ದರ್ಶನ್-ಇಂದ್ರಜಿತ್ ಪ್ರಕರಣದಲ್ಲಿ ಟ್ವಿಸ್ಟ್….! ಇಂದ್ರಜಿತ್ ವಿರುದ್ಧ ದೂರು ದಾಖಲಿಸಿದ ಸಾಮಾಜಿಕ ಕಾರ್ಯಕರ್ತ…!!

ಬೆಂಗಳೂರು: ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ದೇಶಕ ಇಂದ್ರಜಿತ್ ನಡುವಿನ ವಾದ-ವಿವಾದ ತಣ್ಣಗಾಗುವ ಮುನ್ನ ಪ್ರಕರಣಕ್ಕೆ  ಟ್ವಿಸ್ಟ್ ಸಿಕ್ಕಿದೆ. ಇಂದ್ರಜಿತ್ ವಿರುದ್ಧ ಜಾತಿಗಳ ನಡುವೆ ಸಾಮರಸ್ಯ ಕದಡುವ ಆರೋಪ ಮಾಡಿರುವ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬಹ್ರಾಂ ಗೃಹ ಸಚಿವರಿಗೆ ದೂರು ನೀಡಿದ್ದಾರೆ.

ನಟ ದರ್ಶನ್  ಹಾಗೂ ಸ್ನೇಹಿತರರು ಮೈಸೂರಿನ ಸಂದೇಶ್ ಪ್ರಿನ್ಸ್ ಹೊಟೇಲ್ ನಲ್ಲಿ ದಲಿತ ವೇಟರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಆರೋಪಿಸಿದ್ದರು. ಮಾತ್ರವಲ್ಲ  ಈ ಪ್ರಕರಣವನ್ನು ಮೈಸೂರಿನ ಪೊಲೀಸರು ಮುಚ್ಚಿ ಹಾಕಿದ್ದಾರೆ ಎಂದು ಆರೋಪಿಸಿದ್ದರು.

ಈ ಎಲ್ಲ ಬೆಳವಣಿಗೆಗಳನ್ನು ಆಧರಿಸಿ ಇಂದ್ರಜಿತ್ ಲಂಕೇಶ್ ವಿರುದ್ಧ ಗೃಹ ಸಚಿವ ಬೊಮ್ಮಾಯಿಯವರಿಗೆ ದೂರು ನೀಡಿರುವ ಸಾಮಾಜಿಕ ಕಾರ್ಯಕರ್ತ ಟಿ.ಜಿ.ಅಬ್ರಹಾಂ ಪದೇ ಪದೇ ದಲಿತ ಎನ್ನುವ ಪದ ಬಳಕೆ ಮೂಲಕ ಇಂದ್ರಜಿತ್ ಲಂಕೇಶ್ ದಲಿತರಿಗೆ ಅವಮಾನ ಮಾಡಿದ್ದಾರೆ.

ಅಲ್ಲದೇ ಜಾತಿ-ಜಾತಿಗಳ ನಡುವೆ ವೈಷಮ್ಯ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ಸುಳ್ಳು ಹೇಳಿಕೆ ಆರೋಪಗಳನ್ನು ಮಾಡುವ ಮೂಲಕ ಇಂದ್ರಜಿತ್, ಅಪರಾಧ ಎಸಗಿದ್ದಾರೆ . ಹೀಗಾಗಿ ಇಂದ್ರಜಿತ್ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಅಲ್ಲದೇ ಇಂದ್ರಜಿತ್ ಮೈಸೂರಿನ ಪೊಲೀಸರಿಗೆ ಅವಮಾನ ಮಾಡಿದ್ದಾರೆ ಎಂದು ಟಿ.ಜಿ.ಅಬ್ರಹಾಂ  ಆರೋಪಿಸಿದ್ದಾರೆ. 25 ಕೋಟಿ ರೂಪಾಯಿ ಸಾಲದ ವಿಚಾರ ಚರ್ಚೆಗೆ ಗ್ರಾಸವಾಗಿದ್ದಾಗ ಪ್ರಕರಣದ ಮಧ್ಯೆ ಪ್ರವೇಶಿಸಿದ್ದ ಇಂದ್ರಜಿತ್ ದರ್ಶನ್ ಹಾಗೂ ಸ್ನೇಹಿತರ ವಿರುದ್ಧ ಮೈಸೂರಿನ ಹೊಟೇಲ್ ನಲ್ಲಿ ವೇಟರ್ ಮೇಲೆ ಹಲ್ಲೆ ಮಾಡಿದ ಆರೋಪ ಮಾಡಿದ್ದರು.

ಮಾತ್ರವಲ್ಲ ಇದೇ ವಿಚಾರ ದರ್ಶನ್ ಮತ್ತು ಇಂದ್ರಜಿತ್ ನಡುವೆ ವಾಗ್ವಾದಕ್ಕೆ ಕಾರಣವಾಗಿ ಇಂದ್ರಜಿತ್ ಆಡಿಯೋಗಳನ್ನು ರಿಲೀಸ್ ಮಾಡಿದ್ದರು. ಒಟ್ಟಿನಲ್ಲಿ ನಟ ದರ್ಶನ್ ಹಾಗೂ ನಿರ್ದೇಶಕ ಇಂದ್ರಜಿತ್ ನಡುವಿನ ವಿವಾದ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸಧ್ಯಕ್ಕೆ ತಣ್ಣಗಾಗುವ ಲಕ್ಷಣವೇ ಕಾಣುತ್ತಿಲ್ಲ.

Comments are closed.