ಮನೆಗೆ ಬಂದ್ರು ವಿಶೇಷ ಅತಿಥಿಗಳು: ಮೇಘಾ ಶೆಟ್ಟಿ ಹಂಚಿಕೊಂಡ್ರು ಖುಷಿ ಸುದ್ದಿ!

ಜೊತೆ ಜೊತೆಯಲಿ ಸೀರಿಯಲ್ ನಲ್ಲಿ  ಆರ್ಯವರ್ಧನ್ ಜೊತೆ ಅದ್ದೂರಿ ಮದುವೆ ಸಂಭ್ರಮದಲ್ಲಿರೋ ನಟಿ ಮೇಘಾ ಶೆಟ್ಟಿ ನಿಜಬದುಕಿನಲ್ಲೂ ಡಬ್ಬಲ್ ಖುಷಿ ಮನೆ ಮಾಡಿದೆ. ಮೇಘಾ ಶೆಟ್ಟಿ ಮನೆಗೆ ಎರಡೆರಡು ಐಷಾರಾಮಿ ಕಾರುಗಳು ಎಂಟ್ರಿಕೊಟ್ಟಿದೆ.

ಜೊತೆ ಜೊತೆಯಲಿ ಧಾರಾವಾಹಿಯ ಅನುಸಿರಿಮನೆ ಪಾತ್ರದ ಮೂಲಕ ಮನೆಮಾತಾದ ಮೇಘಾ ಶೆಟ್ಟಿ ಹಾಗೂ ಕುಟುಂಬಸ್ಥರು ಎರಡು ಬೆಲೆಬಾಳುವ ಕಾರು ಖರೀದಿಸಿದ್ದಾರೆ. ನೀಲಿ ಬಣ್ಣದ ಬಿಎಂಡಬ್ಲು ಹಾಗೂ ಕಪ್ಪು ಬಣ್ಣದ ಎಂಜಿ ಹೆಕ್ಟೆರ್ ಕಾರುಗಳು ಮೇಘಾ ಮನೆ ಸೇರಿವೆ.

ಎರಡೆರಡು ಕಾರುಗಳನ್ನು ಖುಷಿಯಿಂದ ಸ್ವಾಗತಿಸಿರೋ ಮೇಘಾ ಶೆಟ್ಟಿ ಈ ಖುಷಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೇಘಾ ಶೆಟ್ಟಿ ಸಂಭ್ರಮಕ್ಕೆ ಕಿರುತೆರೆ ಕಲಾವಿದರು, ಫ್ಯಾನ್ಸ್ ಶುಭಹಾರೈಸಿದ್ದಾರೆ.

ಕಿರುತೆರೆ ಜೊತೆ ಜೊತೆಗೆ ಹಿರಿತೆರೆಗೂ ಪದಾಪರ್ಣೆ ಮಾಡಿರುವ ಮೇಘಾ ಶೆಟ್ಟಿ, ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ ಇನ್ನು ಹಲವು ಸಿನಿಮಾಗಳಿಗೆ ಮೇಘಾ ಶೆಟ್ಟಿ ಸಹಿ ಹಾಕಿದ್ದಾರಂತೆ.

ಇದನ್ನೂ ಓದಿ : ಜೊತೆ ಜೊತೆಯಲಿ ಕಹಾನಿ ಮೇ ಟ್ವಿಸ್ಟ್….! ಮೀರಾ ಪಾತ್ರಧಾರಿಯೇ ರಾಜನಂದಿನಿ…!!

ಇದನ್ನೂ ಓದಿ : ಜೊತೆ ಜೊತೆಯಲಿ ರೋಮ್ಯಾನ್ಸ್ ಮುಂದುವರಿಸಿದ ಅನು-ಆರ್ಯ….! ಮೇಘಾ ಶೆಟ್ಟಿ ಮಾದಕ ಪೋಸ್ ಗೆ ಟೀಕೆ…!!

Comments are closed.