Sanju Samson Breaks Silence : ಟಿ20 ವಿಶ್ವಕಪ್’ನಲ್ಲಿ ಸಿಗದ ಸ್ಥಾನ; ಮೌನ ಮುರಿದ ಸಂಜು, ರಾಹುಲ್, ಪಂತ್ ಬಗ್ಗೆ ಸ್ಯಾಮ್ಸನ್ ಸ್ಫೋಟಕ ಮಾತು

ಬೆಂಗಳೂರು: (Sanju Samson breaks silence) ಐಸಿಸಿ ಟಿ20 ವಿಶ್ವಕಪ್’ನಲ್ಲಿ ಆಡಲಿರುವ ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್ ಅವರಿಗೆ ಸ್ಥಾನ ಸಿಗದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಕೆಲ ಮಾಜಿ ಕ್ರಿಕೆಟಿಗರೂ ಕೂಡ ಸ್ಯಾಮ್ಸನ್’ಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದಿರುವುದನ್ನು ಪ್ರಶ್ನಿಸಿದ್ದಾರೆ. ಸಾಮಾಜಿತ ಜಾಲತಾಣದಲ್ಲಂತೂ ಸ್ಯಾಮ್ಸನ್ ಪರವಾಗಿ ಕ್ರಿಕೆಟ್ ಪ್ರಿಯರು ಬ್ಯಾಟಿಂಗ್ ಮಾಡುತ್ತಿದ್ದು, ಬಿಸಿಸಿಐ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಮತ್ತು ದೆಹಲಿಯ ರಿಷಭ್ ಪಂತ್ (Rishab Pant) ಅವರಿಗಿಂತ ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಸಂಜು ಸ್ಯಾಮ್ಸನ್ ಅರ್ಹರಾಗಿದ್ದರು ಎಂಬ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಲಾಗ್ತಿದೆ.

ತಮ್ಮ ಬಗ್ಗೆ ನಡೆಯುತ್ತಿರುವ ಈ ಚರ್ಚೆಯ ಕುರಿತಾಗಿ ಸಂಜು ಸ್ಯಾಮ್ಸನ್ ಕೊನೆಗೂ ಮೌನ ಮುರಿದಿದ್ದಾರೆ. ಸಾಮ್ಸನ್ ಆಡಿರುವ ಮಾತುಗಳನ್ನು ಕೇಳಿ ಕ್ರಿಕೆಟ್ ಪ್ರಿಯರು ಮೂಕವಿಸ್ಮತರಾಗಿದ್ದಾರೆ. ಅಷ್ಟಕ್ಕೂ ಸ್ಯಾಮ್ಸನ್ ಹೇಳಿದ್ದೇನು ಗೊತ್ತಾ..?

“ಕೆ.ಎಲ್ ರಾಹುಲ್ ಬದಲು ಸಂಜು ಸ್ಯಾಮ್ಸನ್ ಸ್ಥಾನ ಪಡೆಯಬೇಕಿತ್ತು, ರಿಷಭ್ ಪಂತ್ ಸ್ಥಾನದಲ್ಲಿ ಸಂಜು ಸ್ಯಾಮ್ಸನ್’ಗೆ ಅವಕಾಶ ನೀಡಬೇಕಿತ್ತು ಎಂಬಿತ್ಯಾದಿ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿವೆ. ಅರೆ.. ಕೆ.ಎಲ್ ರಾಹುಲ್ ಮತ್ತು ರಿಷಭ್ ಪಂತ್ ನನ್ನದೇ ಭಾರತ ತಂಡದ ಪರ ಆಡುತ್ತಿದ್ದಾರೆ. ನನ್ನ ಸ್ವಂತ ತಂಡದ ಆಟಗಾರರ ವಿರುದ್ಧವೇ ನಾನು ಸ್ಪರ್ಧೆ ನಡೆಸಿದರೆ, ಅದು ನಾನು ದೇಶವನ್ನು ನಿರಾಸೆಗೊಳಿಸಿದಂತೆ, ನನ್ನ ಭಾರತ ತಂಡವನ್ನು ನಿರಾಸೆಗೊಳಿಸಿದಂತೆ. ನಾನು ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸುತ್ತೇನೆ”.

  • ಸಂಜು ಸ್ಯಾಮ್ಸನ್, ಕ್ರಿಕೆಟಿಗ.

ಐದು ವರ್ಷಗಳ ನಂತರ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿದ್ದೇ ನನ್ನ ಅದೃಷ್ಟ ಎಂದು ಸ್ಯಾಮ್ಸನ್ ಇದೇ ವೇಳೆ ಹೇಳಿದ್ದಾರೆ. “ಐದು ವರ್ಷಗಳ ಹಿಂದೆ ಭಾರತ ಜಗತ್ತಿನ ಶ್ರೇಷ್ಠ ತಂಡವಾಗಿತ್ತು, ಈಗಲೂ ಶ್ರೇಷ್ಠ ತಂಡವಾಗಿದೆ. ಅಂತಹ ತಂಡದಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆಯುವುದೇ ದೊಡ್ಡ ಗೌರವ” ಎಂದು ಸಂಜು ಸ್ಯಾಮ್ಸನ್ ಕ್ರಿಕೆಟ್ ಸಂದರ್ಶನವೊಂದರಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಸಂಜು ಸ್ಯಾಮ್ಸನ್ ಅವರನ್ನು ನ್ಯೂಜಿಲೆಂಡ್ ‘ಎ‘ ವಿರುದ್ಧದ ಏಕದಿನ ಸರಣಿಗೆ ಭಾರತ ‘ಎ‘ ತಂಡದ ನಾಯಕನ್ನಾಗಿ ಆಯ್ಕೆ ಮಾಡಲಾಗಿದೆ. ಭಾರತ ‘ಎ‘ ಮತ್ತು ನ್ಯೂಜಿಲೆಂಡ್ ‘ಎ‘ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿ ಮುಂದಿನ ವಾರ ಚೆನ್ನೈನಲ್ಲಿ ಆರಂಭವಾಗಲಿದೆ. ಮೊದಲ ಪಂದ್ಯ ಸೆಪ್ಟೆಂಬರ್ 22ರಂದು, 2ನೇ ಪಂದ್ಯ ಸೆಪ್ಟೆಂಬರ್ 25 ಹಾಗೂ ಮೂರನೇ ಪಂದ್ಯ ಸೆಪ್ಟೆಂಬರ್ 27ರಂದು ನಡೆಯಲಿದೆ. ಮೂರೂ ಪಂದ್ಯಗಳಿಗೂ ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಇದನ್ನೂ ಓದಿ : Sanju Samson: ಸಂಜು ಸ್ಯಾಮ್ಸನ್ ಬಾಯಿಗೆ ತುಪ್ಪ ಸವರಿದ ಬಿಸಿಸಿಐ ವಿರುದ್ಧ ಫ್ಯಾನ್ಸ್ ಗರಂ

ಇದನ್ನೂ ಓದಿ : Vinay Kumar : MI ಎಮಿರೇಟ್ಸ್ ತಂಡಕ್ಕೆ ದಾವಣಗೆರೆ ಎಕ್ಸ್‌ಪ್ರೆಸ್ ವಿನಯ್ ಕುಮಾರ್ ಬೌಲಿಂಗ್ ಕೋಚ್

Sanju Samson finally breaks silence on KL Rahul Rishab Pant

Comments are closed.