Meghan raj: ಹಿಂದೂ-ಕ್ರಿಶ್ಚಿಯನ್ ಸಂಪ್ರದಾಯದಂತೆ ನಾಮಕರಣ: ಟೀಕಾಕಾರರಿಗೆ ಮೇಘನಾ ಕೊಟ್ರು ಉತ್ತರ

ಸ್ಯಾಂಡಲ್ ವುಡ್ ನ ಸ್ಮೈಲ್ ಕಿಂಗ್  ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಪುತ್ರ ಜ್ಯೂನಿಯರ್ ಚಿರು ನಾಮಕರಣ ಕೊನೆಗೂ ಅದ್ದೂರಿಯಾಗಿ ನಡೆದಿದೆ. ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆದ ನಾಮಕರಣ ಸಮಾರಂಭದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳು ವ್ಯಕ್ತವಾಗಿದ್ದು, ಇದಕ್ಕೆ ಮೇಘನಾ ಬೋಲ್ಡ್ ಉತ್ತರ ನೀಡಿದ್ದಾರೆ.

ಚಿರು ಹಾಗೂ ಮೇಘನಾ ಪುತ್ರನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಹಿಂದೂ ಸಂಪ್ರದಾಯದಂತೆ ಖಾಸಗಿ ಹೊಟೇಲ್ ನಲ್ಲಿ ನಡೆದ ಸಮಾರಂಭದಲ್ಲಿ ಬೆಳ್ಳಿ ತೊಟ್ಟಿಲಿನಲ್ಲಿ ರಾಯನ್ ಎಂದು ನಾಮಕರಣ ಮಾಡಲಾಗಿದೆ.

ಇನ್ನೂ ಚರ್ಚ್ ನಲ್ಲಿ ನಡೆದ ಸಮಾರಂಭದಲ್ಲಿ ಕ್ರಿಶ್ಚಿಯನ್ ಧರ್ಮದಂತೆ ನಾಮಕರಣ ನಡೆದಿದೆ. ರಾಯನ್ ಎಂಬ ಹೆಸರು ಕ್ರಿಶ್ಚಿಯನ್ ಧರ್ಮದ್ದು. ಹಾಗೂ ನಾಮಕರಣವೂ ಕ್ರಿಶ್ಚಿಯನ್  ಸಂಪ್ರದಾಯದಂತೆ ನಡೆದಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗಳು ಹರಿದಾಡುತ್ತಿದ್ದವು.

ಈ ಟ್ರೋಲ್ ಗಳಿಗೆ ನಟಿ ಮೇಘನಾ ರಾಜ್ ಬೋಲ್ಡ್ ಉತ್ತರ ನೀಡಿದ್ದು, ನಾವಿಬ್ಬರೂ ಅನುಸರಿಸಿದ ಧರ್ಮವನ್ನು ಮಗನಿಗೆ ಬೋದಿಸಿದ್ದರಲ್ಲಿ ತಪ್ಪಿಲ್ಲ. ಎಲ್ಲ ಧರ್ಮಕ್ಕೂ ಮಾನವೀಯತೆಯೇ ಆಧಾರ ಎಂಬರ್ಥದಲ್ಲಿ ಪೋಸ್ಟ್ ಹಾಕಿದ್ದಾರೆ.

ರಾಯನ್ ಎಂಬುದು ಸಂಸ್ಕೃತ ಶಬ್ದ. ಉಚ್ಛಾರ, ಧರ್ಮ ವಿಭಿನ್ನವಾಗಿದ್ದರೂ ರಾಯನ್ ಎಂಬುದರ ಅರ್ಥ ರಾಜ ಎಂದು. ತಾಯಿಯಾಗಿ ಮಗನಿಗೋ ಯಾವುದು ಉತ್ತಮವೋ ಅದನ್ನು ಮಾಡುವುದು ನನ್ನ ಕರ್ತವ್ಯ. ನಮ್ಮ ಪಾಲಕರು ಎರಡು ಧರ್ಮದವರನ್ನು ಅನುಸರಿಸಿದಂತೆ, ನಾವು ಯಾಕೆ ಮಾಡಬಾರದು?

ಪ್ರಾರ್ಥನೆ,ಆಚರಣೆ ವಿಚಾರದಲ್ಲಿ ಜನರಿಗೆ ಜಾತಿ,ಧರ್ಮದ ವಿಭಿನ್ನತೆ ಕಾಣಬಹುದು. ಆದರೆ ನಾವು ಮೇಲಿರುವ ದೇವರ ಬಳಿ ಎಲ್ಲ ಒಳಿತಾಗಲಿ ಎಂಬ ಪ್ರಾರ್ಥನೆ ಸಲ್ಲಿಸಿ ಆಶೀರ್ವಾದ ಬೇಡುತ್ತೇವೆ. ಹೀಗಾಗಿ ಎರಡು ಧರ್ಮದ ಆಚರಣೆ ನನಗೆ ಮುಖ್ಯವಾಗಿತ್ತು. ಎಲ್ಲದಕ್ಕಿಂತ ಮೊದಲು ಮಾನವೀಯತೆ ಎಂದು ಚಿರು ಭಾವಿಸಿದ್ದರು. ನಾನು ಅದನ್ನೇ ನಂಬುತ್ತೇನೆ ಎಂದಿದ್ದಾರೆ.

Actress meghanaraj sarja bold answer to troll

Comments are closed.