ಸೋಷಿಯಲ್ ಮೀಡಿಯಾದಲ್ಲಿ ದಚ್ಚು ಪರ ಅಭಿಯಾನ…! #westandwithDboss ಎಂದ ನಟ ಆದಿತ್ಯ, ಸಂಸದ ಪಿ.ಸಿ.ಮೋಹನ್…!!

ಸ್ಯಾಂಡಲ್ ವುಡ್ ಲೋಕದಲ್ಲಿ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ ಸೃಷ್ಟಿಸಿದ ವಿವಾದಗಳೇ ಹೊತ್ತಿ ಉರಿಯುತ್ತಿದೆ. ಒಂದೆಡೆ ದರ್ಶನ್ ಮೇಲೆ ಆರೋಪಗಳ ಮೇಲೆ ಆರೋಪಗಳು ಬರುತ್ತಿದ್ದರೇ, ಇನ್ನೊಂದೆಡೆ ದರ್ಶನ್ ಅಭಿಮಾನಿಗಳ ವಿರುದ್ಧನಿರ್ದೇಶಕ ಇಂದ್ರಜಿತ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ಏನೇ ಆದರೂ ನಾವು ದರ್ಶನ್ ಜೊತೆ ಎಂಬ ಟ್ಯಾಗ್ ಲೈನ್ ಜೊತೆ ಒಂದಿಷ್ಟು ನಟರು, ಅಭಿಮಾನಿಗಳು ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಗಲಾಟೆಯ ಬೆನ್ನಿಲ್ಲೇ ಆಯ್ ಸ್ಟ್ಯಾಂಡ್ ವಿತ್ ದರ್ಶನ್  ಅಭಿಯಾನ ಜೋರಾಗಿದೆ.  ಜಗತ್ತೇ ನಿಮ್ಮ ವಿರುದ್ಧ ನಿಂತರೂ ನಾವು ಆ ಜಗತ್ತಿನ ವಿರುದ್ಧ ನಿಲ್ಲುತ್ತೇವೆ ಎಂಬ #ವಿ ಸ್ಟ್ಯಾಂಡ್ ವಿತ್ ಡಿಬಾಸ್ ಅಭಿಯಾನ ಜೋರಾಗಿದೆ.

ಟ್ವಿಟರ್ ಹಾಗೂ ಇನ್ ಸ್ಟಾಗ್ರಾಂನಲ್ಲಿ ಆರಂಭವಾಗಿರೋ ಈ ಅಭಿಯಾನಕ್ಕೆ ದರ್ಶನ್ ಅಭಿಮಾನಿಗಳು ಸಪೋರ್ಟ್ ಮಾಡ್ತಿದ್ದು, ಫೇಸ್ ಬುಕ್, ಟ್ವೀಟರ್ ಹಾಗೂ ಇನ್ ಸ್ಟಾಗ್ರಾಂಗಳಲ್ಲಿ ಎಲ್ಲರೂ ಶೇರ್ ಮಾಡಿ ನಾವಿದ್ದೇವೆ ಎನ್ನುತ್ತಿದ್ದಾರೆ.

ನಟ ಧ್ವನಿರ್ ದರ್ಶನ್ ಬೆಂಬಲಕ್ಕೆ ನಿಂತ ಬೆನ್ನಲ್ಲೇ, ಡೆಡ್ಲಿ ಸೋಮ ಖ್ಯಾತಿಯ ನಟ ಕೂಡ ದರ್ಶನ್ ಜೊತೆಗೆ ನಿಂತಿದ್ದು, ನಿಮ್ಮ ಈ ಸಂಕಷ್ಟದ ಸಮಯದಲ್ಲಿ ಯಾರು ನಿಮ್ಮ ಜೊತೆಗಿರುತ್ತಾರೋ ಇಲ್ಲವೋ ಗೊತ್ತಿಲ್ಲ ನಾನಂತೂ ನಿಮ್ಮ ಜೊತೆಗಿರುತ್ತೇನೆ.

ನಿಮ್ಮ ಸೆಲೆಬ್ರೆಟಿಗಳ ಬೆಂಬಲ ನಿಮಗೆ ಸದಾ ಇದೆ ಎನ್ನುವುದು ನೀವು ನೆನಪಿನಲ್ಲಿಡಿ. ನಿಮ್ಮನ್ನು ನಾವು ಪ್ರೀತಿಸುತ್ತೇವೆ. ನಮ್ಮ ಬೆಂಬಲ ಸದಾ ನಿಮಗಿದೆ ಎಂದಿದ್ದಾರೆ.

ಕೇವಲ ನಟರು ಮಾತ್ರವಲ್ಲ ಸಂಸದ ಪಿ.ಸಿ.ಮೋಹನ್ ಕೂಡ ದರ್ಶನ್ ಪರ ನಿಂತಿದ್ದು, ಟ್ವೀಟ್ ಮಾಡಿದ್ದಾರೆ. ಹಲವು ವರ್ಷಗಳಿಂದ ಚಲನಚಿತ್ರ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ದರ್ಶನ್ ನನಗೆ ಆತ್ಮೀಯರು. ಚಾಲೆಂಜಿಂಗ್ ಸ್ಟಾರ್ ಯಾರಿಗೆ ಕಷ್ಟ ಬಂದರೂ ಜೊತೆಗೆ ನಿಲ್ಲುತ್ತಾರೆ. ಜೊತೆಗೆ ರೈತರ ಹೋರಾಟ, ಪ್ರಾಣಿ-ಪಕ್ಷಿಗಳ ಕಷ್ಟಕ್ಕೆ ಮಿಡಿಯುವವರು ದರ್ಶನ್ ಎಂಬುದು ಎಲ್ಲರಿಗೂ ತಿಳಿದಿದೆ.

ಯಾವುದೇ ಆಧಾರವಿಲ್ಲದೇ ದರ್ಶನ್ ಅವರ ತೇಜೋವಧೆಗಾಗಿ ಈ ರೀತಿ ಆರೋಪ ಮಾಡುತ್ತಿರುವುದು ಸರಿಯಲ್ಲ. ಚಲನಚಿತ್ರದ ರಂಗದ ಹಿರಿಯರು ಹಾಗೂ ವಾಣಿಜ್ಯ ಮಂಡಳಿ ಮಧ್ಯಪ್ರವೇಶಿಸಿ ಎಲ್ಲ ವಿವಾದ ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಚಾಲೆಂಜಿಂಗ್ ಸ್ಟಾರ್  ದರ್ಶನ್ ಮೇಲಿನ ಆರೋಪಗಳು ಒಂದೆಡೆಯಾದರೇ ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಪರ ಅಭಿಮಾನಿಗಳ ಅಭಿಯಾನವೂ ಜೋರಾಗಿದ್ದು, ಇದಕ್ಕೆ ಇನ್ನಷ್ಟು ಸೆಲೆಬ್ರೆಟಿಗಳು, ರಾಜಕಾರಣಿಗಳು ಬೆಂಬಲಿಸುವ ಸಾಧ್ಯತೆ ಇದೆ.

Comments are closed.