogacy Cheating : ಬಾಡಿಗೆ ತಾಯಿಯಿಂದ ಮಗುವನ್ನು ಪಡೆಯೋ ಮುನ್ನ ಹುಷಾರ್‌ !

ಬೆಂಗಳೂರು : ಮಕ್ಕಳಿಲ್ಲದ ದಂಪತಿ ಮಗುವಿಗಾಗಿ ಕಂಡ ಕಂಡ ದೇವರಿಗೆ ಮೊರೆಯಿಡ್ತಾರೆ. ಇನ್ನೂ ಕೆಲವರು ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆಯಲು ಮುಂದಾಗುತ್ತಾರೆ. ಮಕ್ಕಳಿಲ್ಲ ಅನ್ನೋ ವೀಕ್ನೆಸ್‌ನ್ನು ಬಂಡವಾಳ ಮಾಡಿಕೊಂಡು ಕದ್ದ ಮಕ್ಕಳನ್ನು ದಂಪತಿಗಳಿಗೆ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುತ್ತಿದ್ದ ಕಳ್ಳಮಕ್ಕಳ ಗ್ಯಾಂಗ್‌ ಅನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಬೆಂಗಳೂರು ದಕ್ಷಿಣ ಪೊಲೀಸರು ಭರ್ಜರಿ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ದಕ್ಷಿಣ ವಲಯದ ಡಿಸಿಪಿ ಹರೀಶ್‌ ಪಾಂಡೆ ಅವರ ನೇತೃತ್ವದ ತಂಡ ಆರೋಪಿಗಳಾದ ವಿಷಣ್ಮುಗಮ್ಮ, ಮಹೇಶ್, ರಾಜಣ್ಣ, ಜನಾರ್ಧನ್, ಧನಲಕ್ಷ್ಮೀ ಎಂಬವರನ್ನು ಬಂಧಿಸಿದ್ದಾರೆ. ಮಕ್ಕಳಿಲ್ಲದ ದಂಪತಿಗಳನ್ನೇ ಟಾರ್ಗೆಟ್‌ ಮಾಡುತ್ತಿದ್ದ ಈ ತಂಡ ಬಾಡಿಗೆ ತಾಯಿಯ ಮೂಲಕ ಮಕ್ಕಳನ್ನು ನೀಡುವುದಾಗಿ ಭರವಸೆಯನ್ನು ನೀಡುತ್ತದೆ. ನಂತರದಲ್ಲಿ ಬಡವರ ಮಕ್ಕಳನ್ನುಕಡಿಮೆ ಹಣಕ್ಕೆ ಖರೀದಿ ಮಾಡಿ ಮಕ್ಕಳಿಲ್ಲದ ದಂಪತಿಗಳಿಗೆ ಲಕ್ಷಾಂತರ ರೂಪಾಯಿಗೆ ಮಾರಾಟವನ್ನು ಮಾಡುತ್ತಿದೆ.

ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಬಾಡಿಗೆ ತಾಯಿಯ ಹೆಸರಲ್ಲಿ ವಂಚನೆ ನಡೆಯುತ್ತಿರೋದು ಗಮನಕ್ಕೆ ಬರುತ್ತಿದ್ದಂತೆಯೇ ಡಿಸಿಪಿ ಹರೀಶ್‌ ಪಾಂಡೆ ಅಲರ್ಟ್‌ ಆಗಿದ್ದರು. ತಂಡದ ಕುರಿತು ಪೊಲೀಸರು ಮಾಹಿತಿಯನ್ನು ಕಲೆ ಹಾಕೋದಕ್ಕೆ ಶುರು ಮಾಡಿದ್ದಾರೆ. ಕೊನೆಗೂ ಕಾರ್ಯಾಚರಣೆಯನ್ನು ನಡೆಸಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಲವು ವರ್ಷಗಳಿಂದಲೂ ಈ ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :  ವಾಮಾಚಾರದ ಹೆಸರಲ್ಲಿ ದಂಪತಿಗೆ 4.41 ಕೋಟಿ !

ಬೆಂಗಳೂರು ದಕ್ಷಿಣ ಪೊಲೀಸರು ನಡೆಸಿದ ಕಾರ್ಯಾಚರಣೆಯ ವೇಳೆಯಲ್ಲಿ ಬರೋಬ್ಬರಿ 13 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಬಾಡಿಗೆ ತಾಯಿಯ ಮೂಲಕ ಮಕ್ಕಳನ್ನು ನೀಡುವುದಾಗಿ ವಂಚಿಸುತ್ತಿದ್ದ ಗ್ಯಾಂಗ್‌ ಹಲವು ದಂಪತಿಗಳಿಗೆ ಮಗುವನ್ನು ನೀಡಿದೆ. ಹೀಗಾಗಿ ಪೊಲೀಸರು ಈ ಗ್ಯಾಂಗ್‌ ಯಾರೆಲ್ಲಾ ದಂಪತಿಗಳಿಗೆ ಮಕ್ಕಳನ್ನು ನೀಡಿದೆ ಅನ್ನೋ ಬಗ್ಗೆ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಮಕ್ಕಳನ್ನು ಕದ್ದು ಬಾಡಿಗೆ ತಾಯಿಯ ಹೆಸರಲ್ಲಿ ಮಾರಾಟ ಮಾಡುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ಈ ಗ್ಯಾಂಗ್‌ನಿಂದ ಮಗುವನ್ನು ಪಡೆದು ಸಾಕುತ್ತಿದ್ದ ದಂಪತಿಗಳಿಗೂ ಶಾಕ್‌ ಎದುರಾಗಿದೆ. ಲಕ್ಷ ಲಕ್ಷ ಹಣ ನೀಡಿ ಮಕ್ಕಳನ್ನು ಪಡೆದಿದ್ದ ದಂಪತಿಗಳು ಇದೀಗ ಮಕ್ಕಳನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಇನ್ಮುಂದೆ ಬಾಡಿಗೆ ತಾಯಿಯಿಂದ ಮಕ್ಕಳನ್ನು ಪಡೆಯುವ ಮುನ್ನ ಎಚ್ಚರಿಕೆವಹಿಸೋದು ಒಳಿತು.

ಇದನ್ನೂ ಓದಿ : ಕೈ ಹಿಡಿದ ಪತ್ನಿಯನ್ನೇ 500 ರೂಪಾಯಿ ಮಾರಾಟ ಮಾಡಿದ ಪತಿ : ನಂತರ ನಡೆಯಿತು ಪೈಶಾಚಿಕ ಕೃತ್ಯ

( Wake up before getting a child from surrogacy)

Comments are closed.