Sanjana: ಸ್ಯಾಂಡಲ್ ವುಡ್ ಸುಂದರಿ ಬಾಳಲ್ಲಿ ಬಿರುಕು….! ವಿಚ್ಛೇಧನಕ್ಕೆ ಮುಂದಾದ್ರು ಗಂಡ-ಹೆಂಡತಿ ಬೆಡಗಿ…!!

ಸ್ಯಾಂಡಲ್ ವುಡ್  ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಜೈಲು ಸೇರಿ, ಜಾಮೀನಿನ ಮೇಲೆ ಹೊರಬಂದಿರೋ ಸಂಜನಾ ಬಾಳಲ್ಲಿ ಬಿರುಗಾಳಿ ಎದ್ದಿದೆ. ಪ್ರೀತಿಸಿ ಅಂತರ್ ಧರ್ಮಿಯ  ವಿವಾಹವಾಗಿದ್ದ ಸಂಜನಾ ಈಗ ವಿವಾಹ ವಿಚ್ಛೇಧನಕ್ಕೆ ಮುಂದಾಗಿದ್ದಾರೆ ಅನ್ನೋ ಸುದ್ದಿ ಹರಡಿದೆ.

ಗಂಡ-ಹೆಂಡತಿ ಸಿನಿಮಾದ ಮಾದಕ ಹಾಗೂ ಬೋಲ್ಡ್ ನಟನೆಯ ಮೂಲಕ ಪ್ರಸಿದ್ಧಿಗೆ ಬಂದ ನಟಿ ಸಂಜನಾ ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದರು.   ವೇಳೆಯೇ ಸಂಜನಾ ಅಂತರ ಧರ್ಮೀಯ ವಿವಾಹವಾಗಿದ್ದು ಬೆಳಕಿಗೆ ಬಂದಿತ್ತು.

ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಡಾ.ಅಜೀಜ್ ಪಾಷಾ ಜೊತೆ ಸಂಜನಾ ಗೌಪ್ಯವಾಗಿ ಮದುವೆಯಾದ ಸಂಗತಿ ಬೆಳಕಿಗೆ ಬಂದಿತ್ತು. ಜೈಲಿನಿಂದ ವೈದ್ಯಕೀಯ ಕಾರಣದಿಂದ ಜಾಮೀನು ಪಡೆದು ಹೊರಬಂದ ಸಂಜನಾ ಬಳಿಕ ಮಾಧ್ಯಮಗಳ ಎದುರು ತಮ್ಮ ಮದುವೆ ವಿಚಾರವನ್ನು ಒಪ್ಪಿಕೊಂಡಿದ್ದರು.

ಮಾತ್ರವಲ್ಲ ತಮ್ಮದು ಪ್ರೇಮ ವಿವಾಹ ಎಂದಿದ್ದರು. ಆ ಬಳಿಕ ನ್ಯಾಯಾಲಯಕ್ಕೂ ಕೂಡ ಮುಸ್ಲಿಂ ಸಾಂಪ್ರದಾಯಿಕ ದಿರಿಸು ಬುರ್ಖಾ ಧರಿಸಿ ಹಾಜರಾಗುವ ಮೂಲಕ ತಾನು ಪತಿಯ ಧರ್ಮವನ್ನೇ ಅನುಸರಿಸುತ್ತಿರುವುದಾಗಿಯೂ ಹೇಳಿಕೊಂಡಿದ್ದರು.

ಇತ್ತೀಚಿಗಷ್ಟೇ ತಾವು ಪತಿಗಾಗಿ ಪ್ರೀತಿಯಿಂದ ಟ್ಯಾಟೂ ಹಾಕಿಸಿಕೊಂಡಿದ್ದನ್ನು ಹೇಳಿಕೊಂಡು, ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಈಗ ಸಂಜನಾ ವೈವಾಹಿಕ ಬದುಕಿನಲ್ಲಿ ಬಿರುಗಾಳಿ ಎದ್ದಿದ್ದು, ಭಿನ್ನಾಭಿಪ್ರಾಯಗಳ ಕಾರಣಕ್ಕೆ ಸಂಜನಾ ವಿಚ್ಛೇಧನ ಪಡೆಯಲು ಮುಂದಾಗಿದ್ದಾರೆ.

ಮೂಲಗಳ ಪ್ರಕಾರ ಖಾಸಗಿ ಆಸ್ಪತ್ರೆಯಲ್ಲಿರುವ ವೈದ್ಯ ಡಾ.ಅಜೀಜ್ ಪಾಷಾಗೆ ಸಂಜನಾ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದು ಸಾಕಷ್ಟು ಮುಜುಗರಕ್ಕೆ ಕಾರಣವಾಗಿದೆಯಂತೆ. ಅಲ್ಲದೇ ಸಂಜನಾ ಜೈಲು ಸೇರಿದ ವೇಳೆ ಸಂಜನಾ ಪಾರ್ಟಿ ಸೇರಿದಂತೆ ಹಲವು ಸಂಗತಿ ಹೊರಬಿದ್ದಿದೆ. ಈ ಎಲ್ಲ ಕಾರಣಗಳು ಸಂಜನಾ ವೈಯಕ್ತಿಕ ಬದುಕಿನ ಮೇಲೆ ಪರಿಣಾಮ ಬೀರಿದ್ದು, ಸಂಸಾರ ಡಿವೋರ್ಸ್ ಹಂತ ತಲುಪಿದೆಯಂತೆ. ಆದರೆ ಈ ಬಗ್ಗೆ ಸಂಜನಾ ಮಾತ್ರ ಯಾವ ಸಂಗತಿಯನ್ನು ಖಚಿತಪಡಿಸಿಲ್ಲ.

Comments are closed.