ಕೊರೋನಾ ಸಂಕಷ್ಟದ ನಡುವೆ ಸ್ಯಾಂಡಲ್ ವುಡ್ ಬಹುತೇಕ ತಣ್ಣಗಿದೆ. ಆದರೂ ಚಟುವಟಿಕೆಗಳ ಮೂಲಕ ಸದ್ದು ಮಾಡಿದವರು ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್. ಈಗ ಕೊರೋನಾ ಸಾಂಕ್ರಾಮಿಕ ರೋಗದ ಭೀತಿಯ ನಡುವೆಯೂ ದುಬೈಗೆ ಹಾರಲು ಸಿದ್ಧವಾಗಿದ್ದಾರೆ.

ಇಷ್ಟಕ್ಕೂ ಸುದೀಪ್ ಕೊರೋನಾ ಮೂರನೇ ಅಲೆಯ ಭೀತಿಯ ನಡುವೆಯೂ ದುಬೈಗೆ ಹೋಗ್ತಿರೋದೇಕೆ? ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೊಳ್ತಿದ್ದಾರೆ ಅಂತ ನೀವು ಅಂದುಕೊಂಡ್ರಾ? ಇಲ್ಲ ಸುದೀಪ್ ದುಬೈಗೆ ಹೋಗ್ತಿರೋದು ತಮ್ಮ ಫೆವರಿಟ್ ಕ್ರೀಡೆ ಕ್ರಿಕೆಟ್ ಮ್ಯಾಚ್ ನೋಡೋಕೆ.

ಹೌದು ಕಿಚ್ಚ ಸುದೀಪ್ ದುಬೈಗೆ ಹೋಗ್ತಿರೋದು ಐಪಿಎಲ್ ಸೀಸನ್ ಮುಂದುವರೆದ ಪಂದ್ಯಾವಳಿಗಳನ್ನು ನೋಡೋಕೆ. ಕೊರೋನಾದಿಂದ ಸ್ಥಗಿತಗೊಂಡಿದ್ದ ಪಂದ್ಯಾವಳಿಗಳು ಸೆ.19 ರಿಂದ ಆರಂಭವಾಗಲಿದ್ದು, ಇದನ್ನು ನೋಡೋಕೆ ಸುದೀಪ್ ಸೆ.18 ರಂದು ದುಬೈಗೆ ಹಾರಲಿದ್ದಾರೆ.

ಕ್ರೀಕೆಟ್ ಕ್ರೀಡೆ ಹಾಗೂ ಕ್ರೀಕೆಟ್ ಪ್ಲೇಯರ್ ಜೊತೆ ಆತ್ಮೀಯ ಸಂಬಂಧ ಹೊಂದಿರೋ ಕಿಚ್ಚ ಸುದೀಪ್ ಸದಾ ಕ್ರಿಕೆಟ್ ಪಂದ್ಯಾವಳಿಗಳನ್ನು ಗ್ರೌಂಡ್ ನಲ್ಲೇ ನೋಡೋದಿಕ್ಕೆ ಇಷ್ಟ ಪಡುತ್ತಾರೆ. ಇದೇ ಕಾರಣಕ್ಕೆ ಸುದೀಪ್ ದುಬೈಗೆ ಹಾರಲಿದ್ದು, ಅಲ್ಲಿ ಐಪಿಎಲ್ ಪಂದ್ಯಾವಳಿಗಳನ್ನು ನೋಡಿ ಚಿಯರ್ಸ್ ಮಾಡಲಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬರೋದಾದರೇ ಸುದೀಪ್ ಅಭಿನಯದ ಕೋಟಿಗೊಬ್ಬ-3 ಹಾಗೂ ವಿಕ್ರಾಂತ್ ರೋಣ ಶೂಟಿಂಗ್ ಮುಗಿಸಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಥಿಯೇಟರ್ ಗಳಿಗೆ ನೂರಕ್ಕೆ ನೂರಷ್ಟು ಪ್ರವೇಶ ನೀಡೋ ಆದೇಶಕ್ಕಾಗಿ ಕಾಯಲಾಗುತ್ತಿದೆ.
sudeep travelling to dubai to watch ipl